ನವದೆಹಲಿ: ಬ್ರಾಂಡ್ ಫೈನಾನ್ಸ್ ಸಂಸ್ಥೆಯು 2022ರ ವಿಶ್ವದ ಅತ್ಯಂತ ಮೌಲ್ಯಯುತವಾದ ಟಾಪ್ 50 ಖಾಸಗಿ ಕಂಪನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಪಟ್ಟಿಯಲ್ಲಿ ಅಮೆರಿಕ ಮೂಲದ ಆ್ಯಪಲ್ ಕಂಪನಿ, ವಿಶ್ವದ ಅತ್ಯಂತ ಮೌಲ್ಯಯುತ ಬ್ರಾಂಡ್ ಎಂಬ ಹೆಗ್ಗಳಿಕೆಯೊಂದಿಗೆ ಅಗ್ರಸ್ಥಾನದಲ್ಲಿದೆ.
2021ರಲ್ಲಿದ್ದ ಕಂಪನಿಯ ಮೌಲ್ಯಕ್ಕೆ ಹೋಲಿಸಿದರೆ 2022ರಲ್ಲಿ ಕಂಪನಿಯ ಮೌಲ್ಯ ಶೇ. 35ರಷ್ಟು ಹೆಚ್ಚಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
2ನೇ ಸ್ಥಾನದಲ್ಲಿ ಅಮೆಜಾನ್, 3ನೇ ಸ್ಥಾನದಲ್ಲಿ ಗೂಗಲ್, 4ನೇ ಸ್ಥಾನದಲ್ಲಿ ಮೈಕ್ರೋಸಾಫ್ಟ್, 5ನೇ ಸ್ಥಾನದಲ್ಲಿ ವಾಲ್ ಮಾರ್ಟ್, 6ನೇ ಸ್ಥಾನದಲ್ಲಿ ಸ್ಯಾಮ್‌ಸಂಗ್ ಮತ್ತು 7ನೇ ಸ್ಥಾನದಲ್ಲಿ ಫೇಸ್‌ಬುಕ್ ಕಂಪನಿಗಳು ಇವೆ.
ಈ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಕಂಪನಿಯೆಂದರೆ ಇನ್ಫೋಸಿಸ್. ಅದು ಪಟ್ಟಿಯಲ್ಲಿ 42ನೇ ಸ್ಥಾನದಲ್ಲಿದೆ.