Advertisement

information Technology Appointment: ಬೆಂಗಳೂರ‌ಲ್ಲೇ ಹೆಚ್ಚಿನ ಉದ್ಯೋಗ ನಿರೀಕ್ಷೆ

04:17 AM Nov 28, 2024 | Team Udayavani |

ಹೊಸದಿಲ್ಲಿ: ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಕಡಿಮೆ ಆಗುತ್ತಿವೆ ಎಂಬ ವರದಿಗಳ ಬೆನ್ನಲ್ಲೇ ಮುಂದಿನ 6 ತಿಂಗಳ ಅವಧಿಯಲ್ಲಿ ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಹೆಚ್ಚಿನ ಅವಕಾಶಗಳು ಲಭಿಸುವ ಸಾಧ್ಯತೆ ಇದೆ. ಎ.ಐ., ಮಷಿನ್‌ ಲರ್ನಿಂಗ್‌ಗಳಲ್ಲಿ ಉದ್ಯೋಗದ ಅವಕಾಶಗಳು ಮತ್ತು ನೇಮಕ ಹೆಚ್ಚಾಗಲಿವೆ ಎಂದು ಅಧ್ಯಯನವೊಂದರಲ್ಲಿ ಬೆಳಕಿಗೆ ಬಂದಿದೆ.

Advertisement

ಈ ನಿಟ್ಟಿನಲ್ಲಿ ಶೇ.62ರಷ್ಟು ನೇಮಕ ನಡೆಯುವ ಬೆಂಗಳೂರು ಅಗ್ರಪಂಕ್ತಿ ಯಲ್ಲಿ ಇರಲಿದೆ ಎಂದು “ಕ್ವೆಸ್‌ ಕ್ರಾಫ್’ ಎಂಬ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ ಉಲ್ಲೇಖೀಸಲಾಗಿದೆ. ಹೈದರಾಬಾದ್‌ನಲ್ಲಿ ಶೇ.43.5, ಪುಣೆಯಲ್ಲಿ ಶೇ.10ರಷ್ಟು ನೇಮಕ ನಡೆಯಲಿದೆ ಎನ್ನಲಾಗಿದೆ.

2025ರ 2ನೇ ತ್ತೈಮಾಸಿಕದಲ್ಲಿ ಟೆಸ್ಟಿಂಗ್‌, ನೆಟ್‌ವರ್ಕಿಂಗ್‌ ಕ್ಷೇತ್ರದಲ್ಲಿ ಉದ್ಯೋ ಗದ ಅವಕಾಶಗಳು ಶೇ.75 ರಷ್ಟು ಹೆಚ್ಚಾಗಲಿವೆ. ಜನರೇಟಿವ್‌ ಎ.ಐ., ಡೀಪ್‌ಟೆಕ್‌ ಮತ್ತು ಕ್ವಾಟಂ ಕಂಪ್ಯೂ ಟಿಂಗ್‌ ಕ್ಷೇತ್ರದಲ್ಲಿ 2030ರ ಒಳಗಾಗಿ 10 ಲಕ್ಷ ಉದ್ಯೋಗ ಸೃಷ್ಟಿ ಯಾಗಲಿವೆ ಎನ್ನಲಾಗಿದೆ. ದೇಶದಲ್ಲಿ ಡಿಜಿಟಲ್‌ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಆಸಕ್ತಿಯಿಂದ ಹಾಗೂ ಯುವಕರು ಈ ಕ್ಷೇತ್ರದತ್ತ ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದರಿಂದ ಈ ಬೆಳವಣಿಗೆ ಉಂಟಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next