Advertisement

ಮಾಹಿತಿ ಛೇದನಕ್ಕೆ ಪರಮಾಧಿಕಾರ ನೀಡಿಲ್ಲ

12:30 AM Dec 31, 2018 | Team Udayavani |

ಹೊಸದಿಲ್ಲಿ: ದೇಶದಲ್ಲಿ ಬಳಕೆಯಲ್ಲಿರುವ ಕಂಪ್ಯೂಟರ್‌ಗಳಲ್ಲಿನ ಮಾಹಿತಿಗಳ ಮೇಲೆ ನಿಗಾ ವಹಿಸಲು 10 ತನಿಖಾ ಸಂಸ್ಥೆಗಳಿಗೆ ಕೇಂದ್ರ ಸರಕಾರಸೂಚನೆ ನೀಡಿದೆಯೇ ಹೊರತು ಆ ಸಂಸ್ಥೆಗಳಿಗೆ ಯಾವುದೇ ಕಂಪ್ಯೂಟರ್‌ನಲ್ಲಿರುವ ಮಾಹಿತಿಯನ್ನು ನಿಯಂತ್ರಿಸುವ ಕುರಿತಾದ ಪರಮೋಚ್ಛ ಅಧಿಕಾರವನ್ನು ನೀಡಿಲ್ಲ ಎಂದು ಕೇಂದ್ರ ಗೃಹ ಇಲಾಖೆಯ ಹಿರಿಯ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ. 

Advertisement

ಗುಪ್ತಚರ ಇಲಾಖೆ, ಜಾರಿ ನಿರ್ದೇಶನಾಲಯ, ಸಿಬಿಐ ಸೇರಿದಂತೆ 10 ತನಿಖಾ ಸಂಸ್ಥೆಗಳಿಗೆ ಡಿ. 20ರಂದು ಕೇಂದ್ರ ಸರಕಾರಈ ಸೂಚನೆ ನೀಡಿತ್ತು. ಆದರೆ ಈ ನಡೆ ಹಲವಾರು ಟೀಕೆಗಳಿಗೆ ಕಾರಣವಾಗಿತ್ತು. ದತ್ತಾಂಶಗಳ ಮೇಲೆ ಇಂಥ ಅನಗತ್ಯ ಪರಿವೀಕ್ಷಣೆ ಬೇಕಿಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದ್ದವು. 

ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಹಿರಿಯ ಅಧಿಕಾರಿ, ಕಂಪ್ಯೂಟರ್‌ ದತ್ತಾಂಶಗಳ ಮೇಲೆ ಹತೋಟಿ ಸಾಧಿಸಲು ಯಾವುದೇ ಸಂಸ್ಥೆಗೆ ಪರಮೋತ್ಛ ಅಧಿಕಾರ ನೀಡುವ ಯಾವುದೇ ಕಾನೂನಾಗಲೀ, ನಿಯಮವಾಗಲೀ ಜಾರಿಗೆ ಬಂದಿಲ್ಲ ಎಂದು ಹೇಳಿದ್ದಾರೆ. ಇದೇ ವಿಚಾರದ ಬಗ್ಗೆ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ವಾಗ್ವಾದಕ್ಕೂ ಕಾರಣವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next