Advertisement

“ಸೇನಾ’ಭರ್ತಿಗೆ “ಮಾಹಿತಿ ಅಭಿಯಾನ’

12:06 PM Dec 13, 2021 | Team Udayavani |

ಗದಗ: ಗ್ರಾಮೀಣ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಮೂಡಿಸುವುದರ ಜೊತೆಗೆ ಸೇನೆಯಲ್ಲಿ ಭರ್ತಿಗೆ ಪ್ರೇರೇಪಿಸುವ ನಿಟ್ಟಿನಲ್ಲಿ ಜಿಲ್ಲಾ ಮಾಜಿ ಸೈನಿಕರ ಸಂಘ ವಿಶಿಷ್ಟ ಹೆಜ್ಜೆ ಇರಿಸಿದ್ದು, ಜಿಲ್ಲೆಯಶಾಲಾ-ಕಾಲೇಜುಗಳಲ್ಲಿ “ಸೇನಾ ಮಾಹಿತಿ ಅಭಿಯಾನ’ಕ್ಕೆ ಮುಂದಾಗಿದೆ.

Advertisement

ಇತ್ತೀಚಿನ ದಿನಗಳಲ್ಲಿ ಯುವಕ, ಯುವತಿಯರಲ್ಲಿ ಸೇನೆಗೆ ಸೇರುವ ಉತ್ಸಾಹವಿದ್ದರೂ ಪೂರ್ವಸಿದ್ಧತಾ ಕೊರತೆಯಿಂದ ಅವರು ಸೇನಾ ಪಡೆಗಳಿಗೆಭರ್ತಿಯಾಗುವ ಮಹತ್ವಾಕಾಂಕ್ಷೆ ಕೈಗೂಡುತ್ತಿಲ್ಲ. ಈಕೊರಗು ನಿವಾರಿಸುವ ನಿಟ್ಟಿನಲ್ಲಿ ಜಿಲ್ಲಾ ಮಾಜಿ ಸೈನಿಕರಸಂಘದ “ಸೇನಾ ಮಾಹಿತಿ ಅಭಿಯಾನ’ ಆರಂಭಿಸಿದೆ.ಈ ಕಾರ್ಯಕ್ರಮದಡಿ ಜಿಲ್ಲೆಯ ನಿಡಗುಂದಿ ಮತ್ತು ಮಾರನಬಸರಿ ಸರಕಾರಿ ಪ್ರೌಢಶಾಲೆಗಳಲ್ಲಿ ಮಾಹಿತಿ ಕಾರ್ಯಾಗಾರ ನಡೆಸಿದ್ದು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಪೋಷಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎನ್ನಲಾಗಿದೆ.

ಅಭಿಯಾನದ ಉದ್ದೇಶವೇನು?: ಬ್ರಿಟಿಷ್‌ ಆಡಳಿತದಲ್ಲೇ ಕೂರ್ಗ್‌ ರೆಜಿಮೆಂಟ್‌ ಇದ್ದಿದ್ದರಿಂದ ಕೊಡಗಿನಲ್ಲಿ ಮನೆ ಮನೆಗೆ ಒಬ್ಬರು ಯೋಧರಿದ್ದಾರೆ. ವಿಜಯಪುರ, ಬೆಳಗಾವಿ ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯೋಧರಿದ್ದಾರೆ. ಅವರಿಂದ ಪ್ರೇರಣೆಗೊಂಡು ಅನೇಕರು ಕಾಲಕಾಲಕ್ಕೆ ಸೇನೆಗೆ ಸೇರುತ್ತಾರೆ. ಆದರೆ, ಈ ಬೆಳವಣಿಗೆ ಇತರೆ ಜಿಲ್ಲೆಗಳಲ್ಲಿ ತೀರಾ ಕಡಿಮೆ. ಇದರಿಂದ ಗದಗ ಕೂಡಾ ಹೊರತಾಗಿಲ್ಲ. ಈ ಕೊರಗು ನಿವಾರಿಸಲು ವಿಶಿಷ್ಟ ಪ್ರಯತ್ನಕ್ಕೆ ಮಾಜಿ ಯೋಧರು ಮುಂದಾಗಿದ್ದಾರೆ.

ಪ್ರೌಢಶಾಲೆ ಮತ್ತು ಕಾಲೇಜು ಹಂತಕ್ಕೆ ಪೂರಕವಾಗಿ ಎರಡು ಹಂತಗಳಲ್ಲಿ ಕಾರ್ಯಾಗಾರದ ರೂಪುರೇಷೆ ಮತ್ತು ನಿವೃತ್ತ ಸುಬೇದಾರ್‌ಗಳಾದ ಸುಧೀರ್‌ ಘೋರ್ಪಡೆ, ಜಿ.ಬಿ.ಮಾಲಗಿತ್ತಿಮಠ, ವಿ.ಬಿ.ಬಿಂಗಿ, ಎಸ್‌.ಆರ್‌.ಪಾಟೀಲ, ಸಿ.ಜಿ.ಸೊನ್ನದ್‌, ನಿವೃತ್ತ ಹಾನರ್‌ ಕ್ಯಾಪ್ಟನ್‌ ಎಚ್‌.ಬ.ಜಂಗಣ್ಣವರ ಸೇರಿದಂತೆ 10 ಜನ ಸಂಪನ್ಮೂಲ ವ್ಯಕ್ತಿಗಳ ಮೂಲಕ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ ಇಮ್ಮಡಿಗೊಳಿಸುವುದು, ಭೂ ಸೇನೆ, ವಾಯು ಸೇನೆ ಹಾಗೂ ನೌಕಾ ಸೇನೆಗಳ ಕಾರ್ಯವೈಖರಿ,ಉದ್ಯೋಗಾವಕಾಶಗಳು, ನೇಮಕಾತಿ ವಿಧಾನಗಳು, ಶೈಕ್ಷಣಿಕ ಅರ್ಹತೆ, ವಯೋಮಿತಿ, ಎನ್‌ಸಿಸಿ, ಕ್ರೀಡೆ ಮತ್ತು ಯುವತಿಯರಿಗೆ ಇರುವ ವಿನಾಯಿತಿಗಳು, ನೇಮಕಾತಿಗೆ ಅಗತ್ಯವಿರುವ ಪೂರ್ವ ಸಿದ್ಧತೆಗಳನ್ನು ಪಿಪಿಟಿ ಹಾಗೂ ಚಿತ್ರಪಟಗಳ ಮೂಲಕ ಮನದಟ್ಟು ಮಾಡುವ ಪ್ರಯತ್ನ ನಡೆಸಿದ್ದಾರೆ.

ಇದರಿಂದ ಉದ್ಯೋಗವಕಾಶಗಳು ಹೆಚ್ಚುವುದರಜೊತೆಗೆ ಪ್ರತಿಭಾನ್ವಿತ, ಸದೃಢ ಯುವಕರನ್ನು ಸೈನ್ಯಕ್ಕೆ ಕೊಡುಗೆಯಾಗಿ ನೀಡುವುದು ನಮ್ಮ ಸದುದ್ದೇಶ ಎನ್ನುತ್ತಾರೆ ಸಂಘದ ಅಧ್ಯಕ್ಷ ಬಿ.ಜಿ.ಮಾಲಗಿತ್ತಿಮಠ. ಅದರೊಂದಿಗೆ ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳ ಆಸಕ್ತಿಯನ್ನು ಗಮನಿಸಿ ಅರ್ಹರಿಗೆ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಉಚಿತ 4-5 ದಿನಗಳ ಪೂರ್ವ ಸಿದ್ಧತಾ ಶಿಬಿರಗಳನ್ನುಹಮ್ಮಿಕೊಳ್ಳಲು ಉದ್ದೇಶಿಸಿದೆ. ಈ ವೇಳೆ ದೈಹಿಕ ಕ್ಷಮತೆ ಹೆಚ್ಚಿಸಿಕೊಳ್ಳುವುದು ಮತ್ತು ಸೇನಾ ಪರೀಕ್ಷೆ ಎದುರಿಸುವ ನಿಟ್ಟಿನಲ್ಲಿ ಅವರನ್ನು ಸಿದ್ಧಗೊಳಿಸಲು ಸಂಘ ಉದ್ದೇಶಿಸಿದೆ ಎನ್ನಲಾಗಿದೆ.

Advertisement

ಮಾಹಿತಿ ಕಾರ್ಯಾಗಾರ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆಮತ್ತು ಪದವಿ ಪೂರ್ವ ಕಾಲೇಜು ಶಿಕ್ಷಣ ಇಲಾಖೆಯಿಂದ ಪೂರ್ವಾನುಮತಿ ಪಡೆದಿದ್ದೇವೆ. ಈಗಾಗಲೇ ಮಾರನಬಸರಿಮತ್ತು ನಿಡಗುಂದಿಯಲ್ಲಿ ಮಾಹಿತಿಕಾರ್ಯಕ್ರಮ ನಡೆಸಿದ್ದು, ವಿದ್ಯಾರ್ಥಿಗಳು,ಶಿಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ವಾರದಲ್ಲಿ ಎರಡು ಶಾಲಾ-ಕಾಲೇಜುಗಳಲ್ಲಿ ಈ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದ್ದೇವೆ.  –ಬಿ.ಜಿ.ಮಾಲಗಿತ್ತಿಮಠ, ಅಧ್ಯಕ್ಷ, ಜಿಲ್ಲಾ ಮಾಜಿ ಸೈನಿಕರ ಸಂಘ.

ಸೇನೆ ಎಂದರೆ ಎಲ್ಲರ ಕಣ್ಮುಂದೆ ಬರುವುದು ಬಂದೂಕು ಹಿಡಿದು ಗಡಿ ಕಾಯುವ ಯೋಧರು. ಅದರೊಂದಿಗೆ ನೂರಾರು ಹುದ್ದೆಗಳಿವೆ. ಮೆಕಾನಿಕಲ್‌, ನರ್ಸಿಂಗ್‌ ಅಸಿಸ್ಟಂಟ್‌, ವೈದ್ಯರು, ಎಂಜಿಯರಿಂಗ್‌ ಆದವರಿಗೆ ಹಾಗೂ ಸೇನೆ ಸೇರಿದ ಬಳಕವೂ ವೇತನಸಹಿತ ಉನ್ನತ ಶಿಕ್ಷಣ ಪಡೆಯಲು ಅವಕಾಶಗಳಿವೆ. ಆರಂಭದಲ್ಲೇ 20 ರಿಂದ 40 ಸಾವಿರ ರೂ. ವೇತನದೊರೆಯುತ್ತವೆ. ಈ ಬಗ್ಗೆ ರಜೆ ಮೇಲೆ ಜಿಲ್ಲೆಗೆ ಬರುವಹಾಲಿ ಯೋಧರು, ಸೇನಾ ಧಿಕಾರಿಗಳ ಮೂಲಕ ಮಾಹಿತಿಕಲ್ಪಿಸಿ, ಜಿಲ್ಲೆಯ ಯುವಜನರನ್ನು ಹೆಚ್ಚಿನ ಸಂಖ್ಯೆಯಲ್ಲಿಸೇನೆಯತ್ತ ಪ್ರೇರೇಪಿಸುವ ನಿಸ್ವಾರ್ಥ ಪ್ರಯತ್ನ ನಮ್ಮದು. – ಸುಧಿಧೀರ್‌ ಘೋರ್ಪಡೆ, ನಿವೃತ್ತ ಸುಬೇದಾರ್‌

-ವೀರೇಂದ್ರ ನಾಗಲದಿನ್ನಿ

Advertisement

Udayavani is now on Telegram. Click here to join our channel and stay updated with the latest news.

Next