Advertisement

ಮನ್ನಾ ವಿಳಂಬಕ್ಕೆ ಈಗ ಸಾಫ್ಟ್ ವೇರ್‌ ಅಸಹಕಾರ

06:00 AM Oct 31, 2018 | Team Udayavani |

ಬೆಂಗಳೂರು: ರೈತರ ಸಾಲ ಮನ್ನಾ ಕುರಿತು ಕಂತು ಬಿಡುಗಡೆಗೆ ಆರ್ಥಿಕ ಇಲಾಖೆ ಸಿದಟಛಿವಿದ್ದರೂ, ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವ ಡಿಸಿಸಿ ಬ್ಯಾಂಕುಗಳೇ ಈಗ ಮಾಹಿತಿ ನೀಡದೆ ಮನ್ನಾ ಲಾಭ ರೈತರಿಗೆ ತಲುಪುತ್ತಿಲ್ಲ. ಸಾಲ ಮನ್ನಾ ಘೋಷಣೆ ಮಾಡಿ ಒಂದೂವರೆ ತಿಂಗಳಾಗಿದೆ. ಆದರೂ, ಇನ್ನೂ ಮನ್ನಾ ಕಾರ್ಯರೂಪಕ್ಕೆ ಬಂದಿಲ್ಲ, ಜತೆಗೆ ಸದ್ಯ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಈ ವಿಷಯ ಭಾರಿ ಚರ್ಚೆಗೂ ಗ್ರಾಸವಾಗುತ್ತಿದೆ. ಆದರೆ, ಇದಕ್ಕೆ ಜಿಲ್ಲಾ ಸಹಕಾರಿ ಬ್ಯಾಂಕ್‌ಗಳು ಮಾಹಿತಿ ಕೊಡುತ್ತಿಲ್ಲ ಎನ್ನುವ ಕಾರಣವನ್ನು ಸರ್ಕಾರ ಈಗ ನೀಡಿದೆ. ವಿಳಂಬಕ್ಕೆ ಕಾಡುತ್ತಿರುವುದು ಸಾಫ್ಟ್ವೇರ್‌ ಎಂದು ಬ್ಯಾಂಕ್‌ಗಳ ಮೂಲಗಳು ಹೇಳುತ್ತಿವೆ.

Advertisement

ಕ್ಲೈಮ್‌ ಸಿದ್ಧ ಪಡಿಸಲು ಸರ್ಕಾರ ರೂಪಿಸಿದ್ದ ಸಾಫ್ಟ್ವೇರ್‌ನ್ನು ಬ್ಯಾಂಕ್‌ಗಳಿಗೆ ಸರಬರಾಜು ಮಾಡಿದ್ದೇ ತಡವಾಗಿ. ಜತೆಗೆ ನಿರ್ವಹಣೆ ಮಾಡಲು ಪ್ರಾರಂಭಿಕ ತಾಂತ್ರಿಕ ಸಮಸ್ಯೆ (ಸಿಬ್ಬಂದಿಗೆ ಅಪ್‌ಲೋಡಿಂಗ್‌, ಡಾಟಾಬೇಸ್‌ ನಂತಹ ವಿಷಯಗಳ ಪರಿಣತಿ ಇಲ್ಲದಿರುವುದು) ಉಂಟಾಗಿ ಕಷ್ಟವಾಗುತ್ತಿದೆ. ಹೀಗಾಗಿ, ಕ್ಲೈಮ್‌ ಸಲ್ಲಿಸಲು ಆಗುತ್ತಿಲ್ಲ ಎಂಬುದು ಜಿಲ್ಲಾ ಸಹಕಾರ ಬ್ಯಾಂಕುಗಳ ವಾದ.
ಒಟ್ಟಾರೆ, ಸರ್ಕಾರ ಮತ್ತು ಬ್ಯಾಂಕ್‌ಗಳ ನಡುವಿನ ಸಾಫ್ಟ್ ವೇರ್‌ ಸಮನ್ವಯತೆ ಕೊರತೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ!

ಸಹಕಾರ ಸಂಘ ಹಾಗೂ ಬ್ಯಾಂಕುಗಳಲ್ಲಿ 22.65 ಲಕ್ಷ ರೈತರು ಪಡೆದಿರುವ ಒಂದು ಲಕ್ಷ ರೂ.ವರೆಗಿನ 9,448 ಕೋಟಿ ರೂ. ಸಾಲ ಮನ್ನಾ ಮಾಡಲು ತೀರ್ಮಾನಿಸಿ ರಾಜ್ಯ ಸರ್ಕಾರ ಜುಲೈ ಹಾಗೂ ಆಗಸ್ಟ್‌ ತಿಂಗಳ ಕಂತು 312 ಕೋಟಿ ರೂ., ಸೆಪ್ಟೆಂಬರ್‌ ತಿಂಗಳ ಕಂತು 236 ಕೋಟಿ ರೂ. ಹಾಗೂ ಅಕ್ಟೋಬರ್‌ ಕಂತು 203 ಕೋಟಿ ರೂ. ಬಿಡುಗಡೆಗೆ ಹಣ ಹೊಂದಾಣಿಕೆ ಮಾಡಿಕೊಳ್ಳುವಂತೆ
ಆರ್ಥಿಕ ಇಲಾಖೆಗೆ ಸೂಚಿಸಿತ್ತು. ನಂತರ ಫೆಬ್ರವರಿ-1100 ಕೋಟಿ ರೂ., ಮಾರ್ಚ್‌-2000 ಕೋಟಿ ರೂ., ಮೇ-1700 ಕೋಟಿ ರೂ. ಜೂನ್‌-1500 ಕೋಟಿ ರೂ. ಕ್ಲೈಮ್‌ ಬರಲಿರುವ ಬಗ್ಗೆ ಸಹಕಾರ ಇಲಾಖೆ ಅಧಿಕಾರಿಗಳು ಲೆಕ್ಕಾಚಾರ ಮಾಡಿ ಆರ್ಥಿಕ ಇಲಾಖೆಗೆ ನೀಡಿದ್ದರು. ಅಕ್ಟೋಬರ್‌ 5 ರೊಳಗೆ ಜುಲೈ ಹಾಗೂ ಆಗಸ್ಟ್‌ ತಿಂಗಳ ರೈತರ ಸಾಲ ಮನ್ನಾ ಚುಕ್ತಾ ಕ್ಲೈಮ್‌ (ಬಿಲ್ಲುಗಳ) ಮಾಹಿತಿ ರವಾನಿಸುವಂತೆ ಎಲ್ಲ ಜಿಲ್ಲಾ ಸಹಕಾರ ಬ್ಯಾಂಕುಗಳಿಗೆ ಸೂಚನೆ ಸಹ ನೀಡಲಾಗಿತ್ತು. ಅ.15 ರೊಳಗೆ ಚುಕ್ತಾ ಮಾಡಿ ದಸರಾ ವೇಳಗೆ ಋಣಮುಕ್ತ ಪತ್ರ ನೀಡುವ ಉದ್ದೇಶ ಹೊಂದಲಾಗಿತ್ತು. ಆದರೆ, ಇದುವರೆಗೂ ಶೇ.30 ರಷ್ಟೂ ಬಂದಿಲ್ಲ.

ಮತ್ತೂಂದು ಸಭೆ: ಈ ಮಧ್ಯೆ, ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಸಾಲ ಮನ್ನಾ ಕುರಿತು ಬ್ಯಾಂಕುಗಳೊಂದಿಗೆ ನಡೆಸುತ್ತಿರುವ ಸಭೆ ಇನ್ನೂ ಅಂತಿಮ ಹಂತ ತಲುಪಿಲ್ಲ. ಉಪ ಚುನಾವಣೆ ನಂತರ ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಮತ್ತೂಂದು ಸಭೆ ನಡೆಯಲಿದ್ದು, ಅಲ್ಲಿ ಸ್ಪಷ್ಟತೆ ಸಿಗುವ ಸಾಧ್ಯತೆಯಿದೆ ಎನ್ನಲಾಗಿದೆ. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 43,56,506 ರೈತರು 48.093 ಕೋಟಿ ರೂ. ಸಾಲ ಪಡೆದಿದ್ದು, ಆ ಪೈಕಿ ಶೇ.50 ರಷ್ಟು ಬಿಟ್ಟುಕೊಟ್ಟರೆ ಐದು ವರ್ಷಗಳ ಕಾಲ ಕಂತುಗಳಲ್ಲಿ ಹಣ ಪಾವತಿಸುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ, ಬ್ಯಾಂಕುಗಳು ಅಷ್ಟು ಪ್ರಮಾಣದಲ್ಲಿ ಬಿಟ್ಟುಕೊಡಲು ಒಪ್ಪುತ್ತಿಲ್ಲ. ಬಡ್ಡಿ ಬಿಟ್ಟುಕೊಡುತ್ತೇವೆ. ಅಸಲು
ಸಂಪೂರ್ಣವಾಗಿ ಕೊಡಿ ಎಂದು ಪಟ್ಟು ಹಿಡಿದಿವೆ ಎಂದು ಹೇಳಲಾಗಿದೆ.

ಅ.5 ರೊಳಗೆ ಸಾಲ ಮನ್ನಾ ಕುರಿತ ಕ್ಲೈಮ್‌ ಸಲ್ಲಿಸಿ ಎಂದು ಸಹಕಾರ ಇಲಾಖೆ ಆದೇಶ ಹೊರಡಿಸಿತ್ತು. ಆದರೆ, ನಮಗೆ ಸಾಫ್ಟ್ವೇರ್‌ ಒದಗಿಸಿದ್ದು ತಡವಾಯಿತು. ಹೀಗಾಗಿ ಸಾಧ್ಯವಾಗಿಲ್ಲ. 
● ಬ್ಯಾಲಹಳ್ಳಿ ಎಂ. ಗೋವಿಂದಗೌಡ, ಕೋಲಾರ ಜಿಲ್ಲಾ ಸಹಕಾರ ಬ್ಯಾಂಕ್‌ ಅಧ್ಯಕ್ಷ

Advertisement

ರಾಜ್ಯ ಸರ್ಕಾರ ಕಂತುಗಳ ಮೊತ್ತವನ್ನು ಸಿದಟಛಿವಾಗಿಟ್ಟುಕೊಂಡಿದೆ. ಆದರೆ, ಜಿಲ್ಲಾ ಸಹಕಾರ ಬ್ಯಾಂಕುಗಳಿಂದ ಅಪೆಕ್ಸ್‌
ಬ್ಯಾಂಕುಗಳಿಗೆ ಬಿಲ್ಲುಗಳ ಮಾಹಿತಿ ಬಂದಿಲ್ಲ. ಆದರೂ ಋಣಮುಕ್ತ ಪತ್ರ ಶೀಘ್ರ ರೈತರಿಗೆ ಕೊಡಲು ಸಿದ್ಧತೆ ನಡೆದಿದೆ.
ಬಂಡೆಪ್ಪ ಕಾಂಶಂಪುರ್‌, ಸಹಕಾರ ಸಚಿವ

ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next