Advertisement

Puttur: ಲಾಡ್ಜ್ ನಲ್ಲಿ ಭಿನ್ನ ಧರ್ಮದ ಜೋಡಿಯೆಂದು ತಪ್ಪು ಮಾಹಿತಿ

11:23 PM Aug 13, 2024 | Team Udayavani |

ಪುತ್ತೂರು: ಭಿನ್ನಧರ್ಮದ ಜೋಡಿಯೊಂದು ಪುತ್ತೂರು ನೆಹರುನಗರದ ಲಾಡ್ಜ್ ಒಂದರಲ್ಲಿ ಇರುವ ಬಗ್ಗೆ ಬಂದ ಮಾಹಿತಿ ಆದರಿಸಿ ಪೊಲೀಸರು ಪರಿಶೀಲನೆ ನಡೆಸಿದ ಘಟನೆ ಮಂಗಳವಾರ ನಡೆದಿದೆ.

Advertisement

ಭಿನ್ನಧರ್ಮದ ಜೋಡಿ ನೆಹರು ನಗರದ ವಸತಿ ಗೃಹದಲ್ಲಿ ಉಳಿದುಕೊಂಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಮಾಹಿತಿಯಂತೆ ಸ್ಥಳಕ್ಕೆ ತೆರಳಿ ದಾಖಲೆಗಳನ್ನು ಪರಿಶೀಲಿಸಿ ಕೊಠಡಿ ಬಾಡಿಗೆಗೆ ಪಡೆದು ಉಳಿದುಕೊಂಡಿದ್ದ ಜೋಡಿಯನ್ನು ವಿಚಾರಣೆ ನಡೆಸಿದಾಗ ಅವರು ಒಂದೇ ಧರ್ಮಕ್ಕೆ ಸೇರಿದ ಬೆಂಗಳೂರು ಮೂಲದ ದಂಪತಿಗಳೆಂದು ತಿಳಿದುಬಂದಿದೆ ಎನ್ನಲಾಗಿದೆ.
ಈ ಬಗ್ಗೆ ಲಾಡ್ಜ್ ನ ಮಾಲಕರು ಪ್ರತಿಕ್ರಿಯೆ ನೀಡಿದ್ದು, 4 ವರ್ಷಗಳ ಹಿಂದೆಯೇ ಅಗ್ರಿಮೆಂಟ್‌ ಮೂಲಕ ಲಾಡ್ಜ್ ನಡೆಸಲು ಬೇರೊಂದು ಸಂಸ್ಥೆಗೆ ಕೊಟ್ಟಿರುತ್ತೇವೆ. ಘಟನೆಯ ಬಗ್ಗೆ ನಮಗೆ ಹೆಚ್ಚೇನು ತಿಳಿದಿಲ್ಲ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next