Advertisement

ಜೇಡುಹುಳು –ಕಾಂಡ ಕೊರಕ ಹುಳುಗಳ ನಿರ್ವಹಣೆಗಾಗಿ ಇಲ್ಲಿದೆ ಮಾಹಿತಿ

04:29 PM Oct 29, 2020 | sudhir |

ವಿಜಯಪುರ: ಜಿಲ್ಲೆಯಲ್ಲಿ ಮಳೆ, ಗಾಳಿ, ಬಿಸಿಲಿನ ವೈಪರಿತ್ಯದಿಂದ ಮಾವಿನ ಗಿಡಗಳಲ್ಲಿ ಜೇಡುಹುಳು ಹಾಗೂ ಕಾಂಡ ಕೊರಕದ ಹುಳುಗಳ ಬಾಧೆ ಕಂಡು ಬಂದಿದೆ. ಇವುಗಳ ಸೂಕ್ತ ನಿರ್ವಹಣೆ ಕುರಿತು ವಿಜಯಪುರ ಜಿಲ್ಲಾ ತೋಟಗಾರಿಕೆ, ಉಪ ನಿರ್ದೇಶಕ ಸಿದ್ದರಾಮಯ್ಯ ಬರಗಿಮಠ ಅವರು ಮಾವಿನ ಬೆಳೆಗಾರರಿಗೆ ಕೆಲವು ಉಪಯುಕ್ತ ಮಾಹಿತಿ ನೀಡಿದ್ದಾರೆ. ಮಾವಿನ ಗಿಡಗಳಲ್ಲಿ ಚಿಗುರೆಲೆಗಳು ಬರುತ್ತಿವೆ. ಈ ಚಿಗುರೆಲೆಗಳು ತಾಮ್ರ ವರ್ಣದಿದ್ದು ಮೃದುವಾಗಿವೆ. ಎಲೆ ತಿನ್ನುವ ಹುಳುಗಳು ಇಂಥ ಎಲೆಗಳನ್ನು ಸುಲಭವಾಗಿ ಕೆರೆದು, ಕಡಿದು ತಿಂದು ಹಾಕುತ್ತವೆ. ಇದರಿಂದ ಗಿಡಗಳ ಬೆಳವಣಿಗೆ ಕುಂಠಿತಗೊಂಡು ಇಳುವರಿ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಇಂತಹ ಲಕ್ಷಣಗಳು ಕಂಡು ಬಂದ ಕೂಡಲೇ 2.5 ಮಿ.ಲೀ ಕ್ವಿನಾಲ್‌ ಪಾಸ್‌-25 ಅಥವಾ 2
ಮಿ.ಲೀ ಕ್ಲೋರ್‌ ಪೈರಿಫಾಸ್‌ ಔಷಧಿಯನ್ನು +0.5 ಮಿ.ಲೀ ಮ್ಯಾಕ್ಸಿವೆಟ್‌ಸಿಟಿವೆಟ್‌ ಅಚಿಟಿನ್‌ ಔಷಧಿಯನ್ನು ಪ್ರತಿ ಲೀಟರ್‌ ನೀರಿಗೆ ಬೆರೆಸಿ ಬೆಳಗ್ಗೆ ಸಿಂಪರಣೆ ಮಾಡಬೇಕು. ಇನ್ನು ಸಣ್ಣ ಜೇಡುನುಸಿಗಳು ಎಲೆಗಳನ್ನು ಕೂಡಿಸಿ ಅದರೊಳಗೆ ಸೇರಿಸಿಕೊಂಡು ಜೇಡರ ಬಲೆ ಕಟ್ಟಿ ಎಲೆಗಳನ್ನು ತಿಂದು ಒಣಗಿಸಿ ಬಿಡುತ್ತವೆ. ಇವುಗಳ ಲಕ್ಷಣಗಳು ಕಂಡು ಬಂದಾಗ ಮೊದಲು ಜೇಡರ ಬಲೆಯನ್ನು ಮುಳ್ಳು ಕಂಟಿಯಿಂದ ಬಿಡಿಸಬೇಕು.  ನಂತರ 2.5 ಮಿ.ಲೀ ಡೈಕೋಫಾಲ್‌ -20 ಔಷಧಿಯನ್ನು +0.5 ಮಿ.ಲೀ ಮ್ಯಾಕ್ಸ್‌ವೆಟ್‌/ಸಿಟಿ ವೆಟ್‌ ವೆಟ್ಟಿಂಗ್‌ ಏಜೆಂಟ್‌ ಮಿಶ್ರಣ ಮಾಡಿ ಬೆಳೆಗೆ ಸಿಂಪಡಿಸಬೇಕು. ಕುಡಿಕೊರಕ ಲಕ್ಷಣವೆಂದರೆ ಕುಡಿಗಳಲ್ಲಿ ರಂಧ್ರಗಳು ಕಾಣಿಸಿಕೊಳ್ಳುತ್ತವೆ.

Advertisement

ಇದನ್ನೂ ಓದಿ:ಉಪಚುನಾವಣೆಯಲ್ಲಿ ಬಿಜೆಪಿಗೆ ಒಳ ಒಪ್ಪಂದದ ಅಗತ್ಯವಿಲ್ಲ: ನಳೀನ್ ಕುಮಾರ್ ಕಟೀಲ್

ಕುಡಿಗಳು ಜೋತು ಬಿದ್ದು ಎಲೆಗಳು ಒಣಗುತ್ತವೆ. ಇಂತಹ ಕುಡಿ, ತುದಿಗಳು ರಂಧ್ರವಿರುವ ಜಾಗದಿಂದ 2-3 ಇಂಚು ಕೆಳಗೆ ಕತ್ತರಿಸಿ ಸಂಗ್ರಹಿಸಿ ಸುಡಬೇಕು. ನಂತರ ಅಂತರವ್ಯಾಸಿ ಕೀಟನಾಶಕಗಳಾದ 0.3 ಮಿ.ಲೀ ಇಮಿಡಾಕ್ಲೊಪ್ರಿಡ್‌ ಅಥವಾ ಒಂದು ಮಿ.ಲೀ ಮೊನೊಕ್ರೋಟೊಫಾಸ್‌ ಅಥವಾ 1.7 ಮಿ.ಲೀ ಡೈ ಮಿಥೋಯೇಟದಂಥ ಔಷಧಗಳನ್ನು ಸಿಂಪಡಿಸಿ ಕುಡಿಕೊರಕದ ಹತೋಟಿ ಮಾಡಬಹುದು. ಕಾಂಡಕೊರಕ ಲಕ್ಷಣವೆಂದರೆ ಗಿಡಗಳ ಬುಡಗಳಲ್ಲಿ ಹುಳುಗಳು ರಂಧ್ರ ಕೊರೆದು ಒಳಗಿನಿಂದ ಮೇಲಕ್ಕೆ ಮೇಯುತ್ತ ಹೋಗುತ್ತವೆ.

ರಂಧ್ರದಿಂದ ಕಟ್ಟಿಗೆ ಪುಡಿ ಉದುರಿ ಬಿದ್ದದ್ದು ಕಂಡು ಬರುತ್ತದೆ. ಇಂಥ ರಂಧ್ರಗಳನ್ನು ತಂತಿ ಕಡ್ಡಿಯಿಂದ ಒಳಗೆ ಸೇರಿಸಿ
ಸ್ವತ್ಛಗೊಳಿಸಬೇಕು. ನಂತರ ರಂಧ್ರದೊಳಗೆ ಕೆಳಮುಖವಾಗಿ ಔಷಧ ನಿಲ್ಲಲು ಇನ್ನೊಂದೆರೆಡು ಇಂಚು ಆಳದ ರಂಧ್ರ
ಹಾಕಬೇಕು. ಬಳಿಕ ಡೈಕ್ಲೋರೋವಾಸ್‌ದ ಕೆಲವು ಹನಿಗಳನ್ನು ರಂಧ್ರದಲ್ಲಿ ಸಿರಿಂಜ್‌ ಮೂಲಕ ಬಿಡಬೇಕು. ನಂತರ
ರಂದ್ರವನ್ನು ಜಿಗುಟು ಕೆಸರಿನಿಂದ ಮುಚ್ಚಬೇಕು. ಒಳಗಡೆ ಹುಳು ಇದ್ದರೆ ಸಾಯುತ್ತದೆ. ಮಾಹಿತಿಗಾಗಿ ಸಂಬಂಧಪಟ್ಟ
ತೋಟಗಾರಿಕೆ ಅಧಿಕಾರಿಗಳನ್ನು ಅಥವಾ ಹಾರ್ಟಿಕ್ಲಿನಿಕ್‌ ವಿಷಯ ತಜ್ಞರಾದ ವಿಜಯಕುಮಾರ್‌ ರೇವಣ್ಣವರ (ಮೊ.
9482053985) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next