Advertisement

ಇನ್ ಫ್ಲುಜೆನ್ಜಾ: ಯಾವುದನ್ನು ತಡೆಗಟ್ಟಲು ಸಾಧ್ಯವೋ ಅದನ್ನು ತಡೆಗಟ್ಟೋಣ

12:47 PM Mar 22, 2021 | Team Udayavani |

ಸೋಂಕುಕಾರಕ ಶ್ವಾಸಕೋಶ ಸಂಬಂಧಿತ ಕಾಯಿಲೆಯಾದ ಇನ್ ಫ್ಲುಜೆನ್ಜಾ ಪ್ರತಿವರ್ಷ ಸಾವಿರಾರು ಜನರನ್ನು ಬಾಧಿಸುತ್ತದೆ. ಋತುಮಾನದ ಇನ್ ಫ್ಲುಜೆನ್ಜಾ ಜಾಗತಿಕ ಆರೋಗ್ಯಕ್ಕೆ ಇರುವ ಅತಿದೊಡ್ಡ ಬೆದರಿಕೆಯಾಗಿದೆ. ಇನ್ ಫ್ಲುಜೆನ್ಜಾದಲ್ಲಿರುವ ಆರೋಗ್ಯ ಮತ್ತು ಮುಂದುವರಿಯುವ ಸವಾಲುಗಳನ್ನು ಪರಿಗಣಿಸಿದರೆ, ಜೂನ್ ನಿಂದ ಸೆಪ್ಟೆಂಬರ್ ವರೆಗೆ ಭಾರತದಲ್ಲಿ ಋತುಮಾನದ ಎಚ್ಚರಿಕೆ ಇದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಭಾರತವು ದಕ್ಷಿಣ ಭೂಭಾಗದ ಋತುಮಾನ ಅವಧಿಯಲ್ಲಿ(ಮಳೆಗಾಲದ ಶೃಂಗ). ಇದು ಏಪ್ರಿಲ್ ನಿಂದ ಆರಂಭವಾಗುತ್ತದೆ. ಆದ್ದರಿಂದ ಫ್ಲೂ ಜ್ವರದ ಲಸಿಕೆ ತೆಗೆದುಕೊಳ್ಳಲು ಇದು ಸೂಕ್ತ ಕಾಲ. ಆದರೆ ಭಾರತ ಬಹಳ ಬೃಹತ್ ದೇಶವಾದ ಕಾರಣ, ಉತ್ತರ ಭಾರತದ ಕೆಲವು ಭಾಗಗಳು ಉತ್ತರ ಭೂಭಾಗದಲ್ಲಿ ಬರುತ್ತವೆ (ಚಳಿಗಾಲದ ಶೃಂಗ ಕಾಲ). ಭಾರತದಲ್ಲಿ ಫ್ಲೂ ಜ್ವರವು ಸದಾಕಾಲ ಇರುವಂಥದ್ದು. ಆದ್ದರಿಂದ, ಬೇಸಿಗೆ ಮತ್ತು ಮಳೆಗಾಲಗಳಲ್ಲಿ ಫ್ಲೂ ಉಂಟಾಗುವ ನಿದರ್ಶನಗಳು ಹೆಚ್ಚಾಗಿರುತ್ತದೆ.

Advertisement

ವಿಶ್ವಆರೋಗ್ಯ ಸಂಸ್ಥೆಯ ಪ್ರಕಾರ, ವಿಶ್ವವ್ಯಾಪಿಯಾಗಿ ಪ್ರತಿವರ್ಷ, ಋತುಮಾನಿಕ ಇನ್ ಫ್ಲುನೆನ್ಜಾ ಗಂಭೀರ ಸಂದರ್ಭಗಳು 3.5 ದಶಲಕ್ಷ ಇದ್ದು, 290000ರಿಂದ 650000 ಅಂದಾಜು ವಾರ್ಷಿಕ ಸಾವುಗಳು ಸಂಭವಿಸುತ್ತದೆ. ಇನ್ ಫ್ಲುಯೆನ್ಜಾ  ಕೆಳಶ್ವಾಸನಾಳ ಸೋಂಕುಗಳಿಂದ ಸಂಭವಿಸುತ್ತದೆ.

ಕೋವಿಡ್ 19 ನಂತರ ಜನರು ಮುನ್ನೆಚ್ಚರಿಕೆ ಕ್ರಮಗಳ ಪಾಲನೆಯನ್ನು ಮುಂದುವರಿಸಿದ್ದರಿಂದ 2021ರ ಆರಂಭದಲ್ಲಿ ಇನ್ ಫ್ಲುಯೆನ್ಜಾ ಸಂದರ್ಭಗಳು ಕಡಿಮೆಯಾಗಿದ್ದವು. ಅತಿಯಾಗಿ ಭಯಮೂಡಿಸಿದ ಟ್ವಿನ್ ಡೆಮಿಕ್, ನಿರೀಕ್ಷಿತ ಹಾನಿ ಮಾಡಿಲ್ಲದಿದ್ದರೂ ಇನ್ ಫ್ಲುಯೆನ್ಜಾ ವಿರುದ್ಧದ ನಿರೋಧಕತೆಯನ್ನು ನಿರ್ಲಕ್ಷಿಸದಿರುವುದು ಅತಿ ಮುಖ್ಯವಾಗಿದೆ. ಆದ್ದರಿಂದ ಸಮಯಕ್ಕೆ ಸರಿಯಾಗಿ ಲಸಿಕೆ ನೀಡುವುದರಿಂದ, ಇನ್ ಫ್ಲುಯೆನ್ಜಾದ ಇತ್ತೀಚಿನ ಒತ್ತಡಗಳಿಂದ ರಕ್ಷಣೆ ಪಡೆದುಕೊಂಡು ಹರಡುವಿಕೆಯನ್ನು ನಿಯಂತ್ರಿಸಬಹುದು.

1918ರಲ್ಲಿ ಪ್ರಪ್ರಥಮ ಇನ್ ಫ್ಲುಯೆನ್ಜಾ ಸಾಂಕ್ರಾಮಿಕ ಹರಡಿದಾಗ, ಸಮಸ್ಯೆಗೆ ಪರಿಹಾರ ಒದಗಿಸಲು ವೈರಾಣುವಿನ ಬಗ್ಗೆಯಾಗಲೀ ಅಥವಾ ಲಸಿಕೆಯ ಬಗ್ಗೆಯಾಗಲೀ ಯಾವುದೇ ಜ್ಞಾನ ಇರಲಿಲ್ಲ. ಇಂದು ಅದೃಷ್ಟವಶಾತ್, ಇನ್ ಫ್ಲುಯೆನ್ಜಾ ವಿರುದ್ಧದ ರೋಗನಿರೋಧಕತೆಗಾಗಿ ಸಾರ್ವಜನಿಕ ಆರೋಗ್ಯ ಕ್ರಮಗಳು ಜಾರಿಯಲ್ಲಿವೆ. ಇತರ ತಡೆಯಾತ್ಮಕ ಕ್ರಮಗಳನ್ನು ಪರಿಗಣಿಸಬಹುದಾದರೂ, ಲಸಿಕೆಯು ಪ್ರಧಾನ ರಕ್ಷಣೆ ಒದಗಿಸುತ್ತದೆ ಮತ್ತು ತೀವ್ರತರವಾದ ಶ್ವಾಸಕೋಶ ಕಾಯಿಲೆ( ಎಆರ್ಐ) ತಡೆಗಟ್ಟಲು ಅತ್ಯಂತ ಪರಿಣಾಮಕಾರಿಯಾದುದಾಗಿದೆ. ಸ್ಪ್ಯಾನಿಶ್ ಫ್ಲೂನ ಎರಡನೇ ಹಂತದಲ್ಲಿ ಅನೇಕ ಮಂದಿ ನ್ಯುಮೋನಿಯಾದಿಂದ ಸಾವನ್ನಪ್ಪಿದ್ದರು ಎಂಬುದು ತಿಳಿದಿರುವ ವಿಚಾರವಾಗಿದೆ. ಆದ್ದರಿಂದ, ನಮ್ಮ ವಯೋವೃದ್ಧ ಜನಸಂಖ್ಯೆಯನ್ನು ನ್ಯೂಮೋಕಾಕ್ಕಲ್ ಲಸಿಕೆಯೊಂದಿಗೆ ರಕ್ಷಿಸುವುದೂ ಕೂಡ ಅತಿ ಮುಖ್ಯವಾಗುತ್ತದೆ.

ದುರಾದೃಷ್ಟವಶಾತ್, ಭಾರತದಲ್ಲಿ ಸಾಮಾಜಿಕ ಆರ್ಥಿಕ ಕಾರಣಗಳಿಂದಾಗಿ ಲಸಿಕೆಗಳನ್ನು ನಿರ್ಲಕ್ಷಿಸಲಾಗುತ್ತದೆ. ಆದರೆ ವಿಶ್ವಆರೋಗ್ಯ ಸಂಸ್ಥೆಯ ಪ್ರಕಾರ, ಗರ್ಭಿಣಿ ಮಹಿಳೆಯರು, ಮಕ್ಕಳು(6 ತಿಂಗಳಿನಿಂದ 5 ವಷ ವಯೋಮಿತಿಯಲ್ಲಿರುವವರು), ವಯೋವೃದ್ಧರು, ಮಧುಮೇಹ ಮತ್ತು ಆಸ್ತಮಾದಂತಹ ದೀರ್ಘಾವಧಿ ವೈದ್ಯಕೀಯ ಪರಿಸ್ಥಿತಿಗಳಿರುವ ವ್ಯಕ್ತಿಗಳಿಗೆ ಇನ್ ಫ್ಲುಯೆನ್ಜಾ ಲಸಿಕೆ ನೀಡುವಿಕೆಯನ್ನು ಆದ್ಯತೆಗೊಳಿಸಬೇಕು. ಜೊತೆಗೆ, ಇನ್ ಫ್ಲುಯೆನ್ಜಾ ಸೋಂಕು, ಹೆಚ್ಚಿನ ಮರಣ ಸಂಭಾವ್ಯತೆಮತ್ತು ಹಾನಿಯನ್ನು ಏರ್ಪಡಿಸುವಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನೂ ಉಂಟು ಮಾಡಬಲ್ಲದು ಎಂಬುದನ್ನು ಮರೆಯಬಾರದು.

Advertisement

ವ್ಯಕ್ತಿಯ ಲಸಿಕೆ ನೀಡಿಕೆಯನ್ನು ಆದ್ಯತೆಗೊಳಿಸುವುದು ಅತ್ಯಂತ ಮುಖ್ಯವಾದುದು.ಇನ್ ಫ್ಲುಯೆನ್ಜಾ, ಸ್ವರೂಪದಲ್ಲಿ ಅತ್ಯಂತ ವೇಗವಾಗಿ ಪ್ರಸರಣವಾಗುವ ಕಾಯಿಲೆ; ಎಲ್ಲರಿಗೂ ಲಸಿಕೆಯನ್ನು ಕಡ್ಡಾಯಗೊಳಿಸಬೇಕು, ಅದರಲ್ಲೂ ವಿಶೇಷವಾಗಿ, ಪ್ರಸ್ತುತ ಪ್ರಚಲಿತದಲ್ಲಿರುವ ಕೋವಿಡ್ 19 ಲಸಿಕೆ ವಿತರಣೆಯಲ್ಲಿ ಅದನ್ನು ಕಡ್ಡಾಯಗೊಳಿಸಬೇಕು. ಸಾಂಕ್ರಾಮಿಕದಂತಹ ಸಮಯದಲ್ಲೂ ಇದರ ನೀಡುವಿಕೆ ಸುರಕ್ಷಿತವಾದುದರಿಂದ ಮತ್ತು ಅದು ಗಂಭೀರವಾದ ಕಾಯಿಲೆಗಳು ಮತ್ತು ಇತ್ತೀಚಿನ ಒತ್ತಡಗಳಿಂದ ಉಂಟಾಗುವ ಸಮಸ್ಯೆಗಳನ್ನು ತಡೆಗಟ್ಟಬಲ್ಲುದಾದ್ದರಿಂದ, ಅನೇಕ ಕಾಯಿಲೆಗಳ ಹರಡುವಿಕೆ ಮತ್ತು ಪ್ರಸರಣವನ್ನು ತಡೆತಲು ನೆರವಾಗುವಂತಹ, ಪ್ರಸುತದಲ್ಲಿರುವ ಕೋವಿಡ್ 19 ಲಸಿಕೆಯಂತಹ ಇನ್ ಫ್ಲುಯೆನ್ಜಾ ಲಸಿಕೆ ಇರುವ ಸಮೂಹ ನಿರೋಧಕ ಚುಚ್ಚು ಮದ್ದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಶಿಫಾರಸು ಮಾಡಲಾಗಿದೆ.

ಇತ್ತೀಚಿನ ಕೋವಿಡ್ 19 ಲಸಿಕೆ ಅಭಿಯಾನದೊಂದಿಗೆ ಭಾರತದಲ್ಲಿ ಲಸಿಕೆ ನೀಡಿಕೆ ಕಾರ್ಯಕ್ರಮವು ವರ್ಧನೆಗೊಳ್ಳುತ್ತಿದ್ದರೂ, ವಯಸ್ಕರಲ್ಲಿ ಲಸಿಕೆಯಿಂದ ತಡೆಗಟ್ಟಬಹುದಾದ ಕಾಯಿಲೆಗಳ ಕುರಿತು ಜಾಗೃತಿ ಹೆಚ್ಚಿಸಲು ಮತ್ತು ಆರೋಗ್ಯ ಪರಿಣಾಮಗಳನ್ನು ತಗ್ಗಿಸಲು ಮಹತ್ತರವಾದ ಸುಧಾರಣೆಗಳನ್ನು ಮಾಡಬೇಕಾದ ಅಗತ್ಯವೇರ್ಪಟ್ಟಿದೆ. ಒಂದು ದೇಶವಾಗಿ ಭಾರತವು, ಇನ್ ಫ್ಲುಯೆನ್ಜಾದ ಅಪಾಯವದ ಸಮಸ್ಯೆಯನ್ನು ನಿವಾರಿಸಿ ತಕ್ಷಣದತಡೆಯಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಇನ್ ಫ್ಲುಯೆನ್ಜಾದ ಲಸಿಕೆಯು ದೀರ್ಘಾವಧಿಯಲ್ಲಿ ಅಭಿವೃದ್ಧಿಯಾಗಿದ್ದು ಸಾಂಕ್ರಾಮಿಕ ಪಿಡುಗು ಇರುವುದರ ಹೊರತಾಗಿಯೂ ಮುನ್ನೆಚ್ಚರಿಕೆಯಾಗಿ ನಮ್ಮಲ್ಲಿ ಸ್ವತಃ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಅದು ಅತಿಮುಖ್ಯವೂ ಅತ್ಯಂತವಾಗಿ ಶಿಫಾರಸು ಮಾಡಲ್ಪಟ್ಟಿರುವುದೂ ಆಗಿದೆ.

ಡಾ. ಕಿಶೋರ್ ಕುಮಾರ್, ನವಜಾತಶಿಶು ತಜ್ಞರು 

ಸ್ಥಾಪಕ ಹಾಗೂ ಚೇರ್ಮನ್, ಕ್ಲೌಡ್ ಲೈನ್ ಹಾಸ್ಪಿಟಲ್ ಹೆಲ್ತ್ ಕೇರ್ ಫೆಸಿಲಿಟಿ

Advertisement

Udayavani is now on Telegram. Click here to join our channel and stay updated with the latest news.

Next