ಚನ್ನಮ್ಮನ ಕಿತ್ತೂರು: ಬಿಜೆಪಿ, ಕಾಂಗ್ರೆಸ್ ನಡೆಗೆ ಬೇಸತ್ತು ಉಭಯ ಪಕ್ಷಗಳ ಅನೇಕ ನಾಯಕರು ಜೆಡಿಎಸ್ ಪಕ್ಷದ ಕಡೆಗೆ ಮುಖ ಮಾಡುತ್ತಿದ್ದಾರೆ. ಬೆಳಗಾವಿ ಜಿಲ್ಲೆಯ ಪ್ರಭಾವಿ ಮುಖಂಡರು ಸಹ ಶೀಘ್ರವೇ ಜೆಡಿಎಸ್ ಸೇರಿಕೊಳ್ಳಲಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ನಾಯಕರು ಜೆಡಿಎಸ್ ಸೇರ್ಪಡೆ ಕುರಿತು ಎಚ್.ಡಿ. ಕುಮಾರಸ್ವಾಮಿ ಜತೆ ಮಾತುಕತೆ ನಡೆಸಿದ್ದಾರೆ. ಶುಭ ಸಮಯ ನೋಡಿ ಅಧಿಕೃತವಾಗಿ ಜೆಡಿಎಸ್ ಸೇರಲಿದ್ದಾರೆ.
ರಾಜ್ಯದಲ್ಲಿ ಜನತಾ ಪಕ್ಷ ವೀಕ್ ಆಗಿದ್ದರಿಂದ ಬಿಜೆಪಿ ಅಧಿಕಾರಕ್ಕೆ ಬರುವಂತಾಯಿತು. ಬಿಜೆಪಿಯ ಭ್ರಷ್ಟ ಅಧಿಕಾರವನ್ನು ನೋಡಿ ರಾಜ್ಯದ ಎಲ್ಲ ಸಮುದಾಯದವರು ಬಿಜೆಪಿಧಿಕ್ಕರಿಸಿ, ಜೆಡಿಎಸ್ನತ್ತ ಮುಖ ಮಾಡುವ ದಿನಗಳು ದೂರವಿಲ್ಲ. ಮತ್ತೆ ಎಚ್.ಡಿ. ಕುಮಾರಸ್ವಾಮಿ ಸಿಎಂ ಆಗುವುದರಲ್ಲಿ ಎರಡು ಮಾತಿಲ್ಲ. ಎರಡು ರಾಷ್ಟ್ರೀಯ ಪಕ್ಷಗಳ ಚಿಂತೆ ನಮಗಿಲ್ಲ. ಎಲ್ಲ ಸಮುದಾಯದವರನ್ನು ಅಪ್ಪಿಕೊಂಡು ಬಸವ ತತ್ವದ ಆಧಾರದ ಮೇಲೆ ಆಡಳಿತ ನಡೆಸುತ್ತೇವೆ ಎಂದರು.