Advertisement

ಎಪ್ರಿಲ್‌ನಲ್ಲಿ ಆರ್‌ಬಿಐ ಬಡ್ಡಿದರ ಕಡಿತ: ಮೆರಿಲ್‌ ಲಿಂಚ್‌

03:59 PM Jan 25, 2018 | udayavani editorial |

ಮುಂಬಯಿ : ಹಣದುಬ್ಬರದ ಅಪಾಯ ಈಗ ಮುಗಿದು ಹೋಗಿರುವ ವಿಷಯ; ಹಾಗಾಗಿ ಆರ್‌ಬಿಐ ಎಪ್ರಿಲ್‌ ತಿಂಗಳಲ್ಲಿ ಕೈಗೊಳ್ಳುವ ಹಣಕಾಸು ನೀತಿ ಪರಾಮರ್ಶೆಯಲ್ಲಿ ಶೇ.0.25ರಷ್ಟು ಬಡ್ಡಿ ದರ ಕಡಿತ ಮಾಡಲಿದೆ ಎಂದು ವಿದೇಶಿ ಬ್ರೋಕರೇಜ್‌ ಸಂಸ್ಥೆಯೊಂದು ಹೇಳಿದೆ. 

Advertisement

ಕಳೆದ ಡಿಸೆಂಬರ್‌ನಲ್ಲಿ ಹಣದುಬ್ಬರ ಶೇ.5.2ಕ್ಕೆ ಏರಿತ್ತು. ಹಾಗಿದ್ದರೂ ಶೇ.2ರಿಂದ 6ರ ವರೆಗಿನ ವ್ಯಾಪ್ತಿಯಲ್ಲಿ  ಹಣದುಬ್ಬರ ಇರುವುದು ನಿರೀಕ್ಷಿತವಾಗಿರುವುದರಿಂದ ಆರ್‌ಬಿಐ ಎಪ್ರಿಲ್‌ ತಿಂಗಳಲ್ಲಿ ಬಡ್ಡಿದರ ಕಡಿತಕ್ಕೆ ಮುಂದಾಗುವುದು ನಿರೀಕ್ಷಿತವೇ ಆಗಿರುತ್ತದೆ ಎಂದು ಬ್ಯಾಂಕ್‌ ಆಫ್ ಅಮೆರಿಕದ ಮೆರಿಲ್‌ ಲಿಂಚ್‌ ತನ್ನ ಟಿಪ್ಪಣಿಯಲ್ಲಿ ಹೇಳಿದೆ. 

Advertisement

Udayavani is now on Telegram. Click here to join our channel and stay updated with the latest news.

Next