Advertisement

ಹಣದುಬ್ಬರ ಶೇ.4.87ಕ್ಕೆ ಏರಿಕೆ

11:24 AM Jun 13, 2018 | Harsha Rao |

ಹೊಸದಿಲ್ಲಿ: ಚಿಲ್ಲರೆ ವ್ಯವಹಾರ ಕ್ಷೇತ್ರದ ಹಣ ದುಬ್ಬರ ಮೇ ತಿಂಗಳಲ್ಲಿ ಹೆಚ್ಚಾಗಿದ್ದು, ಹಿಂದಿನ 4 ತಿಂಗಳಿಗೆ ಹೋಲಿಸಿದರೆ ಶೇ.4.87ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರೀಯ ಅಂಕಿ ಅಂಶಗಳ ಕಚೇರಿ (ಸಿಎಸ್‌ಒ) ತಿಳಿಸಿದೆ. ಗ್ರಾಹಕ ದರ ಸೂಚ್ಯಂಕ ಆಧಾರದ ಮೇಲೆ ಸಿಎಸ್‌ಒ ವರದಿ ತಯಾರಿಸಿದ್ದು, ಇದರನ್ವಯ, ಮೇ ತಿಂಗಳಲ್ಲಿ ಇಂಧನ ಬೆಲೆಗಳ ಜತೆಗೆ ಹಣ್ಣು, ತರಕಾರಿ, ಧಾನ್ಯಗಳ ಬೆಲೆಯಲ್ಲೂ ಏರಿಕೆಯಾಗಿದ್ದು ಹಣದುಬ್ಬರ ಏರಿಕೆಗೆ ಕಾರಣ ಎಂದು ಹೇಳಿದೆ. ಇದೇ ವೇಳೆ, ಕೈಗಾರಿಕಾ ಉತ್ಪಾದನೆ ಪ್ರಮಾಣ ಎಪ್ರಿಲ್‌ ತಿಂಗಳಲ್ಲಿ ಶೇ.4.9ರಷ್ಟು ಪ್ರಗತಿ ದಾಖಲಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next