Advertisement

Inflation; 3 ತಿಂಗಳ ಕನಿಷ್ಠಕ್ಕೆ: ನವೆಂಬರ್‌ನಲ್ಲಿ ಶೇ.1.89ಕ್ಕಿಳಿಕೆ

01:27 AM Dec 17, 2024 | Team Udayavani |

ಹೊಸದಿಲ್ಲಿ: ನವೆಂಬರ್‌ ತಿಂಗಳ ಸಗಟು ದರ ಸೂಚ್ಯಂಕ ಹಣದುಬ್ಬರವು 3 ತಿಂಗಳ ಕನಿಷ್ಠಕ್ಕೆ ಇಳಿದಿದ್ದು, ಶೇ.1.89ಕ್ಕೆ ತಲುಪಿತ್ತು ಎಂದು ಸರಕಾರದ ದತ್ತಾಂಶ ತಿಳಿಸಿದೆ. ಆಹಾರ ವಸ್ತುಗಳು, ತರಕಾರಿಗಳ ದರ ಇಳಿಕೆಯಿಂದಾಗಿ ಹಣದುಬ್ಬರವೂ ಇಳಿಕೆಯಾಗಿದೆ. ಅಕ್ಟೋಬರ್‌ನಲ್ಲಿ ಹಣದುಬ್ಬರವು ಶೇ.2.36 ಆಗಿತ್ತು. ಕಳೆದ ವರ್ಷದ ನವೆಂಬರ್‌ನಲ್ಲಿ ಇದು ಶೇ.0.39 ಆಗಿತ್ತು. ದೇಶದ ರಫ್ತು ಪ್ರಮಾಣ ನವೆಂಬರ್‌ನಲ್ಲಿ ಶೇ.4.85ರಷ್ಟು ಇಳಿಕೆಯಾಗಿದ್ದು, 2.72 ಲಕ್ಷ ಕೋಟಿ ರೂ.ಗೆ ತಲುಪಿತ್ತು ಎಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next