Advertisement

ಇನ್ಫಿನಿಕ್ಸ್‌ ನೋಟ್‌ 12, 12 ಪ್ರೋ ಬಿಡುಗಡೆ: 108ಎಂಪಿ ಪ್ರೈಮರಿ ಕ್ಯಾಮರಾವಿರುವ ಫೋನ್‌

07:05 PM Jul 08, 2022 | Team Udayavani |

ಇನ್ಫಿನಿಕ್ಸ್‌ ಸಂಸ್ಥೆಯು ಇನ್ಫಿನಿಕ್ಸ್‌ ನೋಟ್‌ 12 ಮತ್ತು ಇನ್ಫಿನಿಕ್ಸ್‌ ನೋಟ್‌ 12 ಪ್ರೋ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

Advertisement

6.7 ಇಂಚಿನ ಡಿಸ್‌ಪ್ಲೇ ಹೊಂದಿರುವ ಇನ್ಫಿನಿಕ್ಸ್‌ ನೋಟ್‌ 12 5ಜಿ ಅಲ್ಲಿ 6GB RAM, 64ಜಿಬಿ ಇಂಟರ್‌ನಲ್‌ ಸ್ಟೋರೇಜ್‌ ಇದೆ. RAMನ್ನು 9ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು. 50ಎಂಪಿ ಪ್ರೈಮರಿ ಕ್ಯಾಮರಾ ಹಾಗೂ 16ಎಂಪಿ ಸೆಲ್ಫಿ ಕ್ಯಾಮರಾವಿದೆ.

5000ಎಂಎಎಚ್‌ ಬ್ಯಾಟರಿ ಸಾಮರ್ಥ್ಯವಿದೆ. ಇನ್ಫಿನಿಕ್ಸ್‌ ನೋಟ್‌ 12 ಪ್ರೋ ಫೋನಿನಲ್ಲಿ 128ಜಿಬಿ ಇಂಟರ್‌ನಲ್‌ ಸ್ಟೋರೇಜ್‌ ಇದ್ದು ಅದನ್ನು 512ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು.

8GB RAM ಇದ್ದು, ಅದನ್ನು 13ಜಿಬಿವರೆಗೆ ವಿಸ್ತರಿಸಿಕೊಳ್ಳಬಹುದು. ಇದರಲ್ಲಿ 108ಎಂಪಿ ಪ್ರೈಮರಿ ಕ್ಯಾಮರಾ ಹಾಗೂ 16ಎಂಪಿ ಸೆಲ್ಫಿ ಕ್ಯಾಮರಾವಿದೆ. ಇನ್ಫಿನಿಕ್ಸ್‌ ನೋಟ್‌ 12 ಬೆಲೆ 14,999 ರೂ. ಹಾಗೂ ಇನ್ಫಿನಿಕ್ಸ್‌ ನೋಟ್‌ 12 ಪ್ರೋ ಬೆಲೆ 17,999 ರೂ.

Advertisement

Udayavani is now on Telegram. Click here to join our channel and stay updated with the latest news.

Next