ಬೆಂಗಳೂರು: ಚೈತನ್ಯ “ಇನ್ಫಿನಿಟಿ ಲರ್ನ್” ಶಿಕ್ಷಣ ಸಂಸ್ಥೆಯು ತನ್ನ ರಾಯಭಾರಿಯಾಗಿ ಭಾರತೀಯ ಕ್ರಿಕೆಟ್ ಆಟಗಾರ ರೋಹಿತ್ ಶರ್ಮಾ ಅವರನ್ನು ನೇಮಿಸಿದೆ.
ರೋಹಿತ್ ಶರ್ಮಾ ಯುವಕರು ಮಾತ್ರವಲ್ಲ, ಎಲ್ಲಾ ವಯೋಮಾನದವರಿಗೂ ನಮ್ಮ ಸಂದೇಶವನ್ನು ಕಳುಹಿಸಲು ಸರಿಯಾದ ಆಯ್ಕೆಯಾಗಿದ್ದಾರೆ. ಅದಕ್ಕಾಗಿ ಸಂಸ್ಥೆಯು ರೋಹಿತ್ ಅವರನ್ನು ಆಯ್ಕೆ ಮಾಡಿಕೊಂಡಿದೆ ಎಂದು ಸಂಸ್ಥೆಯ ನಿರ್ದೇಶಕಿ ಶುಷ್ಮಾ ಬೋಪಣ್ಣ ಸಂತಸ ವ್ಯಕ್ತಪಡಿಸಿದ್ದಾರೆ.
“ಇನ್ಫಿನಿಟಿ ಲರ್ನ್” ನಲ್ಲಿ ಒಂದು ಬಾರಿ ಕಲಿತರೆ, ಸಾಧಕರಾಗುವುದು ಖಚಿತ. “ಇನ್ಫಿನಿಟಿ ಲರ್ನ್” ದೇಶದ ಮುಂಚೂಣಿ ಕಲಿಕಾ ಸಂಸ್ಥೆಯಾಗಿದೆ. ಇದೀಗ, ರೋಹಿತ್ ಶರ್ಮಾ ರಾಯಭಾರಿಯಾಗಿರುವುದು ಸಂಸ್ಥೆಯ ಬ್ರಾಂಡ್ ಅನ್ನು ಮತ್ತಷ್ಟು ಪ್ರತಿಧ್ವನಿಸುವಂತೆ ಮಾಡಿದೆ. ಭಾರತದ ಯುವ ಜನರ ಭವಿಷ್ಯವನ್ನು ಕಲ್ಪಿಸುವಲ್ಲಿ ಚೈತನ್ಯ ಸಂಸ್ಥೆಯು ಮೂರು ದಶಕಗಳ ಪರಂಪರೆಯನ್ನು ಹೊಂದಿದೆ. ಸಂಸ್ಥೆಯು ಯುವ ಪ್ರತಿಭೆಗಳನ್ನು ಶ್ರಮವಹಿಸಿ ಗುರುತಿಸುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಪ್ರತ್ಯಕ್ಷ ಸಾಕ್ಷಿಗಳ ಹೇಳಿಕೆ ತಡವಾದರೂ ಮಾನ್ಯ: ಸುಪ್ರೀಂ ಕೋರ್ಟ್