Advertisement
ಬಾಲ್ಯದಲ್ಲೇ ನಾಯಕತ್ವದ ಹಂಬಲ: ಇವರ ನಾಯಕತ್ವದ ಗುಣಕ್ಕೆ ನೀರೆರದಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಪ್ರಾಥಮಿಕ ಹಾಗೂ ಪ್ರೌಢಶಾಲೆ ಓದುತ್ತಿದ್ದ ಸಂದರ್ಭ ಎಂಟಿಎಸ್ ಕಾಲೋನಿಯಲ್ಲಿ ನಡೆಯುತ್ತಿದ್ದ ಆರ್‌ಎಸ್‌ಎಸ್ ಶಾಖೆ ಶಿಬಿರ ಇವರ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು. ಇಂದಿನ ಆಸ್ಪತ್ರೆಯಿರುವ ಖಾಲಿ ಜಾಗದಲ್ಲಿ ಅಂದು ಸಂಘದ ಶಾಖೆ ನಡೆಯುತ್ತಿತ್ತು. ಶಾಖೆಗೆ ಆಗಮಿಸುತ್ತಿದ್ದ ಆರಂಭದಲ್ಲೇ ಶಾಖೆ ಅಗ್ರೇಸರ (ನಾಯಕ) ಆಗಬೇಕೆಂಬ ಬಯಕೆ ಮೊಳಕೆಯೊಡೆದಿತ್ತು. ಆದರೆ ಇವರಿಗಿಂತ ಹಿರಿಯರಿಗೆ ಅವಕಾಶ ನೀಡಿದ್ದ ಪರಿಣಾಮ ಸಾಧ್ಯವಾಗಿರಲಿಲ್ಲ. ಕಾಲೇಜು ಹಂತದಲ್ಲಿ ಎಬಿವಿಪಿಯಲ್ಲಿ ತಮ್ಮ ಸಂಘಟನಾ ಚತುರತೆ ಮೆರೆದಿದ್ದರು. ರಾಜ್ಯ-ರಾಷ್ಟ್ರಮಟ್ಟದ ಸಂಪರ್ಕ ಬೆಳೆಸಿಕೊಂಡಿದ್ದರು ಎಂಬುದನ್ನು ಅಂದಿನ ದಿನಗಳಲ್ಲಿ ಸಂಘದ ಶಾಖೆ ನಡೆಸುತ್ತಿದ್ದ ಪ್ರಭಾಕರ ದಿವಟೆ ನೆನಪಿಸಿಕೊಳ್ಳುತ್ತಾರೆ.
Related Articles
ಅದಮ್ಯ ಚೇತನ ಫೌಂಡೇಶನ್ ಮೂಲಕ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ಅನಂತಕುಮಾರ ಆರಂಭಿಸಿದ್ದರು. ತಾಯಿ ಗಿರಿಜಾ ಶಾಸ್ತ್ರೀ ಹೆಸರಿನ ಟ್ರಸ್ಟ್‌ನಡಿ ಅದಮ್ಯ ಚೇತನ ಫೌಂಡೇಶನ್ ಮೂಲಕ ಅನ್ನ, ಅಕ್ಷರ, ಆರೋಗ್ಯ, ಪರಿಸರ ಕಾಳಜಿ ಮೂಲಕ ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದರು. ಅನ್ನಪೂರ್ಣ ಯೋಜನೆಯಡಿ ನಿತ್ಯವೂ ಈ ಭಾಗದಲ್ಲಿ ಸುಮಾರು 80 ಸಾವಿರ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ. ಹುಬ್ಬಳ್ಳಿ-ಧಾರವಾಡ ಸೇರಿ ವಿವಿಧ ಕಡೆ ಫೌಂಡೇಶನ್ ವತಿಯಿಂದ ಸಸಿಗಳನ್ನು ನೆಟ್ಟು ಪರಿಸರ ಕಾಳಜಿ ತೋರಲಾಗಿದೆ. ಇಂತಹ ಕಾರ್ಯಕ್ರಮಗಳಿಗೆ ಸ್ವತಃ ಅನಂತಕುಮಾರ ಆಗಮಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದನ್ನು ಜಿಲ್ಲೆಯ ಜನ ಸ್ಮರಿಸುತ್ತಾರೆ.
Advertisement
ಪ್ಲೇಟ್ ಬ್ಯಾಂಕ್: ಪರಿಸರ ಕಾಳಜಿಗೆ ಪೂರಕವಾಗಿ ಪ್ಲಾಸ್ಟಿಕ್ ತಟ್ಟೆ ಹಾಗೂ ಲೋಟಗಳ ಬಳಕೆ ಕಡಿಮೆ ಮಾಡುವುದಕ್ಕಾಗಿ ಸ್ಟೀಲ್ ತಟ್ಟೆ-ಲೋಟಗಳನ್ನು ನೀಡುವ ನಿಟ್ಟಿನಲ್ಲಿ ಫೌಂಡೇಶನ್‌ನಿಂದ ಹುಬ್ಬಳ್ಳಿಯ ವಿಜಯನಗರದ ಕೆಂಪಣ್ಣವರ ಕಲ್ಯಾಣಮಂಟಪ ಬಳಿ ಪ್ಲೇಟ್ ಬ್ಯಾಂಕ್ ಆರಂಭಿಸಲಾಗಿದೆ. ಸುಮಾರು 2000ಕ್ಕೂ ಹೆಚ್ಚು ತಟ್ಟೆಗಳು ಇಲ್ಲಿವೆ.
ಹೇಮರಡ್ಡಿ ಸೈದಾಪುರ