Advertisement

ಕಾಶ್ಮೀರದಲ್ಲಿ ಒಳನುಸುಳುವಿಕೆ ಯತ್ನ ವಿಫಲ, ಪಾಕ್ ಡ್ರೋನ್ ಮೇಲೆ ಸೇನೆ ಗುಂಡಿನ ದಾಳಿ

09:41 AM May 13, 2023 | Team Udayavani |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್‌ ನಲ್ಲಿ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಒಳನುಸುಳುವಿಕೆ ಪ್ರಯತ್ನವನ್ನು ಭದ್ರತಾ ಪಡೆಗಳು ಇಂದು ವಿಫಲಗೊಳಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನಲ್ಲಿ ಮುಂಜಾನೆ ಭಯೋತ್ಪಾದಕರು ಒಳನುಸುಳುವ ಪ್ರಯತ್ನ ನಡೆಸಿದ್ದರು. ಆದರೆ ಭದ್ರತಾ ಪಡೆಗಳಿಂದ ಅದನ್ನು ವಿಫಲಗೊಳಿಸಲಾಯಿತು ಎಂದು ಅವರು ಹೇಳಿದರು.

ದಟ್ಟವಾದ ಅರಣ್ಯ ಪ್ರದೇಶದಲ್ಲಿ ಸೇನೆಯು ಹುಡುಕಾಟಗಳನ್ನು ಪ್ರಾರಂಭಿಸಿದೆ ಎಂದು ಅವರು ಹೇಳಿದರು.

ಎರಡು ಕಡೆಯವರ ನಡುವೆ ಗುಂಡಿನ ಚಕಮಕಿ ನಡೆದ ನಂತರ ಘಟನೆಯ ಸ್ಥಳದ ಮೇಲೆ ಪಾಕಿಸ್ತಾನದ ಕಡೆಯಿಂದ ಕ್ವಾಡ್‌ ಕಾಪ್ಟರ್ (ಡ್ರೋನ್) ಅನ್ನು ಹಾರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ಸೇನೆಯ ಯೋಧರು ಗುಂಡಿನ ದಾಳಿ ನಡೆಸಿದ ನಂತರ ಕ್ವಾಡ್‌ ಕಾಪ್ಟರ್ ಅನ್ನು ಪಾಕಿಸ್ತಾನಿಗಳು ಹಿಂಪಡೆದಿದ್ದಾರೆ ಎಂದು ಅವರು ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next