Advertisement

ಪೇದೆಗೆ ಸೋಂಕು: ಕೆ.ಆರ್‌.ಮಾರ್ಕೆಟ್‌ ಠಾಣೆ ಸ್ಯಾನಿಟೈಸ್‌

05:55 AM Jun 10, 2020 | Lakshmi GovindaRaj |

ಬೆಂಗಳೂರು: ಕೆ.ಆರ್‌.ಮಾರುಕಟ್ಟೆ ಪೊಲೀಸ್‌ ಠಾಣೆಯ ಕಾನ್ಸ್‌ಸ್ಟೇಬಲ್‌ ಒಬ್ಬರಿಗೆ ಕೋವಿಡ್‌ 19 ದೃಢಪಟ್ಟ ಹಿನ್ನೆಲೆಯಲ್ಲಿ ಇಡೀ ಠಾಣೆಯನ್ನು ಸ್ಯಾನಿಟೈಸ್‌ ಮಾಡಿದ್ದು, ಅವರ ಸಂಪರ್ಕದಲ್ಲಿದ್ದ ಏಳು ಮಂದಿ ಸಿಬ್ಬಂದಿ, ಅಧಿಕಾರಿಗಳನ್ನು  ಕ್ವಾರಂಟೈನ್‌ ಮಾಡಲಾಗಿದೆ.

Advertisement

ಇತ್ತೀಚೆಗೆ ಇಲಾಖೆಗೆ ನೇಮಕಗೊಂಡ ಹೊಸ ಪೊಲೀಸ್‌ ಕಾನ್ಸ್‌ ಸ್ಟೇಬಲ್‌ಗ‌ಳನ್ನು ನಗರ ನಾನಾ ಪೊಲೀಸ್‌ ಠಾಣೆಗಳಿಗೆ ನೇಮಿಸಲಾಯಿತು. ಅದೇ ಕೆ.ಆರ್‌.ಮಾರುಕಟ್ಟೆ ಠಾಣೆಗೂ ಐದಾರು ಮಂದಿಯನ್ನು  ನೇಮಿಸಲಾಗಿತ್ತು.ಇದೀಗ ಈ ಕಾನ್ಸ್‌ಸ್ಟೇಬಲ್‌ ಗಳನ್ನು ಐಮಂಗಲದಲ್ಲಿರುವ ಪೊಲೀಸ್‌ ತರಬೇತಿ ಕೇಂದ್ರಕ್ಕೆ ಕಳುಹಿಸಬೇಕಿದೆ.

ಹೀಗಾಗಿ ಮೂರು ದಿನಗಳ ಹಿಂದೆ ಎಲ್ಲರಿಗೂ ಕೋವಿಡ್‌ 19 ಪರೀಕ್ಷೆ ನಡೆಸಿದ್ದು, ಸೋಮವಾರ ರಾತ್ರಿ ಬಂದ  ವರದಿಯಲ್ಲಿ ಈ ಪೈಕಿ ಒಬ್ಬರಿಗೆ ದೃಢಪಟ್ಟಿದೆ. ಹೀಗಾಗಿ ರಾತ್ರಿಯೇ ಅವರನ್ನು ಚಿಕಿತ್ಸೆಗೆ ದಾಖಲಿಸಿದ್ದು, ಅವರ ಜತೆ ಪ್ರಾಥಮಿಕ ಸಂಪರ್ಕದಲ್ಲಿದ್ದ ಏಳು ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು. ಇದರೊಂದಿಗೆ ಠಾಣೆಯನ್ನು ತಾತ್ಕಾಲಿಕವಾಗಿ ಬೆಳಗ್ಗೆವರೆಗೂ ಸೀಲ್‌ ಡೌನ್‌ ಮಾಡಲಾಗಿತ್ತು.

ಅನಂತರ ಇಡೀ ಠಾಣೆಗೆ ಸ್ಯಾನಿಟೈಸರ್‌ ಸಿಂಪಡಿಸಲಾಗಿದೆ. ಬಳಿಕ ಇದೀಗ ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಅದೇ  ಠಾಣೆಯಲ್ಲಿಯೇ ಕಾರ್ಯನಿರ್ವಹಣೆ  ಮಾಡಲಾಗುತ್ತಿದೆ ಎಂದು ಪೊಲೀಸ್‌ ಠಾಣೆಯ ಅಧಿಕಾರಿಗಳು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next