Advertisement

Panaji: ರಾಜ್ಯದಲ್ಲಿ ಹೆಚ್ಚಿದ ಸಾಂಕ್ರಾಮಿಕ ಕಣ್ಣಿನ ಕಾಯಿಲೆ; ಎಚ್ಚರಿಕೆ ಅಗತ್ಯ

02:53 PM Jul 29, 2023 | Team Udayavani |

ಪಣಜಿ: ರಾಜ್ಯದ್ಯಂತ ಸಾಮಾನ್ಯವಾಗಿ ಐಫ್ಲು ಎಂದು ಕರೆಯಲಾಗುವ ಕಣ್ಣು ಬೇನೆ ಪಣಜಿ ರಾಜ್ಯದಲ್ಲಿ ಈ ಸಾಂಕ್ರಾಮಿಕ ಕಣ್ಣಿನ ಕಾಯಿಲೆ ಹೆಚ್ಚಿದ್ದು, ನಾಗರಿಕರು ಸೂಕ್ತ ಕಾಳಜಿ ವಹಿಸಬೇಕಿದೆ. ಸೋಂಕು ಮುಖ್ಯವಾಗಿ ಶಾಲಾ ಮಕ್ಕಳಲ್ಲಿ ಕಂಡುಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

Advertisement

ಕಣ್ಣಿನ ನೋವು ಅಥವಾ ರೋಗ ಲಕ್ಷಣಗಳು ಕಂಡುಬಂದಲ್ಲಿ ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸದಂತೆ ಶಾಲಾ ಆಡಳಿತ ಮಂಡಳಿ ಪೋಷಕರಿಗೆ ಸೂಚನೆ ನೀಡಿದೆ. ಇದೊಂದು ಸಾಂಕ್ರಾಮಿಕ ರೋಗವಾಗಿದ್ದು, 4 ರಿಂದ 5 ದಿನಗಳಲ್ಲಿ ಗುಣವಾಗುತ್ತದೆ ಎನ್ನಲಾಗಿದೆ.

ಡಾ.ಕೌಶಿಕ್ ಧುಮೆ ಕಣ್ಣು ಬೇನೆಯ ಕುರಿತು ಮಾಹಿತಿ ನೀಡಿ, ಮುಂಗಾರು ಹಂಗಾಮಿನಲ್ಲಿ ಐಫ್ಲೂ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ರೋಗ ಈಗಾಗಲೇ ವೇಗವಾಗಿ ಹರಡುತ್ತಿದೆ. ಕೆಲವು ರೋಗಿಗಳು ಸೌಮ್ಯವಾದ ರೋಗಲಕ್ಷಣಗಳನ್ನು ಹೊಂದಿದ್ದರೆ, ಇನ್ನೂ ಕೆಲವರಿಗೆ ಕಣ್ಣು ಬಹಳವಾಗಿ ಕೆಂಪಗಾಗುವುದು ಮತ್ತು ಕಣ್ಣಿನಿಂದ ನೀರು ಬರುವುದು ಇಂತಹ ರೋಗ ಲಕ್ಷಣ ಕಂಡುಬರುತ್ತಿದೆ ಎಂದರು.

ಕಣ್ಣು ಬೇನೆಗೆ ಡ್ರಾಪ್ಸ್ ನೀಡಲಾಗುತ್ತದೆ. ಅನೇಕರಿಗೆ ವೈದ್ಯಕೀಯ ಚಿಕಿತ್ಸೆಯ ಅಗತ್ಯವೂ ಇಲ್ಲ. ರೋಗಿಗಳು ನಾಲ್ಕೈದು ದಿನಗಳವರೆಗೆ ತಮ್ಮ ಕಣ್ಣುಗಳನ್ನು ಶುದ್ಧ ನೀರಿನಿಂದ ತೊಳೆಯಲು ಸಲಹೆ ನೀಡಲಾಗುತ್ತದೆ ಎಂದರು.

ಕಣ್ಣು ನೋವಿನ ಲಕ್ಷಣಗಳು: ಕಣ್ಣುಗಳು ಕೆಂಪಗಾಗುವುದು, ಕಣ್ಣುಗಳ ಊತ, ತುರಿಕೆ, ಕಣ್ಣಿನಿಂದ ಬಿಳಿಯ ಅಂಟಾದ ದೃವ ಹೊರಬರುತ್ತದೆ. ಕಣ್ಣುಗಳು ಉರಿಯುತ್ತದೆ. ಬೆಳಕಿಗೆ ಸಂವೇದನಾಶೀಲನೆಯುಂಟಾಗುತ್ತದೆ.

Advertisement

ಯಾರು ಕ್ರಮಗಳನ್ನು ತೆಗೆದುಕೊಳ್ಳಬೇಕು?

ನಿಮಗೆ ಕಣ್ಣಿನ ಸೋಂಕು ಇದ್ದರೆ, ಮೊದಲು ವೈದ್ಯರನ್ನು ಸಂಪರ್ಕಿಸಿ, ಕಣ್ಣುಗಳಲ್ಲಿ ಉರಿ ಮತ್ತು ತುರಿಕೆಗೆ ಔಷಧಿ ತೆಗೆದುಕೊಳ್ಳಿ. ನಿಮ್ಮ ಸ್ವಂತ ಟವೆಲ್ ಮತ್ತು ಕರವಸ್ತ್ರಗಳನ್ನು ಬಳಸಿ, ಇತರರಿಗೆ ನೀಡಬೇಡಿ. ಸೋಂಕಿಗೆ ಒಳಗಾಗಿದ್ದರೆ, ಕನ್ನಡಕವನ್ನು ಧರಿಸಿ, ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ಧರಿಸಬೇಡಿ. ನಿಮ್ಮ ಮುಖವನ್ನು ಸೋಪಿನಿಂದ ತೊಳೆಯಬೇಡಿ. ನಿಮ್ಮ ಕೈಗಳಿಂದ ನಿಮ್ಮ ಕಣ್ಣುಗಳನ್ನು ಉಜ್ಜಬೇಡಿ. ಕಣ್ಣಿಗೆ ಐ ಡ್ರಾಪ್ಸ್  ಹಾಕುವ ಮೊದಲು ನಿಮ್ಮ ಕೈಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next