Advertisement

ಈಡನ್‌ ಸಿಬಂದಿಗೆ ಸೋಂಕು; 7 ದಿನ ಕ್ಯಾಬ್‌ ಕಚೇರಿ ಬಂದ್‌

11:04 PM Jul 05, 2020 | Sriram |

ಕೋಲ್ಕತಾ ಇಲ್ಲಿನ ಐತಿಹಾಸಿಕ ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣದ ಸಿಬಂದಿಯೊಬ್ಬರಿಗೆ ಕೋವಿಡ್‌-19 ಸೋಂಕು ದೃಢಪಟ್ಟಿರುವುದರಿಂದ ಬಂಗಾಲ ಕ್ರಿಕೆಟ್‌ ಮಂಡಳಿಯ (ಸಿಎಬಿ-ಕ್ಯಾಬ್‌) ಪ್ರಧಾನ ಕಚೇರಿಯನ್ನು 7 ದಿನ ಮುಚ್ಚಲು ತೀರ್ಮಾನಿಸಲಾಗಿದೆ.

Advertisement

“ಸಿವಿಲ್‌ ಇಂಜಿನಿಯರಿಂಗ್‌ ವಿಭಾಗದ ತಾತ್ಕಾಲಿಕ ನೆಲೆಯ ಉದ್ಯೋಗಿಯೊಬ್ಬರಿಗೆ ಶನಿವಾರ ಕೋವಿಡ್‌-19 ಪಾಸಿಟಿವ್‌ ಇರುವುದು ಪತ್ತೆಯಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುರಕ್ಷತೆಯ ಕ್ರಮವಾಗಿ ಮುಂದಿನ ಒಂದು ವಾರ ಕಾಲ ಕಚೇರಿಯನ್ನು ಮುಚ್ಚಲಾಗುವುದು’ ಎಂದು ಸಿಎಬಿ ಅಧ್ಯಕ್ಷ ಅವಿಷೇಕ್‌ ದಾಲಿ¾ಯಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next