Advertisement
ಅಮೆರಿಕ, ಯುರೋಪ್‌ಗ್ಳಲ್ಲಿ ಏಕಾಏಕಿ ಸೋಂಕಿನ ವ್ಯಾಪಿಸುವಿಕೆ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತದ ಕೊರೊನಾ ಸ್ಥಿತಿ ಮಹತ್ವ ಪಡೆದಿದೆ. ಶನಿವಾರ ಬೆಳಗ್ಗೆ 8ರಿಂದ ಭಾನುವಾರ ಬೆಳಗ್ಗೆ 8ರವರೆಗೆ ದೇಶಾದ್ಯಂತ 41,100 ಮಂದಿಗೆ ಸೋಂಕು ದೃಢಪಟ್ಟಿದ್ದು, 24 ಗಂಟೆಗಳ ಈ ಅವಧಿಯಲ್ಲಿ 42,156 ಮಂದಿ ಗುಣಮುಖರಾಗಿದ್ದಾರೆ. ಈ ಮೂಲಕ ಸಕ್ರಿಯ ಸೋಂಕಿತರ ಸಂಖ್ಯೆಯೂ ಇಳಿಮುಖವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಈ ಹಿಂದೆ, ದೈನಂದಿನ ಪ್ರಕರಣ 50 ಸಾವಿರ ದಾಟಿದ್ದು ನ.7ರಂದು. ಅಂದರೆ, ಸತತ 8 ದಿನಗಳಿಂದಲೂ ಈ ಸಂಖ್ಯೆ 50 ಸಾವಿರದ ಒಳಗೇ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೊರೊನಾ ಮಾರ್ಗಸೂಚಿಯನ್ವಯ ಇತ್ತೀಚೆಗೆ ನಡೆದ ಬಿಹಾರ ವಿಧಾನಸಭೆ ಚುನಾವಣೆ ವೇಳೆ ಬರೋಬ್ಬರಿ 160 ಟನ್‌ಗಳಷ್ಟು ಜೈವಿಕವೈದ್ಯಕೀಯ ತ್ಯಾಜ್ಯ ಉತ್ಪತ್ತಿಯಾಗಿದೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಕೈಗವಸುಗಳು, ಮಾಸ್ಕ್ಗಳು, ಸ್ಯಾನಿಟೈಸರ್ ಬಾಟಲಿಗಳ ರೂಪದಲ್ಲಿ ಈ ಬಯೋಮೆಡಿಕಲ್ ತ್ಯಾಜ್ಯ ಉತ್ಪತ್ತಿಯಾಗಿವೆ. ಮತದಾರರು, ಚುನಾವಣಾ ಸಿಬ್ಬಂದಿ, ಭದ್ರತಾ ಸಿಬ್ಬಂದಿಯ ಸುರಕ್ಷತೆಯ ದೃಷ್ಟಿಯಿಂದ ಚುನಾವಣಾ ಆಯೋಗವು ಸೂಕ್ತ ಕ್ರಮ ಕೈಗೊಂಡಿತ್ತು. ಇವಿಎಂ ಗುಂಡಿ ಒತ್ತಲು ಮತದಾರರಿಗೂ ಬಳಸಿ ಬಿಸಾಕಬಹುದಾದ ಕೈಗವಸುಗಳನ್ನು ಒದಗಿಸಿತ್ತು. ಜತೆಗೆ, ಸಿಬ್ಬಂದಿಗೆಂದೇ ಫೇಸ್‌ಶೀಲ್ಡ್, ಮಾಸ್ಕ್ಗಳನ್ನೂ ನೀಡಿತ್ತು. ಇದರ ಪರಿಣಾಮವಾಗಿ 160 ಟನ್‌ಗಳಷ್ಟು ಬಯೋಮೆಡಿಕಲ್ ತ್ಯಾಜ್ಯ ಸೃಷ್ಟಿಯಾಗಿದೆ ಎಂದು ಹೇಳಲಾಗಿದೆ.
Related Articles
ಫೇಸ್‌ಶೀಲ್ಡ್ 18 ಲಕ್ಷ
ಮಾಸ್ಕ್ಗಳು 70ಲಕ್ಷ
ರಬ್ಬರ್ ಗ್ಲೌಸ್ 5.4 ಲಕ್ಷ
ಪಾಲಿಥೀನ್ ಗ್ಲೌಸ್ 7.21 ಕೋಟಿ
ಸ್ಯಾನಿಟೈಸರ್ 29 ಲಕ್ಷ
ಉತ್ಪತ್ತಿಯಾದ ತ್ಯಾಜ್ಯ 160ಟನ್
Advertisement