Advertisement

ಮಕ್ಕಳಲ್ಲಿ ಸೋಂಕು ಶೇ. 6ಕ್ಕಿಂತ ಕಡಿಮೆ; ಗುಣಮುಖ ಪ್ರಮಾಣ 99%

12:15 AM Nov 09, 2020 | mahesh |

ಬೆಂಗಳೂರು: ರಾಜ್ಯದ ಮಕ್ಕಳಲ್ಲಿ ಕಾಣಿಸಿಕೊಳ್ಳು ತ್ತಿರುವ ಕೋವಿಡ್ ಸೋಂಕು ಪ್ರಮಾಣ ಶೇ. 6ಕ್ಕಿಂತ ಕಡಿಮೆ ಇದೆ. ಅದರಲ್ಲೂ 10 ವರ್ಷದ ಒಳಗಿನವರಲ್ಲಿ ಶೇ. 3.5 ರಷ್ಟಿದೆ. ಶಾಲೆ ಪುನರಾರಂಭಿಸಲು ಸರಕಾರ ನಡೆಸಿರುವ ಚಿಂತನೆಗೆ ಆರೋಗ್ಯ ಇಲಾಖೆ ನೀಡಿದ ಈ ಅಂಕಿಅಂಶ ಪೂರಕವಾಗಿದೆ.

Advertisement

ಕಳೆದ 8 ತಿಂಗಳುಗಳಲ್ಲಿ ರಾಜ್ಯಾದ್ಯಂತ 8.32 ಲಕ್ಷ ಸೋಂಕು ಪ್ರಕರಣಗಳು ದಾಖಲಾಗಿವೆ. ಈ ಪೈಕಿ 15 ವರ್ಷದೊಳಗಿನ ಮಕ್ಕಳ ಸಂಖ್ಯೆ 50-60 ಸಾವಿರ ಇದ್ದು, 28,964 ಮಂದಿ 10 ವರ್ಷದ ಒಳಗಿನವರು. ಚೇತರಿ ಸಿಕೊಂಡವರ ಪ್ರಮಾಣ ಶೇ. 99ರಷ್ಟಿದೆ. ಇದು ಶಾಲೆ ಪುನರಾರಂಭಿಸುವ ಚಿಂತನೆಗೆ ಪೂರಕವಾಗಿದೆ.

ಮುಖ್ಯವಾಗಿ ಮಕ್ಕಳು ಹೆಚ್ಚು ಹೊರಗೆ ಬಂದಿಲ್ಲ. ವೈರಸ್‌ಗಳು ದೇಹ ಸೇರಲು ರಹದಾರಿಯಾದ ಏಸ್‌ ರಿಸೆಪ್ಟರ್ ಮಕ್ಕಳಲ್ಲಿ ಕಡಿಮೆ ಇರುತ್ತವೆ. ರೋಗನಿರೋಧಕ ಶಕ್ತಿ ಹೆಚ್ಚಿರುತ್ತದೆ. ಇವೆಲ್ಲವೂ ಕಡಿಮೆ ಸೋಂಕಿಗೆ ಕಾರಣ ಎಂದು ಮಕ್ಕಳ ತಜ್ಞರು ಹೇಳಿದ್ದಾರೆ. ಆದರೆ ಮಕ್ಕಳು “ಕೊರೊನಾ ವಾಹಕರು’ ಆಗುವ ಸಾಧ್ಯತೆ ಇದ್ದು, ಶಾಲೆ ಪುನಾರಂಭದ ಬಗ್ಗೆ ಮಕ್ಕಳ ತಜ್ಞರಿಂದಲೂ ಸಲಹೆ ಪಡೆಯಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next