Advertisement

ಬೆಂಗಳೂರು-ದೆಹಲಿಯಿಂದ ಬಂದ ಇಬ್ಬರಿಗೆ ಸೋಂಕು

04:48 PM Jul 11, 2020 | Suhan S |

ಗಜೇಂದ್ರಗಡ: ಕೋಟೆ ನಾಡಿನಲ್ಲಿ ದಿನದಿಂದ ದಿನಕ್ಕೆ ಕೋವಿಡ್‌ 19 ಸ್ಫೋಟಗೊಳ್ಳುತ್ತಿದ್ದು, ಬೆಂಗಳೂರಿನಿಂದ ಆಗಮಿಸಿದ್ದ ವ್ಯಕ್ತಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಗದಗ ಕೋವಿಡ್‌ ಚಿಕಿತ್ಸಾ ಕೇಂದ್ರಕ್ಕೆ ಸೋಂಕಿತನನ್ನು ಶುಕ್ರವಾರ ಕರೆದೊಯ್ಯಲಾಯಿತು.

Advertisement

ಪಟ್ಟಣದ ಪೂಜಾರ ಪ್ಲಾಟ್‌ ನಿವಾಸಿಯಾಗಿರುವ 52 ವರ್ಷದ ವ್ಯಕ್ತಿ ಜೂ. 23ರಂದು ಬೆಂಗಳೂರಿನಿಂದ ಸ್ವಂತಕಾರಿನಲ್ಲಿ ಪಟ್ಟಣಕ್ಕೆ ಆಗಮಿಸಿದ್ದಾನೆ. ಹೋಮ್‌ ಕ್ವಾರಂಟೈನ್‌ ಆಗಿದ್ದ ಸೋಂಕಿತನಿಗೆ ಪ್ರಾರಂಭದಲ್ಲಿ ನೆಗಡಿ, ಕೆಮ್ಮು, ಜ್ವರ ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಚಿಕಿತ್ಸೆಗೆಂದು ಪಟ್ಟಣದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಗುಣಮುಖರಾಗದ ಹಿನ್ನೆಲೆಯಲ್ಲಿ ಜು. 7ರಂದು ಗದಗನ ಜಿಮ್ಸ್‌ನಲ್ಲಿ ಕೋವಿಡ್‌ ಪರೀಕ್ಷೆಗೆ ಒಳಪಟ್ಟಿದ್ದಾರೆ.

ಸ್ಥಳೀಯ ವ್ಯಕ್ತಿಗೆ ಕೋವಿಡ್‌ 19 ಸೋಂಕು ಇರುವುದು ಶುಕ್ರವಾರ ದೃಢಪಟ್ಟ ಹಿನ್ನೆಲೆಯಲ್ಲಿ ಸ್ಥಳೀಯ ಆರೋಗ್ಯ ಇಲಾಖೆ ಅಧಿಕಾರಿಗಳು ಆಗಮಿಸಿ, ಸೋಂಕಿತನನ್ನು ಗದಗ ಕೋವಿಡ್‌ 19 ಚಿಕಿತ್ಸಾ ಕೇಂದ್ರಕ್ಕೆ ಆ್ಯಂಬೂಲೆನ್ಸ್‌ ಮೂಲಕ ರವಾನಿಸ ಲಾಯಿತು. ಸೋಂಕಿತನ ಟ್ರಾವೆಲ್‌ ಹಿಸ್ಟರಿ ಕಲೆ ಹಾಕಿದ ಅಧಿಕಾರಿಗಳು, ಪ್ರಾಥಮಿಕ ಸಂಪರ್ಕದಲ್ಲಿದ್ದ 10 ಜನ ಕುಟುಂಬಸ್ಥರನ್ನು ರೋಣದಲ್ಲಿನ ಸಾಂಸ್ಥಿಕ ಕ್ವಾರಂಟೈನ್‌ಗೆ ಕಳುಹಿಸಲಾಯಿತು.

30ಕ್ಕೂ ಅಧಿಕ ದ್ವಿತೀಯ ಸಂಪರ್ಕಿತರನ್ನು ಹೋಂ ಕ್ವಾರಂಟೈನ್‌ಗೆ ಸೂಚಿಸಿದ್ದಾರೆ. ಸೋಂಕಿತ ಖಾಸಗಿ ಆಸ್ಪತ್ರೆಗೆ ಭೇಟಿ: ಕೋವಿಡ್ ಸೋಂಕಿತ ವ್ಯಕ್ತಿ ಕಳೆದೊಂದು ವಾರದಿಂದ ಪಟ್ಟಣದ ಮೂರು ಖಾಸಗಿ ಆಸ್ಪತ್ರೆಗಳಿಗೆ ತೆರಳಿ ಚಿಕಿತ್ಸೆ ಪಡೆದಿದ್ದು, ಇದೀಗ ಪಟ್ಟಣದ ಜನತೆಯನ್ನು ಬೆಚ್ಚಿ ಬೀಳಿಸಿದೆ. ಮುಂಜಾಗ್ರತಾ ಕ್ರಮವಾಗಿ ಆರೋಗ್ಯ ಇಲಾಖೆ ಮತ್ತು ಪುರಸಭೆ ಅಧಿಕಾರಿಗಳು ಖಾಸಗಿ ಆಸ್ಪತ್ರೆಗಳನ್ನು 24 ಗಂಟೆಗಳ ಕಾಲ ಸ್ಯಾನಿಟೈಸೇಷನ್‌ಗೆ ಒಳಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next