Advertisement

ಮೂರು ಲಕ್ಷ ದಾಟಿದ ಸೋಂಕು; ಮಹಾರಾಷ್ಟ್ರದಲ್ಲಿ ಲಕ್ಷ ಮೀರಿದ ಕೋವಿಡ್-19 ಸೋಂಕು ಪೀಡಿತರು

12:34 AM Jun 13, 2020 | Sriram |

ಹೊಸದಿಲ್ಲಿ: ಲಾಕ್‌ಡೌನ್‌ ಸಡಿಲಿಕೆಬಳಿಕ ದೇಶದಲ್ಲಿ ಕೋವಿಡ್-19 ಸೋಂಕುಪೀಡಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರುತ್ತಲೇ ಇದ್ದು, ಶುಕ್ರವಾರ ರಾತ್ರಿ ವೇಳೆಗೆ 3 ಲಕ್ಷ ದಾಟಿದೆ. ಅತ್ಯಂತ ಗಂಭೀರ ಪರಿಸ್ಥಿತಿ ಎದುರಿಸುತ್ತಿರುವ ಮಹಾರಾಷ್ಟ್ರದಲ್ಲಿ ಪ್ರಕರಣಗಳ ಸಂಖ್ಯೆ 1 ಲಕ್ಷ ದಾಟಿದೆ. ಗುಣಮುಖರಾದವರ ಸಂಖ್ಯೆ 1.50 ಲಕ್ಷಕ್ಕೆ ಏರಿದೆ.

Advertisement

ಸದ್ಯ ಭಾರತ ಜಾಗತಿಕ ಮಟ್ಟದಲ್ಲಿ ನಾಲ್ಕನೇ ಸ್ಥಾನಕ್ಕೇರಿದ್ದು, ಪ್ರತೀ ದಿನವೂ ಸುಮಾರು 10 ಸಾವಿರದ ಆಸುಪಾಸಿನಲ್ಲಿ ಪ್ರಕರಣಗಳು ಪತ್ತೆಯಾಗುತ್ತಿವೆ. ಲಾಕ್‌ಡೌನ್‌ ಸಡಿಲಿಕೆಯ ಬಳಿಕ ಅನ್‌ಲಾಕ್‌ 1.0 ಅವಧಿಯಲ್ಲೇ ಹೆಚ್ಚು ಪ್ರಕರಣಗಳು ಕಂಡುಬರುತ್ತಿರುವುದು ತೀರಾ ಆತಂಕ ಉಂಟು ಮಾಡಿದೆ.

ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಜೂ.16 ಮತ್ತು 17ರಂದು ಮತ್ತೆ ಎಲ್ಲ ಸಿಎಂಗಳ ಸಭೆ ಕರೆದಿದ್ದಾರೆ. ಈ ಸಂದರ್ಭ ಮುಂದಿನ ಕ್ರಮಗಳ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.

ಮಹಾರಾಷ್ಟ್ರ ರಾಜ್ಯವೊಂದರಲ್ಲೇ ಸೋಂಕುಪೀಡಿತರ ಸಂಖ್ಯೆ 1.01 ಲಕ್ಷಕ್ಕೆ ಏರಿದೆ. ಇಲ್ಲಿ ಸಾವಿನ ಸಂಖ್ಯೆ 3,717ಕ್ಕೆ ತಲುಪಿದೆ. ಶುಕ್ರವಾರ ಇಲ್ಲಿ 3,493 ಪ್ರಕರಣಗಳು ಕಂಡುಬಂದಿವೆ. ಸದ್ಯ ಈ ರಾಜ್ಯದಲ್ಲಿ 51 ಸಾವಿರ ಸಕ್ರಿಯ ಪ್ರಕರಣಗಳಿದ್ದು, 46 ಸಾವಿರ ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ತಮಿಳುನಾಡಿನಲ್ಲಿ 40 ಸಾವಿರ
ತ.ನಾಡಿನಲ್ಲೂ ಸೋಂಕುಪೀಡಿತರ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಶುಕ್ರವಾರ ಮತ್ತೆ 1,982 ಪ್ರಕರಣ ಕಂಡುಬಂದಿದ್ದು ಒಟ್ಟಾರೆ ಸಂಖ್ಯೆ 40 ಸಾವಿರ ದಾಟಿದೆ. 1,342 ಮಂದಿ ಗುಣ ಹೊಂದಿದ್ದಾರೆ.

Advertisement

ದಿಲ್ಲಿಯಲ್ಲಿ 34 ಸಾವಿರಕ್ಕೂ ಹೆಚ್ಚು ಪ್ರಕರಣಗಳಿದ್ದರೆ, ಗುಜರಾತ್‌ನಲ್ಲಿ 22 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಕಂಡುಬಂದಿವೆ.

ಗುಣಮುಖ ಹೊಂದಿದವರ ಸಂಖ್ಯೆ 1.50 ಲಕ್ಷಕ್ಕೆ ಏರಿಕೆ ರಾಜ್ಯದಲ್ಲಿ ಶುಕ್ರವಾರ ಕೋವಿಡ್-19 ಸೋಂಕಿಗೆ ಏಳು ಮಂದಿ ಬಲಿಯಾಗಿದ್ದಾರೆ. ಶುಕ್ರವಾರ 271 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 79ಕ್ಕೆ, ಪ್ರಕರಣಗಳ ಸಂಖ್ಯೆ 6,516ಕ್ಕೆ ಏರಿದೆ.

Advertisement

Udayavani is now on Telegram. Click here to join our channel and stay updated with the latest news.

Next