Advertisement

ಸೋಂಕು ಪ್ರಕರಣ ಕಡಿತ: ಬೀಜಿಂಗ್‌ ಸೋಂಕು ಮುಕ್ತ: ನಿರ್ಬಂಧ ಸಡಿಲಿಕೆ

01:30 AM Aug 25, 2020 | mahesh |

ಬೀಜಿಂಗ್‌: ಕಳೆದ 13 ದಿನಗಳಿಂದ ದೇಶದಲ್ಲಿ ಹೊಸ ಕೋವಿಡ್ ಸೋಂಕು ಪ್ರಕರಣ ಪತ್ತೆಯಾಗದ ಕಾರಣ ಇಲ್ಲಿನ ಆರೋಗ್ಯ ಇಲಾಖೆ ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ರೂಪಿಸಿದ್ದ ಮಾರ್ಗಸೂಚಿಯಲ್ಲಿನ ಕೆಲವು ನಿರ್ಬಂಧಗಳನ್ನು ಸಡಿಲಗೊಳಿಸಿದೆ.

Advertisement

ಅನ್‌ಲಾಕ್‌ ಬಳಿಕ ಸತತ ಎರಡನೇ ಬಾರಿಗೆ ಬೀಜಿಂಗ್‌ನಲ್ಲಿ ನಿಯಮ ಸಡಿಲಿಕೆ ಮಾಡುತ್ತಿದ್ದು, ಈ ಬಾರಿ ಕೋವಿಡ್ ಸುರಕ್ಷತಾ ಮಾರ್ಗಸೂಚಿಗಳನ್ನು ಸಡಿಲಗೊಳಿಸಲಾಗಿದೆ. ಆದರೆ ಸೋಂಕು ಪ್ರಕರಣಗಳು ಇಳಿಕೆಯಾದ ಹಿನ್ನೆಲೆಯಲ್ಲಿ ಮಾರ್ಗಸೂಚಿಯ ನಿರ್ಬಂಧಗಳನ್ನು ಸಡಿಲಗೊಳಿಸಿದ್ದರೂ, ಬೀಜಿಂಗ್‌ನ ಕೆಲವು ಭಾಗಗಳಲ್ಲಿ ನಾಗರಿಕರು ಹಳೆಯ ಸುರಕ್ಷತಾ ಕ್ರಮಗಳನ್ನೇ ಅನುಸರಿಸುತ್ತಿದ್ದಾರೆ ಎಂದು ರಾಯಿಟರ್ಸ್‌ ವರದಿ ಮಾಡಿದೆ.

ಈ ಬಗ್ಗೆ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿರುವ ಕೆಲವರು, “ಮಾಸ್ಕ್ ಧರಿಸುತ್ತಿರುವುದು ಮನದಲ್ಲೊಂದು ಸುರಕ್ಷತಾ ಭಾವನೆ ಮೂಡುತ್ತಿದೆ’ ಎಂದು ಹೇಳಿದ್ದರೆ, ಇನ್ನೂ ಕೆಲವರು “ಸುತ್ತಲಿನ ಜನರು ಬಳಸುತ್ತಿರುವುದರಿಂದ, ನಾವೂ ಬಳಸಬೇಕೆಂಬ ಒತ್ತಡದಿಂದಲೂ, ಮಾಸ್ಕ್ ಧರಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ.

ಇನ್ನು ಇಲ್ಲಿನ ಕಾವೊ ಎಂಬ ವ್ಯಕ್ತಿ ನಿಯಮ ಸಡಿಲಿಕೆ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದು, ನಾನು ಯಾವಾಗ ಬೇಕಾದರೂ ಮಾಸ್ಕ ಇಲ್ಲದೇ ಓಡಾಡ ಬಲ್ಲೆ. ಆದರೆ, ನನ್ನ ಸುತ್ತಲಿನವರು ಅದನ್ನು ಒಪ್ಪಿಕೊಳ್ಳುತ್ತಾರೆಯೇ..? ಎಂದು ಪ್ರಶ್ನಿಸಿದ್ದು, ನಾನು ಮಾಸ್ಕ್ ಧರಿಸದಿದ್ದರೆ ಸುತ್ತಲಿನವರು ಭೀತಿಗೊಳ್ಳಗುತ್ತಾರೆ, ಜತೆಗೆ ನಮ್ಮ ವಿರುದ್ಧ ಅಸಹನೆಯನ್ನು ಹೊರ ಹಾಕುತ್ತಾರೆ. ಅದಕ್ಕಾಗಿ ನಾನು ಹೆದರಿಕೊಂಡು ಮಾಸ್ಕ್ ಹಾಕಿಕೊಳ್ಳುತ್ತೇನೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next