Advertisement
ಭಾರತದಲ್ಲಿ ಈವರೆಗೆ ದಾಖಲಾಗಿರುವ ಪ್ರಕರಣಗಳಲ್ಲಿ ಐದನೇ ಒಂದರಷ್ಟು ಪ್ರಕರಣಗಳಿರುವುದು ಮುಂಬಯಿನಲ್ಲಿ. ಆ ನಗರದ ಜನಸಂಖ್ಯೆಯಲ್ಲಿ ಶೇ. 0.22ರಷ್ಟು ಮಂದಿ ಈಗಾಗಲೇ ಸೋಂಕಿಗೆ ತುತ್ತಾಗಿದ್ದಾರೆ. ಹಾಗಾಗಿ, ಮುಂಬಯಿ ಈಗಾಗಲೇ ದೇಶದ ಹಾಟ್‌ಸ್ಪಾಟ್ ಎಂದು ಗುರುತಿಸಲ್ಪಟ್ಟಿದೆ. ಜೊತೆಗೆ, ದಿನದಿನಕ್ಕೆ ಅಲ್ಲಿ ದಾಖಲಾಗುತ್ತಿರುವ ಪ್ರಕರಣಗಳ ಸಂಖ್ಯೆ ವಿಶ್ವದ ಬೇರ್ಯಾವುದೇ ನಗರಗಳಲ್ಲಿ ದಾಖಲಾಗುತ್ತಿರುವ ಪ್ರಕರಣಗಳಿಗಿಂತ ಹೆಚ್ಚಾಗಿದೆ.
Related Articles
Advertisement
ವೈರಾಣು ಪರೀಕ್ಷೆಗೆ ಹೊಸ ಬಗೆಯ ವ್ಯವಸ್ಥೆವೈರಾಣುಗಳನ್ನು ಕರಾರುವಾಕ್ ಆಗಿ ಪರೀಕ್ಷಿಸುವ ಹೊಸತೊಂದು ಇಂಟಲಿಜೆನ್ಸ್ ಟೆಸ್ಟಿಂಗ್ ಎಂಬ ಹೊಸ ರೀತಿಯ ಪರೀಕ್ಷಾ ವ್ಯವಸ್ಥೆಯೊಂದನ್ನು ರೂಪುಗೊಳಿಸಿರುವುದಾಗಿ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್) ತಿಳಿಸಿದೆ. ದೇಶದಲ್ಲಿ ವೈರಾಣುಗಳ ಪರೀಕ್ಷೆಗಾಗಿ ಒಟ್ಟು 610 ಪ್ರಯೋಗಾಲಯಗಳು ಇವೆ. ಅವುಗಳಲ್ಲಿ 432 ಪ್ರಯೋಗಾಲಯಗಳು ಸರ್ಕಾರದ ಸ್ವಾಮ್ಯದಲ್ಲಿದ್ದು, 178 ಪ್ರಯೋಗಾಲಯಗಳು ಖಾಸಗಿ ಸಂಸ್ಥೆಗಳದ್ದಾಗಿವೆ. ಇವುಗಳಲ್ಲಿ ದಿನವೊಂದಕ್ಕೆ 1.1 ಲಕ್ಷ ಜನರನ್ನು ಪರೀಕ್ಷೆಗೊಳಪಡಿಸಲಾಗುತ್ತಿತ್ತು. ಈಗ, ಕೋವಿಡ್ ಸೋಂಕು ಕಾಣಿಸಿಕೊಂಡ ಮೇಲೆ ಇವುಗಳ ಸಾಮರ್ಥಯವನ್ನು ಹೆಚ್ಚಿಸಲಾಗಿದ್ದು, ದಿನ ವೊಂದಕ್ಕೆ 1.4 ಲಕ್ಷ ಜನರನ್ನು ಪರೀಕ್ಷೆಗೊಳಿಸಲಾಗುತ್ತಿದೆ. ಹೊಸ ವ್ಯವಸ್ಥೆಯಡಿ ದಿನವೊಂದಕ್ಕೆ 2 ಲಕ್ಷ ಜನರನ್ನು ತಪಾಸಣೆಗೊಳಪಡಿಸಬಹುದಾಗಿದೆ ಎಂದು ಸಂಸ್ಥೆ ತಿಳಿಸಿದೆ. ಪಿಪಿಇ, ಮಾಸ್ಕ್ ತಯಾರಿಕೆಗೆ ವೇಗ
ದೇಶದಲ್ಲಿ ಪಿಪಿಇ (ವೈಯಕ್ತಿಕ ಸುರಕ್ಷಾ ಉಡುಗೆ) ಮತ್ತು ಎನ್95 ಮಾಸ್ಕ್ ತಯಾರಿಕೆ ಪ್ರಕ್ರಿಯೆ ವೇಗ ಪಡೆದಿದೆ. ಪ್ರತಿ ದಿನ ತಲಾ 3 ಲಕ್ಷ ಪಿಪಿಇ ಮತ್ತು ಮಾಸ್ಕ್ಗಳನ್ನು ತಯಾರಿಸಲಾಗುತ್ತಿದೆ. ಅಲ್ಲದೆ, ಕಠಿಣ ಶಿಷ್ಟಾಚಾರಗಳ ಮೂಲಕ ಅವುಗಳ ಗುಣಮಟ್ಟವನ್ನೂ ದೃಢಪಡಿಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ. ಪಿಪಿಇ ಗುಣಮಟ್ಟ ಕುರಿತು ಕೆಲವು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳಿಗೆ ಸಂಬಂಧಿಸಿದಂತೆ ಈ ಸ್ಪಷ್ಟನೆ ನೀಡಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯದ ವ್ಯಾಪ್ತಿಯಲ್ಲಿ ಆಸ್ಪತ್ರೆಗಳು ಹಾಗೂ ಆರೋಗ್ಯಸೇವಾ ಸಂಸ್ಥೆಗಳಿಗೆ ಪಿಪಿಇಗಳನ್ನು ಖರೀದಿಸುವ ಸಂಸ್ಥೆ ಎಚ್‌ಎಲ್ ಎಲ್ ಲೈಫ್ ಕೇರ್ ಜವಳಿ ಸಚಿವಾಲಯವು ಸೂಚಿಸಿರುವ 8 ಲ್ಯಾಬ್ ಗಳ ಪೈಕಿ ಒಂದರಿಂದ ಪರೀಕ್ಷೆಗೆ ಒಳಪಡಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಅದರ ಒಪ್ಪಿಗೆ ದೊರೆತ ಬಳಿಕವೇ ಉತ್ಪಾದಕರು ಅಥವಾ ಪೂರೈಕೆದಾರರಿಂದ ಪಿಪಿಇಗಳನ್ನು ಪಡೆಯಲಾಗುತ್ತದೆ. ತದನಂತರವೂ ಸಚಿವಾಲಯದ ತಾಂತ್ರಿಕ ಸಮಿತಿಯು ಉತ್ಪನ್ನದ ಗುಣಮಟ್ಟದ ಪರೀಕ್ಷೆ ನಡೆಸುತ್ತದೆ ಎಂದು ಸರಕಾರ ತಿಳಿಸಿದೆ. ಯಾವುದಾದರೂ ಲೋಪಗಳು ಕಂಡುಬಂದರೆ ಕೂಡಲೇ ಆ ಕಂಪನಿಯನ್ನು ಅನರ್ಹ ಎಂದು ಘೋಷಿಸಲಾಗುತ್ತದೆ ಎಂದೂ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಜತೆಗೆ, ಈವರೆಗೆ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಸುಮಾರು 111 ಲಕ್ಷ ಎನ್ 95 ಮಾಸ್ಕ್ ಗಳು ಮತ್ತು 74.48 ಲಕ್ಷ ಪಿಪಿಇಗಳನ್ನು ಪೂರೈಸಲಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.