Advertisement

ಸೋಂಕಿತರ ಬೀದಿ ಸೀಲ್‌ಡೌನ್‌

09:05 AM Aug 11, 2020 | Team Udayavani |

ಬರಗೂರು: ಶಿರಾ ತಾಲೂಕುಹುಲಿಕುಂಟೆ ಹೋಬಳಿಯ ದೊಡ್ಡ ಬಾಣಗೆರೆ ಗ್ರಾಪಂ ವ್ಯಾಪ್ತಿಯ ಕುರುಬರ ರಾಮಹಳ್ಳಿ ಹಾಗೂ ಬರಗೂರು ಗ್ರಾಪಂ ವ್ಯಾಪ್ತಿಯ ರಂಗಾಪುರ ಗ್ರಾಮಗಳಲ್ಲಿ ಭಾನುವಾರ ಕೋವಿಡ್ ಪಾಸಿಟೀವ್‌ ಕಂಡುಬಂದ ಹಿನ್ನೆಲೆಯಲ್ಲಿ ಸೋಂಕಿತರ ಬೀದಿಗಳನ್ನು ಸೀಲ್‌ ಡೌನ್‌ ಮಾಡಲಾಗಿದೆ.

Advertisement

ತಾಲೂಕಿನ ದೊಡ್ಡಬಾಣಗೆರೆ ಗ್ರಾಪಂನ ಕುರುಬರರಾಮನಹಳ್ಳಿಯ ಯುವತಿ ಹಾಗೂ ಇಬ್ಬರು ಯುವಕರಿಗೆ ಕೋವಿಡ್ ಪಾಸಿಟಿವ್‌ ಬಂದಿದೆ. ರಂಗಾಪುರ ಗ್ರಾಮದ ಓರ್ವ ಮಹಿಳೆಗೆ ಕೋವಿಡ್ ಪಾಸಿಟಿವ್‌ ಕಂಡು ಬಂದಿದ್ದು ಇವರು ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ಸಂಬಂಧಿಕರ ಮನೆಗೆ ಹೋಗಿ ಬಂದಿದ್ದರು. ಬರಗೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪರೀಕ್ಷಿಸಿ ಸ್ವಾಬ್‌ ಟೆಸ್ಟ್‌ ಮಾಡಿಸಿದಾಗ ಕೋವಿಡ್ ಪಾಸಿಟಿವ್‌ ಕಂಡು ಬಂದಿದ್ದು ಸೋಂಕಿತರ ಬೀದಿಯನ್ನು ಸೀಲ್‌ಡೌನ್‌ ಮಾಡಲಾಗಿದೆ. ರಂಗಾಪುರ ಗ್ರಾಮದ ಸೋಕಿತೆಯ ಸಂಪರ್ಕದಲ್ಲಿದ್ದ 49 ಮಂದಿಯನ್ನು ಸ್ವಾಬ್‌ ಟೆಸ್ಟ್‌ ಮಾಡಿ ಹೋಂ ಕ್ವಾರಂಟೈನ್‌ ಮಾಡಲಾಗಿದೆ. ಗ್ರಾಪಂ ಅಭಿವೃದ್ಧಿ ಅಧಿಕಾರಿ ಅನಿತಾ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ರಮೇಶ್‌, ಗ್ರಾಪಂ ಬಿಲ್‌ ಕಲೆಕ್ಟರ್‌ ಲಕ್ಷ್ಮಣ, ಹಿರಿಯ ಆರೋಗ್ಯ ಮಹಿಳಾ ಸಹಾಯಕಿ ಲತಾ, ಆರೋಗ್ಯ ಸಿಬ್ಬಂದಿ ಪುಟ್ಟರಾಜು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next