Advertisement
ಕೋವಿಡ್-19 ಸೋಂಕಿತರ ಪ್ರಾಥಮಿಕ ಸಂಪರ್ಕ ವ್ಯಕ್ತಿ ಗಳಲ್ಲಿಯೇ ಹೆಚ್ಚು ಸೋಂಕು ದೃಢ ವಾಗುತ್ತಿರುವ ಹಿನ್ನೆಲೆಯಲ್ಲಿ ಆ ವ್ಯಕ್ತಿಗಳ ಮೇಲೆ ನಿಗಾ ಇಡುವುದು ಅತ್ಯವಶ್ಯಕವಾಗಿದೆ. ಒಟ್ಟು ಕೋವಿಡ್-19 ಸೋಂಕಿತ ಪ್ರಕರಣಗಳಲ್ಲಿ ಶೇ.25 ರಷ್ಟು ಸೋಂಕಿತರು ಪ್ರಾಥಮಿಕ ಸಂಪರ್ಕದವರೆಂದು ಪರಿಗಣಿಸಲಾಗಿದೆ. ಇದುವರೆಗೆ ಈ ಪ್ರಾಥಮಿಕ ಸಂಪರ್ಕ ವ್ಯಕ್ತಿಗಳನ್ನು ಅವರ ಮನೆಗಳಲ್ಲಿ ಪ್ರತ್ಯೇಕವಾಗಿರಿಸಲಾಗಿತ್ತು. ಸದ್ಯ ಆ ವ್ಯಕ್ತಿಗಳು ಹೋಮ್ ಕ್ವಾರಂಟೈನ್‌ನ ಶಿಸ್ತು ಉಲ್ಲಂ ಸುತ್ತಿರುವ ದೂರುಗಳು ಹೆಚ್ಚಾಗಿದ್ದು, ಈ ಹಿನ್ನೆಲೆ ಸರಕಾರಿ ಕ್ವಾರಂಟೈನ್ ಕೇಂದ್ರಗಳಲ್ಲಿಯೇ ನಿಗಾವಹಿಸಲು ಆರೋಗ್ಯ ಇಲಾಖೆ ತೀರ್ಮಾನಿಸಿದೆ.
ಸೋಂಕು ದೃಢವಾದ ವ್ಯಕ್ತಿಗಳ ಪ್ರಾಥಮಿಕ ಸಂಪರ್ಕಗಳನ್ನು ಎರಡು ವರ್ಗಗಳಾಗಿ ವಿಂಗಡಣೆ ಮಾಡ ಲಾಗಿದೆ. ಮೊದಲನೇ ವರ್ಗದಲ್ಲಿ (ಎ) 60 ವರ್ಷ ಮೀರಿದ ವ್ಯಕ್ತಿಗಳು ಮಧುಮೇಹ, ಅಧಿಕ ರಕ್ತದೊತ್ತಡ, ಎಚ್‌ಐವಿ ಪಾಸಿಟಿವ್, ಅಂಗಾಂಗ ಕಸಿ, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರನ್ನು ಅತ್ಯಂತ ಅಪಾಯಕಾರಿ ಸಂಪರ್ಕಗಳು ಎಂದು ಪರಿಗಣಿಸಲಾಗಿದೆ. ಇನ್ನು ಎರಡನೇ ವರ್ಗದಲ್ಲಿ ಆರೋಗ್ಯವಂತರಿದ್ದು ಇವರನ್ನು ಕಡಿಮೆ ಅಪಾಯದ ಸಂಪರ್ಕಗಳೆಂದು ವಿಂಗಡಿಸಲಾಗಿದೆ. ಪ್ರತಿಯೊಬ್ಬ ಪ್ರಾಥಮಿಕ ಸಂಪರ್ಕಿತರನ್ನು ತಪಾಸಣೆ ಮಾಡಿ ವಿಂಗಡಣೆ ಮಾಡುವ ಜವಾಬ್ದಾರಿಯನ್ನು ವೈದ್ಯಕೀಯ ತಂಡಕ್ಕೆ ವಹಿಸಲಾಗಿದೆ. ಸ್ಥಳಾಂತರ ವಿಧಾನ
ಅಪಾಯಕಾರಿ ಪ್ರಾಥಮಿಕ ಸಂಪರ್ಕಗಳನ್ನು ವೈದ್ಯಕೀಯ ಸೌಲಭ್ಯಗಳೊಂದಿಗೆ ಆಸ್ಪತ್ರೆಗಳಲ್ಲಿನ ಸರಕಾರಿ ಕ್ಯಾರಂಟೈನ್ ಕೇಂದ್ರಕ್ಕೆ ಸ್ಥಳಾಂತರಿಸಬೇಕು. ಕಡಿಮೆ ಅಪಾಯ ಎಂದು ಪರಿಗಣಿಸಿರುವ ಪ್ರಾಥಮಿಕ ಸಂಪರ್ಕಗಳನ್ನು ಹೊಟೇಲ್ ಅಥವಾ ಹಾಸ್ಟೆಲ್ ಗಳಲ್ಲಿ ಆರಂಭಿಸಿರುವ ಸರಕಾರಿ ಕ್ಯಾರಂಟೈನ್ ಕೇಂದ್ರಕ್ಕೆ ಕರೆದೊಯ್ಯಬೇಕು. ಆ್ಯಂಬುಲೆನ್ಸ್ ಅಥವಾ ಆಸ್ಪತ್ರೆ ವಾಹನಗಳ ಮೂಲಕ ಕಳುಹಿಸಬೇಕು. ಇಲ್ಲಿ ಎರಡು ಹಾಸಿಗೆಗಳ ನಡುವೆ ಎರಡು ಅಡಿ ಅಂತರ ಇರಬೇಕು. ಈ ಕೇಂದ್ರಗಳು ಕನಿಷ್ಠ 50 ಹಾಸಿಗೆಗಳನ್ನು ಹೊಂದಿರಬೇಕು. 24*7 ಅಗತ್ಯ ವೈದ್ಯಕೀಯ ಸೌಲಭ್ಯಗಳಿರಬೇಕು. ನಿತ್ಯ ಆರೋಗ್ಯ ಇಲಾಖೆಗೆ ಈ ಪ್ರಾಥಮಿಕ ಸಂಪರ್ಕಗಳ ಆರೋಗ್ಯ ಸ್ಥಿತಿಗತಿ ಕುರಿತು ವರದಿ ನೀಡಬೇಕು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.