Advertisement
ನಗರದಲ್ಲಿ ಕೋವಿಡ್ 19 ಪ್ರಕರಣಗಳು ಕಡಿಮೆ ವರದಿಯಾಗುತ್ತಿರುವ ಹಿಂದೆ ನಗರದ ಕ್ವಾರಂಟೈನ್ ವ್ಯವಸ್ಥೆಯೂ ಕಾರಣವಾಗಿದೆ. ಉಳಿದ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ನಗರದಲ್ಲಿ ಹೋಟೆಲ್ ಹಾಗೂ ಸಾಮುದಾಯಿಕ ಭವನ, ಹಾಸ್ಟೆಲ್ ಕ್ವಾರಂಟೈನ್ ವ್ಯವಸ್ಥೆ ತಕ್ಕಮಟ್ಟಿಗೆ ಉತ್ತಮವಾಗಿದ್ದು, ಒಬ್ಬರಿಂದ ಮತ್ತೂ ಬ್ಬರಿಗೆ ಸೋಂಕು ಹರಡುವ ಪ್ರಮಾಣ ಕಡಿಮೆಯಾಗಿದೆ ಎಂದು ಅಂದಾಜಿಸಲಾಗಿದೆ.
Related Articles
Advertisement
ಹಾಸ್ಟೆಲ್ ವ್ಯವಸ್ಥೆ ಉತ್ತಮವಾಗಿಲ್ಲ: ನಗರದಲ್ಲಿ ಕ್ವಾರಂಟೈನ್ ವ್ಯವಸ್ಥೆ ಉಳಿದ ಜಿಲ್ಲೆಗಳಿಗಿಂತ ಉತ್ತಮವಾಗಿ ದೆ. ಆದರೆ, ಅತ್ಯುತ್ತಮವಾಗಿಲ್ಲ. ನಗರದಕ್ಕೆ ಹೊರ ರಾಜ್ಯಗಳಿಂದ ಬಂದು (ಮಹಾರಾಷ್ಟ್ರದಿಂದ) ಹೋಟೆಲ್ ಕ್ವಾರಂಟೈನ್ ಆಗಲು ಆರ್ಥಿಕವಾಗಿ ಸದೃಢರಲ್ಲ ದವರನ್ನು ಹಾಸ್ಟೆಲ್ ಅಥವಾ ಸಮುದಾಯ ಭವನ ದಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ. ಆದರೆ, ಇಲ್ಲಿ ವ್ಯವಸ್ಥೆ ಉತ್ತಮವಾಗಿಲ್ಲ ಎಂದು ಹೆಸರು ಹೇಳಲಿಚ್ಛಿಸದ ಬಿಬಿಎಂಪಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನಲ್ಲಿ ಕ್ವಾರಂಟೈನ್ ವ್ಯವಸ್ಥೆಯಿದ್ದು ಸೋಂಕು ದೃಢಪಡುತ್ತಿರುವವರಲ್ಲಿ ಹೋಟೆಲ್‌ಗಳಿ ಗಿಂತ ಈ ರೀತಿ ಸರ್ಕಾರಿ ವ್ಯವಸ್ಥೆಯಲ್ಲಿ ಇರುವವರಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಈ ರೀತಿ ಕ್ವಾರಂಟೈನ್‌ಗೆ ಒಳಗಾಗುವವರು ಒಂದೇ ಶೌಚಾಲಯ ಹಾಗೂ ಊಟದ ಸ್ಥಳಗಳನ್ನು ಬಳಸುವುದರಿಂದ ಸೋಂಕು ಹರಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಮತ್ತಷ್ಟು ಮುಂಜಾಗ್ರತಾ ಕ್ರಮ ಅನುಸರಿಸಬೇಕು ಎಂದರು.
ಬೆಂಗಳೂರಿನಲ್ಲಿ ಪ್ರಕರಣಗಳು ಕುಸಿತದ ವಿವರ: ಜೂನ್.1ರ ವರೆಗೆ ಬೆಂಗಳೂರು ಕೋವಿಡ್ 19 ಪ್ರಕರಣಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿತ್ತು. ಜೂನ್.1ರ ಆರೋಗ್ಯ ಇಲಾಖೆಯ ವರದಿಯ ಪ್ರಕಾರ ಬೆಂಗಳೂರಿನಲ್ಲಿ ಒಟ್ಟು ಸೋಂಕಿತರು 385 ಹಾಗೂ ಒಟ್ಟು ಸಕ್ರಿಯ ಪ್ರಕರಣಗಳು 136 ಇದ್ದವು. ಬೆಂಗಳೂರಿನ ನಂತರದ ಸ್ಥಾನದಲ್ಲಿ ಕಲಬುರಗಿ, ಯಾದಗಿರಿ, ಮಂಡ್ಯ ಹಾಗೂ ಉಡುಪಿ ಇತ್ತು.
ಈ ಜಿಲ್ಲೆಗಳಲ್ಲಿ ಅನುಕ್ರಮವಾಗಿ 305,285,285 ಹಾಗೂ 260ಜನ ಸೋಂಕಿತರಿದ್ದರು. ಜೂನ್.2ಕ್ಕೆ ಉಡುಪಿ ಮತ್ತು ಕಲಬುರಗಿ ಜಿಲ್ಲೆಗಳಲ್ಲಿ ಬೆಂಗಳೂರಿಗಿಂತ ಹೆಚ್ಚು ಸೋಂಕು ಪ್ರಕರಣಗಳು ದೃಢವಾದವು. ಬೆಂಗಳೂರು ಮೂರನೇ ಸ್ಥಾನಕ್ಕೆ ಕುಸಿಯಿತು. ಇನ್ನು ಜೂನ್ 3ಕ್ಕೆ ಕಲಬುರಗಿ ಪ್ರಥಮ ಸ್ಥಾನ, ಉಡುಪಿ ದ್ವಿತೀಯ ಸ್ಥಾನ ತಲುಪಿತು. ಜೂನ್ 4 ಮತ್ತು 5ಕ್ಕೆ ಮತ್ತೆ ಉಡುಪಿ ಮತ್ತು ಕಲಬುರಗಿ ಜಿಲ್ಲೆಗಳು ಪ್ರಥಮ ದ್ವಿತೀಯ ಸ್ಥಾನದಲ್ಲಿ ಮುಂದುವರಿದವು.
ಜೂನ್ 6ಕ್ಕೆ ಯಾದಗಿರಿ ಹಾಗೂ ಜೂನ್ 7ಕ್ಕೆ ಬೆಳಗಾವಿಯಲ್ಲಿ ಹೆಚ್ಚು ಪ್ರಕರಣ ದೃಢಪಟ್ಟ ಹಿನ್ನೆಲೆಯಲ್ಲಿ ಬೆಂಗಳೂರು ನಾಲ್ಕನೇ ಸ್ಥಾನಕ್ಕೆ ಕುಸಿಯಿತು. ಇನ್ನು ಜೂನ್ 8ಕ್ಕೆ ಈ ಜಿಲ್ಲೆಗಳಲ್ಲಿ ಸೋಂಕಿತರ ವಿವರ ಈ ರೀತಿ ಇದೆ. ಕಲಬುರಗಿಯಲ್ಲಿ 759, ಯಾದಗಿರಿ 581, ಬೀದರ್ 270, ಉಡುಪಿ 947 ಹಾಗೂ ಬೆಂಗಳೂರಿನಲ್ಲಿ 493 ಜನರಲ್ಲಿ ಕೋವಿಡ್ 19 ದೃಢಪಟ್ಟಿದೆ. ಜೂನ್ 2ರ ನಂತರ ನಗರದಲ್ಲಿ ಹೆಚ್ಚು ಜನರಲ್ಲಿ ಪ್ರಕರಣಗಳು ದೃಢಪಡದ ಹಿನ್ನೆಲೆಯಲ್ಲಿ ಒಂದನೇ ಸ್ಥಾನದಿಂದ ಹಿಂದುಳಿಯುತ್ತಿದೆ.
* ಹಿತೇಶ್ ವೈ.