ವಿಜಯಪುರ: ಜಿಲ್ಲೆಯಲ್ಲಿ ಸೋಮವಾರ ಬಿಡುಗಡೆಯಾದ ಕೋವಿಡ್ ವರದಿಯಲ್ಲಿ ಜಿಲ್ಲೆಯಲ್ಲಿ ಮತ್ತೆ 92 ಜನರಿಗೆ ಸೋಂಕು ದೃಢಪಟ್ಟಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3224ಕ್ಕೆ ಏರಿಕೆಯಾಗಿದೆ.
ಮತ್ತೂಂದೆಡೆ ಸೋಂಕಿತರಲ್ಲಿ ಇಬ್ಬರು ವೃದ್ಧರು ಮೃತಪಟ್ಟಿದ್ದು, ಇದರೊಂದಿಗೆ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 38ಕ್ಕೆ ಜಿಗಿದಿದೆ. ಸೋಮವಾರ ಮಾಧ್ಯಮಗಳಿಗೆ ಬಿಡುಗಡೆ ಆಗಿರುವ ವರದಿಯಲ್ಲಿ ಜಿಲ್ಲೆಯಲ್ಲಿ ಹೊಸದಾಗಿ 92 ಜನ ಸೋಂಕಿತರು ಪತ್ತೆಯಾಗಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 3224ಕ್ಕೆ ಏರಿಕೆಯಾಗಿದೆ.
ಸೋಂಕಿತರಲ್ಲಿ ಮತ್ತೆ 9 ಜನರು ಗುಣಮುಖರಾಗಿ ಮನೆಗೆ ಮರಳಿದ್ದು, ಇದರೊಂದಿಗೆ ಈ ವರೆಗೆ 2193 ಜನರು ರೋಗದಿಂದ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಸದ್ಯ ಜಿಲ್ಲೆಯ ಕೋವಿಡ್ ಆಸ್ಪತ್ರೆಗಳಲ್ಲಿ 993 ಸೋಂಕಿತರು ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯ ಸೋಂಕಿತರಲ್ಲಿ ಮತ್ತೋರ್ವ ಮೃತಪಟ್ಟಿದ್ದು, ಮೃತರ ಸಂಖ್ಯೆ 38ಕ್ಕೆ ಏರಿಕೆಯಾಗಿದೆ. ಇನ್ನು ಕೋವಿಡ್ ಸೋಂಕಿಗೆ ಬಲಿಯಾದ ಇಬ್ಬರು ವೃದ್ಧರನ್ನು 70 ವರ್ಷದ ಪಿ105949 ಹಾಗೂ ಪಿ1193371 ಸಂಖ್ಯೆಯ 70 ವರ್ಷದ ವೃದ್ಧೆ ಎಂದು ಗುರುತಿಸಲಾಗಿದೆ.
ಮೃತರಾದ ಇಬ್ಬರೂ ಸೋಂಕಿತರನ್ನು ಶಿಷ್ಟಾಚಾರದಂತೆ ಇಬ್ಬರ ಅಂತ್ಯಕ್ರಿಯೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಮಾಹಿತಿ ನೀಡಿದ್ದಾರೆ. ಬಬಲೇಶ್ವರ ತಾಲೂಕಿನ ದೇವರಗೆಣ್ಣೂರು ಗ್ರಾಮದ 74 ವರ್ಷದ ಪಿ105949 ಗುರುತಿನ ವೃದ್ಧ ಜು.27ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೇ ಆ.2 ರಂದು ಮೃತಪಟ್ಟಿದ್ದಾರೆ. ತಾಳಿಕೋಟೆ ಪಟ್ಟಣದ ನಿವಾಸಿ 70 ವರ್ಷದ ಪಿ1193371 ಗುರುತಿನ ವೃದ್ಧೆ ಉಸಿರಾಟದ ತೊಂದರೆ, ರಕ್ತದೊತ್ತಡದಿಂದ ಜು.28ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಜು.31ರಂದು ಮೃತಪಟ್ಟಿದ್ದಾರೆ ಎಂದು ವಿವರಿಸಿದ್ದಾರೆ.