Advertisement
ತಾಯಿಯ ಗರ್ಭದಲ್ಲಿ ಬೆಳೆಯುವ ಶಿಶುಗಳಲ್ಲಿ ಕಂಡು ಬರುವ ಅನುವಂಶೀಯ ಕಾಯಿಲೆ, ಅಂಗ ವೈಕಲ್ಯತೆ, ಹೃದಯ ಸಂಬಂಧಿ ಕಾಯಿಲೆಯಂತಹ ನ್ಯೂನ್ಯತೆಗಳನ್ನು ಭ್ರೂಣಾವಸ್ಥೆಯಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡುವ ಪ್ರಕ್ರಿಯೆಗೆ ಫೀಟಲ್ ಚಿಕಿತ್ಸೆ ಎನ್ನಲಾಗುತ್ತದೆ. ಆದರೆ, ಈ ಚಿಕಿತ್ಸೆ ರಾಜ್ಯದ ಕೆಲವೇ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಿದೆ. ಲಕ್ಷಾಂತರ ಬಡ ಮಹಿಳೆಯರು ಭ್ರೂಣವಸ್ಥೆಯಲ್ಲಿ ಶಿಶುವಿನಲ್ಲಿ ನ್ಯೂನತೆಗಳಿದ್ದರೂ ಆರ್ಥಿಕ ಮುಗ್ಗಟ್ಟಿನಿಂದ ಸೂಕ್ತ ಚಿಕಿತ್ಸೆ ಪಡೆಯುತ್ತಿರಲಿಲ್ಲ. ಪರಿಣಾಮ ಇಂತಹ ಮಗು ನ್ಯೂನತೆಗೆ ಒಳಪಡಬೇಕಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರವು ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ ಇದೇ ಮೊದಲ ಬಾರಿಗೆ ಉಚಿತವಾಗಿ “ಫೀಟಲ್ ಮೆಡಿಸಿನ್’ ಚಿಕಿತ್ಸೆ ಒದಗಿಸಲು ಸಿದ್ಧತೆ ನಡೆಸಿದೆ.
Related Articles
Advertisement
ಪಾಲಕರ ಜತೆ ಸಮಾಲೋಚನೆ: ಫೀಟಲ್ ಮೆಡಿಸಿನ್ ವ್ಯವಸ್ಥೆಯಲ್ಲಿ ಪಾಲಕರಿಗೆ ಆಪ್ತ ಸಮಾಲೋಚಿಸಿ ಶಿಶುವಿಗಿರುವ ಸಮಸ್ಯೆ ವಿವರಿಸಲಾಗುತ್ತದೆ. ಪಾಲಕರ ನಿರ್ಧಾರದ ಮೇಲೆ ವೈದ್ಯರು ಮುಂದಿನ ಕ್ರಮ ಕೈಗೊಳ್ಳುತ್ತಾರೆ. ಯಾವುದೇ ಅನುಮಾನಗ ಳಿದ್ದರೆ ಸ್ಕ್ರೀನಿಂಗ್, ಅಸ್ಟ್ರಾ ಸ್ಕ್ಯಾನಿಂಗ್ ಮೂಲಕ ಭ್ರೂಣದ ನ್ಯೂನತೆ ಪತ್ತೆ ಹಚ್ಚಬಹುದು. ಫೀಟಲ್ ಮೆಡಿಸಿನ್ ಚಿಕಿತ್ಸೆಯಲ್ಲಿ ಫೀಟಲ್ ಬ್ಲಿಡ್ ಪರೀಕ್ಷೆ, ಆಮ್ಯೂನ್ಯೂಟಿಕ್ ಫ್ರಿಡ್ ಸ್ಯಾಂಪಲ್, ಕೊರಿಯಾನಿಕ್ ವಿಲೈ ಬಯೋಪ್ಸಿ ಸೇರಿದಂತೆ ವಿವಿಧ ಪರೀಕ್ಷೆ ನಡೆಸಲಾಗುತ್ತದೆ ಎನ್ನುತ್ತಾರೆ ತಜ್ಞ ವೈದ್ಯರು.
ಶೇ.4 ಶಿಶುಗಳಲ್ಲಿ ಜನ್ಮ ಜಾತ ವಿಕಲತೆ : ರಾಜ್ಯದಲ್ಲಿ ಶೇ.4ರಷ್ಟು ಶಿಶುಗಳು ಜನ್ಮಜಾತ ವಿಕಲತೆ ಹೊಂದಿರುತ್ತದೆ. ಪ್ರತಿ ವರ್ಷ 4-5 ಸಾವಿರ ಶಿಶುಗಳಲ್ಲಿ ಈ ಸಮಸ್ಯೆ ಕಂಡು ಬರುತ್ತಿವೆ. ಈ ಪೈಕಿ ದೇಹ ರಚನೆ ಹಾಗೂ ಅನುವಂಶೀಯತೆಯ ವೈಕಲ್ಯತೆ ಹೆಚ್ಚಾಗಿರುತ್ತದೆ. ದೇಹ ರಚನೆ ವಿಕಲತೆಯು ಮೆದುಳು, ಹೃದಯದಂತಹ ಪ್ರಮುಖ ಅಂಗಗ ಳಿಂದ ಹಿಡಿದು ಬೆರಳುಗಳವರೆಗೂ ಇರುತ್ತದೆ. ಅನುವಂಶೀಯ ವೈಕಲ್ಯತೆಗಳಿಂದ ದೈಹಿಕ, ಮಾನ ಸಿಕ ವಿಕಲತೆ ಉಂಟಾಗುತ್ತದೆ. ಗರ್ಭಧಾರಣೆಯ 3 ರಿಂದ 7 ತಿಂಗಳೊಳಗೆ ನ್ಯೂನತೆ ಪತ್ತೆಹಚ್ಚಬಹುದು.
–ಅವಿನಾಶ ಮೂಡಂಬಿಕಾನ