ಕಾನ್ಪುರ್: ಉತ್ತರಪ್ರದೇಶದ ಲಾಲಾ ಲಜಪತ್ ರಾಯ್ ಆಸ್ಪತ್ರೆಯ ಶೌಚಾಲಯದಲ್ಲೇ ಹೆರಿಗೆಯಾದ ಪರಿಣಾಮ ನವಜಾತ ಶಿಶು ಜಾರಿ ಬಿದ್ದು ಕಮೋಡ್ ನೊಳಗೆ ಸಿಲುಕಿ ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಜಂಬೂ ಸವಾರಿಗೆ ಕೌಂಟ್ ಡೌನ್ ಶುರು…
ಹಸೀನಾ ಬಾನು(30) ಎಂಬ ಗರ್ಭಿಣಿ ಮಹಿಳೆಯನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲು ವೈದ್ಯರು ನಿರಾಕರಿಸಿದ್ದಾರೆಂದು ವರದಿ ಹೇಳಿದೆ. ಆಕೆಯ ಪತಿ ಮೊಯಿನ್ ವೈದ್ಯರ ಬಳಿ ಬೇಡಿಕೊಂಡರು ಎಮರ್ಜೆನ್ಸಿ ವಾರ್ಡ್ ಗೆ ದಾಖಲಿಸಲು ನಿರಾಕರಿಸಿರುವುದಾಗಿ ವರದಿ ತಿಳಿಸಿದೆ.
ಈ ಸಂದರ್ಭದಲ್ಲಿ ಹೆರಿಗೆ ನೋವು ತಾಳಲಾರದೆ ಹಸೀನಾ ಟಾಯ್ಲೆಟ್ ಗೆ ತೆರಳಿದ್ದು, ಅಲ್ಲಿಯೇ ಹೆರಿಗೆಯಾಗಿತ್ತು. ಈ ವೇಳೆ ನವಜಾತ ಶಿಶು ಜಾರಿ ಬಿದ್ದು, ಕಮೋಡ್ ನೊಳಗೆ ಸಿಲುಕಿ ಸಾವನ್ನಪ್ಪಿರುವುದಾಗಿ ಮೂಲಗಳು ವಿವರಿಸಿದೆ.
ವಿಷಯ ತಿಳಿದ ಆಸ್ಪತ್ರೆಯ ಸಿಬಂದಿಗಳು ಟಾಯ್ಲೆಟ್ ಮೇಲ್ಭಾಗವನ್ನು ಒಡೆದು ಮಗುವನ್ನು ಹೊರತೆಗೆದರೂ ಕೂಡಾ ಮಗು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದರು. ಘಟನೆ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನು ರಚಿಸಲಾಗಿದೆ ಎಂದು ವೈದ್ಯಾಧಿಕಾರಿ ಡಾ.ಸಂಜಯ್ ಕಾಲಾ ತಿಳಿಸಿದ್ದಾರೆ.
ಇದೊಂದು ಗಂಭೀರ ಪ್ರಕರಣವಾಗಿದೆ. ಈ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನು ರಚಿಸಿದ್ದು, ಆರೋಪಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಡಾ.ಸಂಜಯ್ ಮಾಹಿತಿ ನೀಡಿರುವುದಾಗಿ ವರದಿ ತಿಳಿಸಿದೆ.