Advertisement
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸದಾಶಿವ ಆಯೋಗದ ಜಾರಿ ವಿರುದ್ಧ ಡಿ.29 ರಂದುಇತರೆ ಹಿಂದುಳಿದ ವರ್ಗಗಳ ಜಾತಿ ಜನರು ಪ್ರತಿಭಟನೆ ನಡೆಸುತ್ತಿರುವ ಕ್ರಮ ಖಂಡನೀಯ. ನಾವು ಯಾವುದೇ ಇತರೆ
ಜಾತಿ ಮೀಸಲಾತಿ ಕುಸಿದುಕೊಳ್ಳಲು ಮುಂದಾಗಿಲ್ಲ. ಜನ ಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಕಲ್ಪಿಸಿಕೊಡಿ ಎಂದೇಷ್ಟೇ ಕೇಳುತ್ತಿದ್ದೇವೆ. ಸದಾಶಿವ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಿ 7 ವರ್ಷಗಳು ಕಳೆಯುತ್ತ ಬಂದಿದ್ದರೂ ಯಾವುದೇ ಪಕ್ಷದ ಮುಖ್ಯಮಂತ್ರಿಗಳು ಸದಾಶಿವ ಆಯೋಗದ ಶಿಫಾರಸು ಜಾರಿಗೆ ತಂದಿಲ್ಲ. ಕೇವಲ ಭರವಸೆಗಳನ್ನು ನೀಡುತ್ತಲೇ ಕಾಲ ಕಳೆಯಲಾಗುತ್ತಿದೆ. ಆಯೋಗದ ಶಿಫಾರಸುಗಳನ್ನು ಜಾರಿಗೊಳಿಸದವರಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮಾದಿಗ ಸಮುದಾಯ ತಕ್ಕ ಪಾಠ ಕಲಿಸಲಿದೆ ಎಂದು ಎಚ್ಚರಿಕೆ ನೀಡಿದರು.
ಕಾರ್ಯದರ್ಶಿ ನಾಗರಾಜು ಮಾತನಾಡಿ, ದಲಿತ ಚಳವಳಿಗಳ ನಿರ್ಮಾತೃಗಳು ಅಸ್ಪೃಶ್ಯ ಜಾತಿಗಳಾದ ಪರಿಶಿಷ್ಟ ಜಾತಿ ಮಾದಿಗರು ಹಾಗೂ ಹೊಲೆಯರು ತಮ್ನ ಶ್ರಮದಿಂದ ಚಳವಳಿಗಳನ್ನು ಯಶಸ್ವಿಗೊಳಿಸಿರುತ್ತಾರೆ.
Related Articles
ಮುಖ್ಯಮಂತ್ರಿ ನಿವಾಸ್ ಚಲೋ ಖಂಡನೀಯ: ತಾಲೂಕು ಸಂಚಾಲಕ ರಾಜಘಟ್ಟ ಕಾಂತರಾಜು ಮಾತನಾಡಿ,
ಸರ್ಕಾರವೇ ನೇಮಿಸಿದ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿ ಜಾರಿಯನ್ನು ಖಂಡಿಸಿ ಛಲವಾದಿ
ನಾರಾಯಣ ಸ್ವಾಮಿ ನೇತೃತ್ವದಲ್ಲಿ ಮುಖ್ಯಮಂತ್ರಿ ನಿವಾಸ್ ಚಲೋ ನಡೆಸುತ್ತಿರುವುದು ಖಂಡನೀಯ.
Advertisement
ವರದಿಯನ್ನು ಜಾರಿಮಾಡಲು ಶಿಫಾರಸು ಮಾಡಿದ ನಂತರ ಸಾಧಕ ಬಾಧಕ ಚರ್ಚಿಸಬೇಕು. ನಮ್ಮದು ಸಾಮಾಜಿಕನ್ಯಾಯಯುತವಾದ ಹೋರಾಟ. ಡಿ.31 ರಂದು ಮುಖ್ಯಮಂತ್ರಿಗಳು ಸೂಕ್ತ ನಿರ್ಧಾರ ಪ್ರಕಟಿಸಲಿದ್ದಾರೆ. ಆನಂತರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾದಾರ ಚನ್ನಯ್ಯ ಮಹಾಸಭೆ ತಾಲೂಕು ಅಧ್ಯಕ್ಷರ ಆದಿತ್ಯ ನಾಗೇಶ್, ಸಲಹಾ ಸಮಿತಿ ಉಪಾಧ್ಯಕ್ಷ ಆರ್. ಸಿ.ರಾಮಲಿಂಗಯ್ಯ, ನಗರ ಘಟಕದ ಅಧ್ಯಕ್ಷ ಆಂಜನಮೂರ್ತಿ, ಕೋರ್ ಕಮಿಟಿ ಪ್ರಧಾನ
ಕಾರ್ಯದರ್ಶಿ ಬಚ್ಚಹಳ್ಳಿ ನಾಗರಾಜು, ಮುನಿಸುಬ್ಬಯ್ಯ, ದೊಡ್ಡತುಮಕೂರು ವೆಂಕಟೇಶ, ಪ್ರಧಾನ ಕಾರ್ಯದರ್ಶಿ
ಟಿ.ಡಿ.ಮುನಿಯಪ್ಪ, ನಿರ್ದೇಶಕ ಮಾರಪ್ಪ, ನಗರ ಕಾರ್ಯಾಧ್ಯಕ್ಷ ತಳವಾರ್ ನಾಗರಾಜು, ಪ್ರಧಾನ ಕಾರ್ಯದರ್ಶಿ ಬಿ.ಸದಾನಂದ, ಕಮಿಟಿ ಸದಸ್ಯರಾದ ರಾಮಾಂಜಿನಪ್ಪ, ಕುಂಬಾರಪೇಟೆ ಕೆ.ನಾರಾಯಣ, ತಾಲೂಕು
ಪಂಚಾಯಿತಿ ಸದಸ್ಯ ವೆಂಕಟರಮಣಪ್ಪಭಾಗವಹಿಸಿದ್ದರು.