Advertisement

ಪಾಲನೆಯಾಗುತ್ತಿಲ್ಲ ಸಾಮಾಜಿಕ ಅಂತರ

04:48 PM Apr 19, 2020 | Naveen |

ಇಂಡಿ: ಕೋವಿಡ್‌-19 ಮಹಾಮಾರಿ ಅಟ್ಟಹಾಸ ವಿಜಯಪುರ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೂ ಸಹಿತ ಜನ ಸಾಮಾಜಿಕ ಅಂತರ ಕಾಪಾಡದೆ ಇರುವುದರಿಂದ ಇಂಡಿಯಲ್ಲೂ ಕೋವಿಡ್‌ -19 ಹರಡುವಿಕೆಗೆ ಅವಕಾಶ ಮಾಡಿ ಕೊಟ್ಟಂತಾಗುತ್ತಲಿದೆ.

Advertisement

ಸರ್ಕಾರದ ಆದೇಶಗಳನ್ನು ಗಾಳಿಗೆ ತೂರಿ ಸಾರ್ವಜನಿಕರು ಸಂತೆಯಲ್ಲಿ ಸಾಮಾಜಿಕ ಅಂತರವನ್ನು ಕಾಪಾಡುತ್ತಿಲ್ಲ. ರೇಷನ್‌ ಅಂಗಡಿ ಮುಂದೆ ಗುಂಪು ಗುಂಪಾಗಿ ನಿಲ್ಲುವುದು, ಬೈಕ್‌ನಲ್ಲಿ ಮೂರು ಜನ ಅಡ್ಡಾಡುವುದು ಸಾಮಾನ್ಯವಾಗಿದೆ. ಪಟ್ಟಣದ ನಾಲ್ಕೈದು ಕಡೆಗಳಲ್ಲಿ ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂದು ಮಂಗಳವಾರ ಹಾಗೂ ಶನಿವಾರ ಬೆಳಗ್ಗೆ 6ರಿಂದ 9ರವರೆಗೆ ಸಾಮಾಜಿಕ ಅಂತರ
ಕಾಪಾಡಿಕೊಂಡು ದಿನಸಿ, ಕಾಯಿಪಲ್ಲೆ, ಹಣ್ಣು-ಹಂಪಲು ಖರೀದಿ ಮಾಡಲಿ ಎಂಬ ಉದ್ದೇಶದಿಂದ ಸಂತೆ ಪ್ರಾರಂಭಿಸಲಾಗಿದೆ. ಆದರೆ ಜನತೆ ಇದನ್ನೆಲ್ಲವನ್ನು ಗಮನಿಸದೆ ಗುಂಪು ಗುಂಪಾಗಿ ನೂಕು ನುಗ್ಗಲು ಮಾಡುತ್ತ ಖರೀದಿಯಲ್ಲಿ ತೊಡಗಿರುವದು ವಿಷಾದನೀಯ. ವ್ಯಾಪಾರಸ್ಥರು ಹಾಗೂ ಗ್ರಾಹಕರು ಮಾಸ್ಕ್ ಹಾಕದೆ ಜಾಣ ಕುರುಡುತನ ಪ್ರದರ್ಶಸಿಸುತ್ತಿರುವದು ಕಂಡು ಬರುತ್ತಿದೆ.

ಕೋವಿಡ್ ಕುರಿತು ಸಾರ್ವಜನಿಕರಿಗೆ ಸಾಕಷ್ಟು ತಿಳಿವಳಿಕೆ ನೀಡಲಾಗಿದೆ. ಪೊಲೀಸ್‌ ಇಲಾಖೆ, ಆರೋಗ್ಯ ಇಲಾಖೆ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು ಹಗಲಿರುಳು ಶ್ರಮಿಸುತ್ತಿದ್ದು ಸಾರ್ವಜನಿಕರು ಮನೆಯಲ್ಲಿರಬೇಕು.
ಡಾ| ಅರ್ಚನಾ ಕುಲಕರ್ಣಿ
ತಾಲೂಕು ಆರೋಗ್ಯಾಧಿಕಾರಿ

ಪೊಲೀಸ್‌ ಇಲಾಖೆಯೂ ಸಾರ್ವಜನಿಕರಿಗೆ ತಿಳಿವಳಿಕೆ ಹೇಳಿದೆ. ನಮ್ಮ ಸಿಬ್ಬಂದಿ ಹಗಲಿರುಳು ಕೆಲಸ ಮಾಡುತ್ತಿದ್ದು ಜನ ಸ್ಪಂದಿಸದೇ ಇರುವುದು ಬೇಸರ ತರಿಸಿದೆ. ಅನವಶ್ಯಕವಾಗಿ ತಿರುಗಾಡುವವರ ಬೈಕ್‌ ವಶಪಡಿಸಿಕೊಳ್ಳಲಾಗುತ್ತಿದೆ.
ಎಂ.ಬಿ. ಸಂಕದ್‌, ಡಿವೈಎಸ್‌ಪಿ

Advertisement

Udayavani is now on Telegram. Click here to join our channel and stay updated with the latest news.

Next