Advertisement

ಅಧಿಕಾರಿಗಳು ಜಾಗೃತಿಯಿಂದ ಕಾರ್ಯ ನಿರ್ವಹಿಸಲಿ: ಪಾಟೀಲ

05:57 PM Apr 16, 2020 | Naveen |

ಇಂಡಿ: ವಿಜಯಪುರಕ್ಕೂ ವೈರಸ್‌ ಹರಡಿದ್ದು, ತಾಲೂಕಾಡಳಿತದ ಅಧಿಕಾರಿಗಳು ಅತೀ ಜಾಗ್ರತೆಯಿಂದ ಕಾರ್ಯ ನಿರ್ವಹಿಸಬೇಕಿದೆ ಎಂದು ಶಾಸಕ ಯಶವಂತ್ರಾಯಗೌಡ ಪಾಟೀಲ ಸೂಚನೆ ನೀಡಿದರು.

Advertisement

ನಗರದ ಪ್ರವಾಸಿ ಮಂದಿರದಲ್ಲಿ ಕೋವಿಡ್‌-19 ಕುರಿತು ನಡೆಸಿದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನಾವು ಮಹಾರಾಷ್ಟ್ರ ಮತ್ತು ಕರ್ನಾಟಕದ ಮಧ್ಯದಲ್ಲಿದ್ದೇವೆ. ಅತ್ತ ಮಹಾರಾಷ್ಟ್ರದ ಸೋಲ್ಲಾಪುರ ಜಿಲ್ಲೆಯಲ್ಲಿ ಒಬ್ಬ ವ್ಯಕ್ತಿ ಕೋವಿಡ್‌ 19 ನಿಂದ ಸಾವನ್ನಪ್ಪಿದ್ದರೆ ಇತ್ತ ವಿಜಯಪುರದಲ್ಲೂ ಒಂದು ಸಾವು ಮತ್ತು 9 ಸೋಂಕಿತ ಪ್ರಕರಣಗಳು ಬೆಳಕಿಗೆ ಬಂದಿವೆ. ಜಿಲ್ಲೆಯಲ್ಲಿ ವೇಗವಾಗಿ ಈ ಕೋವಿಡ್‌-19 ಹರಡುತ್ತಿದ್ದು, ನಮ್ಮ ತಾಲೂಕಿನ ಜನತೆ ಇದರ ಬಗ್ಗೆ ಎಚ್ಚರವಹಿಸಬೇಕಿದೆ.

ತಾಲೂಕು ಮಟ್ಟದ ಅಧಿಕಾರಿಗಳು ಈ ವೈರಸ್‌ ತಡೆಗೆ ಏನು ಮಾಡಬೇಕು? ಏನು ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಎಲ್ಲ ಇಲಾಖಾ ಅಧಿಕಾರಿಗಳು ಚರ್ಚಿಸಿ ಕಟ್ಟು ನಿಟ್ಟಾಗಿ ವೈರಸ್‌ ಹರಡುವಿಕೆ ತಡೆಗಟ್ಟಲು ಮುಂದಾಗಬೇಕು ಎಂದರು. ಹೊರದೇಶ ಮತ್ತು ಹೊರರಾಜ್ಯಗಳಿಂದ ಒಟ್ಟು 11 ಸಾವಿರ ಜನರು ಬಂದಿದ್ದು, ಅವರನ್ನೆಲ್ಲ ಹೋಂ ಕ್ವಾರಂಟೈನ್‌ ಮಾಡಿದ್ದು ಶ್ಲಾಘನೀಯ. ತಾಲೂಕಾಡಳಿತ ಹಾಗೂ ಜಿಲ್ಲಾಡಳಿತ ಇಷ್ಟು ದಿನಗಳಿಂದ ಶ್ರಮವಹಿಸಿದ್ದಕ್ಕೆ ಅಭಿನಂದಿಸಿದರು. ಕಂದಾಯ ಉಪವಿಭಾಗಾಧಿ ಕಾರಿ ಸ್ನೇಹಲ್‌ ಸುಧಾಕರ್‌ ಲೋಖಂಡೆ, ಡಿವೈಎಸ್‌ಪಿ ಎಂ.ಬಿ. ಸಂಕದ್‌, ತಹಶೀಲ್ದಾರ್‌ ಚಿದಾನಂದ ಕುಲಕರ್ಣಿ, ತಾಪಂ ಇಒ ವಿಜಯಕುಮಾರ ಆಜೂರ, ಆರೋಗ್ಯ ಅಧಿಕಾರಿ ಡಾ| ಅರ್ಚನಾ ಕುಲಕರ್ಣಿ, ಕೃಷಿ ಇಲಾಖಾ ಅ ಧಿಕಾರಿ ಮಹಾದೇವಪ್ಪ ಏವೂರ, ತೋಟಗಾರಿಕೆ ಅ ಧಿಕಾರಿ ಹಿರೇಮಠ, ಉಮೇಶ ಲಮಾಣಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next