ಇಂಡಿ: ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬಿಡಿಸಿಸಿ ಬ್ಯಾಂಕ್ ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಈಗ ರೂಪೇ ಕಾರ್ಡ್ ನೀಡಿ ಮೈಕ್ರೋ ಎಟಿಎಂ ಬಳಸಲು ಅವಕಾಶ ನೀಡುವ ಮೂಲಕ ರೈತರು ಬ್ಯಾಂಕ್‌ಗಳಲ್ಲಿ ಸರದಿ ಸಾಲಿನಲ್ಲಿ ನಿಲ್ಲವುದು ತಪ್ಪಿಸಲು ಮುಂದಾಗಿದೆ.
ಇಂಡಿಯ ಕೆಇಬಿ ಹತ್ತಿರದ ಬಿಡಿಸಿಸಿ ಬ್ಯಾಂಕ್ ಶಾಖೆಯಲ್ಲಿ ಒಟ್ಟು 10,210 ರೈತರು ಗ್ರಾಹಕರಾಗಿದ್ದು ಅದರಲ್ಲಿ 8,640 ರೈತರಿಗೆ ರೂಪೇ ಕಾರ್ಡ್ ನೀಡಲಾಗಿದೆ. ಆ ರೂಪೇ ಕಾರ್ಡ್‌ನ್ನು ಮೈಕ್ರೋ ಎಟಿಎಂನಲ್ಲಿ ಎಳೆದು ಪಿನ್ ನಂಬರ್ ನಮೂದಿಸಿದರೆ ಕೂಡಲೆ ಒಂದು ರಿಸಿಪ್ಟ್ ಬರುತ್ತದೆ. ಅದನ್ನು ಕ್ಯಾಶ್ ಕೌಂಟರ್‌ನಲ್ಲಿ ನೇರವಾಗಿ ಕೊಟ್ಟು ಹಣ ಪಡೆಯಬಹುದಾಗಿದೆ. ಪ್ರತಿ ದಿನ ಮೈಕ್ರೋ ಎಟಿಎಂ ಮೂಲಕ ಗರಿಷ್ಠ 49,000 ರೂ. ಪಡೆಯಲು ನಿಗದಿಸಲಾಗಿದೆ.
ಇದರಿಂದ ರೈತರು ಸರದಿ ಸಾಲಿನಲ್ಲಿ ನಿಂತುಕೊಂಡು ಗಂಟೆಗಟ್ಟಲೆ ಕಾಯಬೇಕಾದ ದುಸ್ಥಿತಿ ದೂರವಾಗಿಗೆ. ಬ್ಯಾಂಕಿಗೆ ಹೋದ ಎರಡು ನಿಮಿಷದಲ್ಲಿ ಹಣ ಪಡೆದಯಬಹುದು. ಶಾಖೆಯಲ್ಲಿ ಮೈಕ್ರೋ ಎಟಿಎಂ ಬಳಸಲು ಕಾರ್ಡುದಾರರು ಬ್ಯಾಂಕ್‌ಖಾತೆ ಅಥವಾ ಗುರುತಿನ ಚೀಟಿಯೊಂದಿಗೆ ಖುದ್ದಾಗಿ ಹಣ ಪಡೆಯಲು ತಿಳಿಸಲಾಗಿದೆ. ಬ್ಯಾಂಕ್ ಅವಧಿ ವೇಳೆಯಲ್ಲಿ ಕೆಸಿಸಿ ರೂಪೇ ಮತ್ತು ಡೆಬಿಟ್ ಕಾರ್ಡ್ ಬಳಸಿ ಯಾವುದೇ ಶಾಖಾ ಕಚೇರಿಗಳಲ್ಲಿ ರೈತರು ಹಣ ಪಡೆಯಬಹುದಾಗಿದೆ.
ಬಿಡಿಸಿಸಿ ಬ್ಯಾಂಕಿನ ಗ್ರಾಹಕರಾದ ರೈತರಿಗೆ ಅನುಕೂಲ ಕಲ್ಪಿಸಲು ರೂಪೇ ಕಾರ್ಡ್ ನೀಡಲಾಗುತ್ತಿದೆ. ಮೈಕ್ರೋ ಎಟಿಎಂ ಮೂಲಕ ರೈತರು ಒಂದು ದಿನಕ್ಕೆ 49,000 ರೂ. ಪಡೆಯಬಹುದು. ಇದರಿಂದ ರೈತರು ಸರದಿ ಸಾಲಿನಲ್ಲಿ ನಿಲ್ಲುವುದು ತಪ್ಪುತ್ತದೆ. ಜಿಲ್ಲೆಯ ಎಲ್ಲ ಶಾಖೆಗಳಲ್ಲೂ ಈ ಯೋಜನೆ ಜಾರಿಗೊಳಿಸಲಾಗುತ್ತಿದೆ.
ಶಿವಾನಂದ ಪಾಟೀಲ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ
ಡಿಸಿಸಿ ಬ್ಯಾಂಕ್ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮೈಕ್ರೋ ಎಟಿಎಂ ಸರ್ವಿಸ್ ನೀಡುತ್ತಿದೆ. ನಮ್ಮ ಶಾಖೆಯ ಪ್ರತಿಶತ 80 ರೈತರಿಗೆ ಈಗಾಗಲೆ ಕಾರ್ಡ್ ವಿತರಿಸಲಾಗಿದ್ದು ಹೊಸ ರೈತರಿಗೂ ಕೆಲ ದಿನಗಳಲ್ಲಿ ಕಾರ್ಡ್ ನೀಡಲಾಗುತ್ತದೆ.
ಎಂ.ಎಸ್. ದೇಸಾಯಿ
ಬಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ
ಉಮೇಶ ಬಳಬಟ್ಟಿ