Advertisement

INDvsWI: ‘ಜವಾಬ್ದಾರಿ ಇರಬೇಕು..’; ಸತತ ಸೋಲಿನ ಬಳಿಕ ನಾಯಕ ಹಾರ್ದಿಕ್ ಪ್ರತಿಕ್ರಿಯೆ

03:17 PM Aug 07, 2023 | Team Udayavani |

ಗಯಾನ: ವೆಸ್ಟ್ ಇಂಡೀಸ್ ವಿರುದ್ಧದ ಸತತ ಎರಡು ಟಿ20 ಪಂದ್ಯಗಳಲ್ಲಿ ಭಾರತ ತಂಡದ ಸೋಲನುಭವಿಸಿದೆ. 2016ರ ಬಳಿಕ ಇದೇ ಮೊದಲ ಬಾರಿಗೆ ವೆಸ್ಟ್ ಇಂಡೀಸ್ ತಂಡದ ಭಾರತದ ವಿರುದ್ಧ ಸತತ ಎರಡು ಪಂದ್ಯದಲ್ಲಿ ಗೆಲುವು ಕಂಡಿದೆ.

Advertisement

ನಾಯಕ ಹಾರ್ದಿಕ್ ಪಾಂಡ್ಯ, ತಮ್ಮ ತಂಡದ ಪ್ರದರ್ಶನದಿಂದ ಸಂತಸಗೊಂಡಿಲ್ಲ. ತಂಡದಲ್ಲಿ ಬ್ಯಾಟರ್‌ ಗಳು ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.

ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತವು ಏಳು ವಿಕೆಟ್ ನಷ್ಟಕ್ಕೆ 152 ರನ್ ಮಾತ್ರ ಗಳಿಸಿತು. ಇದನ್ನು ಬೆನ್ನತ್ತಿದ್ದ ವಿಂಡೀಸ್ ಎಂಟು ವಿಕೆಟ್ ಕಳೆದುಕೊಂಡು ಒಂದು ಓವರ್ ಬಾಕಿ ಉಳಿಸಿಕೊಂಡು ಗುರಿ ತಲುಪಿತು.

ಪಂದ್ಯದ ಬಳಿಕ ಮಾತನಾಡಿದ ನಾಯಕ ಹಾರ್ದಿಕ್ ಪಾಂಡ್ಯ, “ನಾನು ಪ್ರಾಮಾಣಿಕವಾಗಿ ಹೇಳುವುದಾದರೆ ಇದು ಸಂತೋಷಕರ ಬ್ಯಾಟಿಂಗ್ ಪ್ರದರ್ಶನವಾಗಿರಲಿಲ್ಲ. ಟ್ರ್ಯಾಕ್ ನಿಧಾನವಾಗಿತ್ತು. ಆದರೆ ನಾವು ಉತ್ತಮವಾಗಿ ಬ್ಯಾಟ್ ಮಾಡಬಹುದಿತ್ತು. 160 ಪ್ಲಸ್ ಅಥವಾ 170 ಉತ್ತಮ ಮೊತ್ತವಾಗುತ್ತಿತ್ತು. ಬ್ಯಾಟರ್ ಗಳು ಹೆಚ್ಚು ಜವಾಬ್ದಾರಿ ತೆಗೆದುಕೊಳ್ಳಬೇಕು” ಎಂದರು.

ಇದನ್ನೂ ಓದಿ:Muddebihala: ಮುಸುಕುಧಾರಿಗಳಿಂದ ಬಾಲಕನಿಗೆ ಇಂಜೆಕ್ಷನ್: ಹೆಚ್ಚಿದ ಆತಂಕ

Advertisement

“ಪ್ರಸ್ತುತ ತಂಡದೊಂದಿಗೆ ನಾವು ನಮ್ಮ ಅಗ್ರ ಏಳು ಬ್ಯಾಟರ್‌ ಗಳು ಉತ್ತಮವಾಗಿ ಪ್ರದರ್ಶನ ನೀಡಬೇಕು. ಬೌಲರ್‌ಗಳು ನಿಮ್ಮ ಪಂದ್ಯಗಳನ್ನು ಗೆಲ್ಲುತ್ತಾರೆ ಎಂದು ಭಾವಿಸುತ್ತೇವೆ. ನಾವು ಸರಿಯಾದ ಸಮತೋಲನವನ್ನು ಹೊಂದಿದ್ದೇವೆ ಎಂದು ಖಚಿತಪಡಿಸಿಕೊಳ್ಳಲು ನಾವು ಮಾರ್ಗಗಳನ್ನು ಹುಡುಕಬೇಕಾಗಿದೆ, ಆದರೆ ಅದೇ ಸಮಯದಲ್ಲಿ, ಬ್ಯಾಟರ್‌ಗಳು ಹೆಚ್ಚಿನ ಜವಾಬ್ದಾರಿಯನ್ನು ತೆಗೆದುಕೊಳ್ಳಿ.” ಎಂದರು.

ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ಸದ್ಯ 0-2 ಅಂತರದಿಂದ ಹಿನ್ನಡೆಯಲ್ಲಿದೆ. ಪ್ರಮುಖ ಬ್ಯಾಟರ್ ಗಳಾದ ಶುಭ್ಮನ್ ಗಿಲ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ ರಿಂದ ನಿರೀಕ್ಷಿತ ಫಲಿತಾಂಶ ಬರುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next