Advertisement

INDvsENG; ರಾಂಚಿ ಗೆಲುವಿನೊಂದಿಗೆ ಸತತ 17ನೇ ಟೆಸ್ಟ್ ಸರಣಿ ಗೆದ್ದ ಟೀಂ ಇಂಡಿಯಾ

02:08 PM Feb 26, 2024 | Team Udayavani |

ರಾಂಚಿ: ಶುಭ್ಮನ್ ಗಿಲ್ – ಧ್ರುವ್ ಜುರೆಲ್ ತಾಳ್ಮೆಯ ಆಟದಿಂದ ರಾಂಚಿ ಟೆಸ್ಟ್ ಪಂದ್ಯವನ್ನು ಗೆದ್ದ ಭಾರತ ತಂಡವು ಇಂಗ್ಲೆಂಡ್ ವಿರುದ್ದದ ಟೆಸ್ಟ್ ಸರಣಿಯಲ್ಲಿ ಒಂದು ಪಂದ್ಯ ಬಾಕಿ ಉಳಿದಿರುವಂತೆ ಸರಣಿ ವಶಪಡಿಸಿಕೊಂಡಿದೆ. ಇದರೊಂದಿಗೆ ಭಾರತ ತಂಡವು ತವರಿನಲ್ಲಿ ಸತತ 17ನೇ ಟೆಸ್ಟ್ ಸರಣಿ ಗೆದ್ದುಕೊಂಡಿದೆ.

Advertisement

ಗೆಲುವಿಗೆ 192 ರನ್ ಗುರಿ ಪಡೆದಿದ್ದ ಭಾರತವು ಮೂರನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 40 ರನ್ ಗಳಿಸಿತ್ತು. ಸೋಮವಾರ ಆರಂಭದಲ್ಲಿ ವೇಗವಾಗಿ ರನ್ ಗಳಿಸಲಾರಂಭಿಸಿತು. ಆದರೆ ಆ್ಯಂಡರ್ಸನ್ ಹಿಡಿದ ಅದ್ಭುತ ಕ್ಯಾಚ್ ಗೆ ಜೈಸ್ವಾಲ್ ಔಟಾದರು. ಅರ್ಧಶತಕ ಹೊಡೆದ ನಾಯಕ ರೋಹಿತ್ ಔಟಾದಾಗ ತಂಡವು ಹಠಾತ್ ಕುಸಿತ ಕಂಡಿತು.

ಒಂದು ಹಂತದಲ್ಲಿ 120 ರನ್ ಗೆ ಐದು ವಿಕೆಟ್ ಕಳೆದುಕೊಂಡಿತ್ತು. ಬಳಿಕ ಗಿಲ್ ಜೊತೆಯಾದ ಜುರೆಲ್ ಮುರಿಯದ ಆರನೇ ವಿಕೆಟ್ ಗೆ 72 ರನ್ ಜೊತೆಯಾಟವಾಡಿದರು. ಗಿಲ್ ಅಜೇಯ 92 ರನ್ ಗಳಿಸಿದರೆ, ಜುರೆಲ್ ಅಜೇಯ 39 ರನ್ ಮಾಡಿದರು. ಭಾರತವು ಐದು ವಿಕೆಟ್ ಅಂತರದ ಗೆಲುವು ಸಾಧಿಸಿತು.

ಬೆನ್ ಸ್ಟೋಕ್ಸ್ ಮತ್ತು ಬ್ರೆಂಡನ್ ಮೆಕಲಮ್ ನಾಯಕತ್ವದಲ್ಲಿ ಇಂಗ್ಲೆಂಡ್‌ಗೆ ಇದು ಮೊದಲ ಸರಣಿ ಸೋಲು. ಅಲ್ಲದೆ, ಸತತ ಮೂರು ಟೆಸ್ಟ್‌ಗಳಲ್ಲಿ ಸೋತಿರುವುದು ಇದೇ ಮೊದಲಾಗಿದೆ.

ಸಂಕ್ಷಿಪ್ತ ಸ್ಕೋರ್

Advertisement

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ 353 ರನ್, ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 307 ರನ್.

ಇಂಗ್ಲೆಂಡ್ ಎರಡನೇ ಇನ್ನಿಂಗ್ಸ್ ನಲ್ಲಿ 145 ರನ್ ಮತ್ತು  ಭಾರತ ಎರಡನೇ ಇನ್ನಿಂಗ್ಸ್ ನಲ್ಲಿ ಐದು ವಿಕೆಟ್ ನಷ್ಟಕ್ಕೆ 192

Advertisement

Udayavani is now on Telegram. Click here to join our channel and stay updated with the latest news.

Next