Advertisement
ಚಿಪಾಕ್ ಅಂಗಳದಲ್ಲಿ ಟಾಸ್ ಗೆದ್ದ ವಿರಾಟ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಇಂಗ್ಲೆಂಡ್ ತಂಡದಲ್ಲಿ ನಾಲ್ಕು ಬದಲಾವಣೆಯಾಗಿದ್ದು, ಟೀಂ ಇಂಡಿಯಾದಲ್ಲೂ ಬದಲವಾಣೆ ಮಾಡಲಾಗಿದೆ. ಭಾರತದ ಪರ ಅಕ್ಷರ್ ಪಟೇಲ್ ಟೆಸ್ಟ್ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದರೆ, ಬಹಳ ಸಮಯದ ಬಳಿಕ ಕುಲದೀಪ್ ಯಾದವ್ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ವೇಗಿ ಮೊಹಮದ್ ಸಿರಾಜ್ ಇಂದು ಇಶಾಂತ್ ಗೆ ಸಾಥ್ ನೀಡಲಿದ್ದಾರೆ. ವೇಗಿ ಬುಮ್ರಾಗೆ ವಿಶ್ರಾಂತಿ ನೀಡಲಾಗದೆ. ನದೀಂ ಮತ್ತು ವಾಷಿಂಗ್ಟನ್ ಸುಂದರ್ ಕೈಬಿಡಲಾಗಿದೆ.
Related Articles
Advertisement
ಇವರಲ್ಲಿ ಆ್ಯಂಡರ್ಸನ್ ಮತ್ತು ಬೆಸ್ ಅವರನ್ನು ರೊಟೇಶನ್ ಪದ್ಧತಿ ಹಾಗೂ ಹೆಚ್ಚಿನ ಒತ್ತಡದಿಂದ ಮುಕ್ತಗೊಳಿಸುವ ಸಲುವಾಗಿ ಹೊರಗಿಡಲಾಗಿದೆ. ಇವರ ಬದಲು ಸ್ಟುವರ್ಟ್ ಬ್ರಾಡ್ ಮತ್ತು ಮೊಯಿನ್ ಅಲಿ ಅವರನ್ನು ಸೇರಿಸಿ ಕೊಳ್ಳಲಾಗಿದೆ. ವೇಗಿ ಆರ್ಚರ್ ಗಾಯಾಳಾದ ಕಾರಣ ತಂಡದಿಂದ ಬೇರ್ಪಟ್ಟಿದ್ದಾರೆ. ಇವರ ಸ್ಥಾನಕ್ಕೆ ಆಲ್‌ರೌಂಡರ್ ಕ್ರಿಸ್ ವೋಕ್ಸ್ ವೇಗಿ ಓಲೀ ಸ್ಟೋನ್ ಆಯ್ಕೆಯಾಗಿದ್ದಾರೆ. ಬಟ್ಲರ್ ಬದಲು ಬೆನ್ ಫೋಕ್ಸ್ ವಿಕೆಟ್ ಕೀಪಿಂಗ್ ನಡೆಸಲಿದ್ದಾರೆ.
ತಂಡಗಳು
ಭಾರತ: ರೋಹಿತ್ ಶರ್ಮ, ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್, ಆರ್. ಅಶ್ವಿನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಇಶಾಂತ್ ಶರ್ಮ, ಮೊಹಮ್ಮದ್ ಸಿರಾಜ್.
ಇಂಗ್ಲೆಂಡ್: ಡೊಮಿನಿಕ್ ಸಿಬ್ಲಿ, ರೋರಿ ಬರ್ನ್ಸ್, ಡೇನಿಯಲ್ ಲಾರೆನ್ಸ್, ಜೋ ರೂಟ್ (ನಾಯಕ), ಓಲೀ ಪೋಪ್, ಸ್ಟೋಕ್ಸ್, ಬೆನ್ ಫೋಕ್ಸ್, ಮೊಯಿನ್ ಅಲಿ, ಸ್ಟುವರ್ಟ್ ಬ್ರಾಡ್, ಓಲೀ ಸ್ಟೋನ್, ಜಾಕ್ ಲೀಚ್