ಹೊಸದಿಲ್ಲಿ: ಗ್ವಾಲಿಯರ್‌ಯಲ್ಲಿ ಗೆಲುವಿನ ಗಮ್ಮತ್ತು ಆಚರಿಸಿದ ಭಾರತ ಯುವ ತಂಡ, ಬುಧವಾರ ಕೋಟ್ಲಾ ಕದನದಲ್ಲಿ ಬಾಂಗ್ಲಾ ವನ್ನು ಮಣಿಸಿ ಟಿ20 ಸರಣಿ ವಶಪಡಿಸಿ ಕೊಳ್ಳಲು ಸಿದ್ಧತೆ ಆರಂಭಿಸಿದೆ. ಇನ್ನೊಂದೆಡೆ ಸರಣಿ ಜೀವಂತವಾಗಿ ಉಳಿಯಬೇಕಾದರೆ ಈ ಪಂದ್ಯವನ್ನು ಬಾಂಗ್ಲಾ ಗೆಲ್ಲಲೇಬೇಕಿದೆ.
ಬಾಂಗ್ಲಾದೇಶದ ಟಿ20 ತಂಡಕ್ಕೆ ಹೋಲಿ ಸಿದರೆ ಭಾರತ ತಂಡದ ಅನುಭವ ಕಡಿಮೆ. ಪ್ರಮುಖ ತ್ರಿವಳಿಗಳ ವಿದಾಯ ಒಂದೆಡೆ ಯಾದರೆ, ಜೈಸ್ವಾಲ್, ಗಿಲ್, ಪಂತ್, ಅಕ್ಷರ್, ಬುಮ್ರಾ ಅವರಂಥ ಟಿ20 ಸ್ಪೆಷಲಿಸ್ಟ್‌ಗ ಳಿಗೆ ನೀಡಲಾದ ವಿಶ್ರಾಂತಿ ಇನ್ನೊಂದೆಡೆ. ಇವೆಲ್ಲವನ್ನು ಮೀರಿಯೂ ಗ್ವಾಲಿಯರ್‌ನಲ್ಲಿ ಸೂರ್ಯಕುಮಾರ್ ಪಡೆಯ ಸಾಧನೆ ಪ್ರಶಂಸ ನೀಯ. 7 ವಿಕೆಟ್‌ಗಳ ವೀರೋಚಿತ ಗೆಲುವು ನಮ್ಮದಾಗಿತ್ತು. 12 ಓವರ್‌ಗಳೊಳಗಾಗಿ ಗುರಿ ಮುಟ್ಟಿದ್ದು ಹೆಗ್ಗಳಿಕೆಯ ಸಂಗತಿ.
ಬೌಲಿಂಗ್‌ನಲ್ಲಿ ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಮಾಯಾಂಕ್ ಯಾದವ್, ವಾಷಿಂಗ್ಟನ್ ಸುಂದರ್, ಹಾರ್ದಿಕ್ ಪಾಂಡ್ಯ… ಎಲ್ಲರೂ ನಿಯಂತ್ರಣ ಸಾಧಿಸಿ ಬಾಂಗ್ಲಾ ಪಡೆಯನ್ನು 127ರ ಸಣ್ಣ ಮೊತ್ತಕ್ಕೆ ಕಟ್ಟಿಹಾಕಿದ್ದರು. ಚೇಸಿಂಗ್ ವೇಳೆ ಸ್ಯಾಮ್ಸನ್, ಸೂರ್ಯ, ಪಾಂಡ್ಯ ಬಿರುಸಿನ ಆಟವಾಡಿದರು. ಅಭಿಷೇಕ್ ಶರ್ಮ ಉತ್ತಮ ಲಯದಲ್ಲಿದ್ದರೂ ಎಡವಟ್ಟು ಮಾಡಿಕೊಂಡು ರನೌಟ್ ಆದರು. ಒಟ್ಟಾರೆ ಯಂಗ್ ಇಂಡಿಯಾದ್ದು ಸಾಂ ಕ ಸಾಧನೆಯಾಗಿ ದಾಖಲಾಗಿದೆ. ಹೊಸದಿಲ್ಲಿಯಲ್ಲೂ ಇದು ಪುನರಾವರ್ತನೆಗೊಳ್ಳಬೇಕಿದೆ.
ಮೊದಲ ಆಯ್ಕೆಯ ಆರಂಭಿಕರಾದ ಜೈಸ್ವಾಲ್-ಗಿಲ್ ಗೈರಲ್ಲಿ ಸಂಜು ಸ್ಯಾಮ್ಸನ್ ಓಪನಿಂಗ್ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದರು. 2015ರಲ್ಲಿ ಭಾರತ ತಂಡವನ್ನು ಪ್ರವೇಶಿಸಿದಂದಿನಿಂದ ಅಂದರ್- ಬಾಹರ್ ಆಗುತ್ತಲೇ ಇದ್ದ ಸ್ಯಾಮ್ಸನ್, ಗ್ವಾಲಿಯರ್‌ನಲ್ಲಿ 19 ಎಸೆತಗಳಿಂದ 29 ರನ್ ಮಾಡಿ ಗಮನ ಸೆಳೆದರು. ರಿಂಕು ಸಿಂಗ್, ರಿಯಾನ್ ಪರಾಗ್ ಅವರಿಗೆ ಬ್ಯಾಟಿಂಗ್ ಅವಕಾಶ ಲಭಿಸಿರಲಿಲ್ಲ. ಒಮ್ಮೆ ಖಾಯಂ ಆಟಗಾರರು ತಂಡಕ್ಕೆ ಮರಳಿದ ಬಳಿಕ ಈಗಿನ ಬಹುತೇಕ ಆಟಗಾರರು ಹೊರಬೀಳುವುದು ಖಾತ್ರಿ. ಹೀಗಾಗಿ ಈ ಅವಕಾಶವನ್ನು ಬಳಸಿ ಕೊಂಡು ಸರಣಿ ಗೆಲುವು ತಂದಿತ್ತರೆ ಇದೊಂದು ಮಹಾನ್ ಸಾಧನೆಯಾಗಿ ದಾಖಲಾಗಲಿದೆ.
ಗೆಲುವು ಕಾಣದ ಬಾಂಗ್ಲಾ
ಪಾಕಿಸ್ಥಾನ ವಿರುದ್ಧದ ಟೆಸ್ಟ್ ಸರಣಿಯನ್ನು ಕ್ಲೀನ್‌ಸ್ವೀಪ್ ಆಗಿ ವಶಪಡಿಸಿಕೊಂಡು ಬಂದ ಬಾಂಗ್ಲಾ ಅಪಾಯಕಾರಿಯಾಗಿ ಗೋಚರಿಸಬಹುದೆಂಬ ನಿರೀಕ್ಷೆ ಇತ್ತು. ಆದರೆ ಭಾರತಕ್ಕೆ ಕಾಲಿಟ್ಟ ಗಳಿಗೆಯಿಂದ ನಜ್ಮುಲ್ ಹುಸೇನ್ ಪಡೆ ಗೆಲುವಿನ ಮುಖವನ್ನೇ ಕಂಡಿಲ್ಲ.
“ನಾವು ಕೆಟ್ಟದಾಗೇನೂ ಆಡಿಲ್ಲ. ಆದರೆ ಕಳೆದ ಸುದೀರ್ಘಾವಧಿಯಿಂದ ಈ ಮಾದರಿಯಲ್ಲಿ ಉತ್ತಮ ಆಟವಾಡಿಲ್ಲ. ಇದೊಂದು ಕಳಪೆ ತಂಡ ಎಂದು ಅನಿಸುವುದೂ ಇಲ್ಲ. ಬ್ಯಾಟಿಂಗ್ ದೌರ್ಬಲ್ಯ ನಮ್ಮನ್ನು ಕಾಡುತ್ತಿದೆ’ ಎಂಬುದಾಗಿ ನಜ್ಮುಲ್ ಹೇಳಿದ್ದಾರೆ.