ಸಿಡ್ನಿ: ಮೊದಲ ಏಕದಿನ ಪಂದ್ಯದಲ್ಲಿ ಹೀನಾಯ ಸೋಲನುಭವಿಸಿದ ಟೀಂ ಇಂಡಿಯಾ ಇಂದು ಗೆಲ್ಲಲೇ ಬೇಕಾದ ಒತ್ತಡದೊಂದಿಗೆ ಕಣಕ್ಕಿಳಿಯುತ್ತಿದೆ. ಟಾಸ್ ಗೆದ್ದ ಆರೋನ್ ಫಿಂಚ್ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಕೈಗೊಂಡಿದ್ದಾರೆ.
ಕಾಂಗರೂ ಪಡೆ ಗೆಲುವಿನ ವೇಗ ಮುಂದುವರಿಸುವ ಇರಾದೆಯೊಂದಿಗೆ ಕಣಕ್ಕಿಳಿದರೆ, ಕೊಹ್ಲಿ ಪಡೆ ಮೊದಲ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.
ಸಿಡ್ನಿ ಅಂಗಳದಲ್ಲಿ ಬಿಂದಾಸ್ ಆಗಿ ಬ್ಯಾಟ್ ಬೀಸಬಹುದು ಎಂಬುದನ್ನು ಪಾಂಡ್ಯ ತೋರಿಸಿ ಕೊಟ್ಟಿದ್ದಾರೆ. ಧವನ್ ಕೂಡ ತಂಡವನ್ನು ಆಧರಿಸುವ ಕೆಲಸ ಮಾಡಿದ್ದಾರೆ. ಇವರಿಬ್ಬರ ಹೋರಾಟದ ವೇಳೆ 375 ರನ್ ಕೂಡ ಭಾರತಕ್ಕೆ ಎಟಕುವ ಸಾಧ್ಯತೆ ಇತ್ತು. ಆದರೆ ಅಗರ್ವಾಲ್, ಕೊಹ್ಲಿ, ಅಯ್ಯರ್, ರಾಹುಲ್ ಅವರ ವೈಫಲ್ಯ ಮುಳುವಾಯಿತು. ಇವರಲ್ಲಿ ಇಬ್ಬರಾದರೂ ಕ್ರೀಸ್ ಆಕ್ರಮಿಸಿಕೊಂಡಿದ್ದರೆ ಪಂದ್ಯದ ಕತೆಯೇ ಬೇರೆ ಇರುತ್ತಿತ್ತು. ಇಂದಿನ ಪಂದ್ಯದಲ್ಲಿ ಇವರೆಲ್ಲರ ಬ್ಯಾಟುಗಳೂ ಮಾತಾಡಬೇಕಿವೆ.
ಇದನ್ನೂ ಓದಿ:ಕಳಪೆ ಫೀಲ್ಡಿಂಗ್ ಬಗ್ಗೆ ಕೊಹ್ಲಿ ಬೇಸರ
ಆಸೀಸ್ ತಂಡ ಒಂದು ಬದಲಾವಣೆ ಮಾಡಿಕೊಂಡಿದ್ದು, ಗಾಯಗೊಂಡಿರುವ ಮಾರ್ಕಸ್ ಸ್ಟೋಯಿನಸ್ ಬದಲು, ಮೊಸಿಸ್ ಹೆನ್ರಿಕ್ಸ್ ಇಂದಿನ ಪಂದ್ಯದಲ್ಲಿ ಆಡಲಿದ್ದಾರೆ. ಭಾರತ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ.
ತಂಡಗಳು:
ಭಾರತ: ಶಿಖರ್ ಧವನ್, ಮಾಯಾಂಕ್ ಅಗರ್ವಾಲ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಯುಜುವೇಂದ್ರ ಚಾಹಲ್, ನವದೀಪ್ ಸೈನಿ, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬುಮ್ರಾ.
ಆಸ್ಟ್ರೇಲಿಯ: ಆರೋನ್ ಫಿಮಚ್ (ನಾಯಕ), ಡೇವಿಡ್ ವಾರ್ನರ್, ಸ್ಟೀವನ್ ಸ್ಮಿತ್, ಮಾರ್ನಸ್ ಲಬುಶೇನ್, ಗ್ಲೆನ್ ಮ್ಯಾಕ್ಸ್‌ವೆಲ್, ಮೊಸಿಸ್ ಹೆನ್ರಿಕ್ಸ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಝಲ್‌ವುಡ್, ಆ್ಯಡಂ ಝಂಪ.