Advertisement

Vijayapura: ಉತ್ತರ ಕರ್ನಾಟಕ ಗುಳೆ ತಡೆಯಲು ಕೈಗಾರಿಕೀಕರಣ ಅಗತ್ಯ: ದರ್ಶನಾಪುರ

02:56 PM Sep 06, 2023 | Team Udayavani |

ವಿಜಯಪುರ: ದೊಡ್ಡವರೆಂದು ಕೋಟಿ ಕೋಟಿ ರೂ. ಸಾಲ ನೀಡಿ ಪರಿತಪಿಸುತ್ತಿರುವ ಬ್ಯಾಂಕ್ ಗಳು ಸ್ಥಳೀಯ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಸಾಲ ನೀಡಲು ಆದ್ಯತೆ ನೀಡಬೇಕು. ಇದರಿಂದ ಉತ್ತರ ಕರ್ನಾಟಕ ಭಾಗದಲ್ಲಿ ಗುಳೆ ತಡೆಯುವಲ್ಲಿ ಸಹಕಾರಿ ಆಗಲಿದೆ ಎಂದು ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ ಬ್ಯಾಂಕರ್ ಗಳಿಗೆ ಸಲಹೆ ನೀಡಿದರು.

Advertisement

ಬುಧವಾರ ನಗರದಲ್ಲಿ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದಿಂದ ಕೈಗಾರಿಕೆ, ವಾಣಿಜ್ಯ ಇಲಾಖೆ ಹಾಗೂ ಸಿಡ್ಬಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸವಲತ್ತು, ಹಣಕಾಸಿನ ನೆರವು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಣ್ಣ ಕೈಗಾರಿಕಾ ಅಭಿವೃದ್ಧಿಗೆ

ಶೈಕ್ಷಣಿಕವಾಗಿ ಗುಣಮಟ್ಟದ ಶಿಕ್ಷಣ ಹಾಗೂ ಸಣ್ಣ ಕೈಗಾರಿಕೆಗಳ ಮೂಲಕ ಗುಳೆ ಹೋಗುವುದನ್ನು ತಡೆಯಲು ಸಾಧ್ಯವಿದೆ. ಹೀಗಾಗಿ ತೊಡಕುಗಳು ಇಲ್ಲದಂತೆ ಸಣ್ಣ ಹಾಗೂ ಬೃಹತ್ ಕೈಗಾರಿಕೆಗಳು ಈ ಪ್ರದೇಶಕ್ಕೆ ಬರುವ ಅಗತ್ಯವಿದೆ ಎಂದರು.

ಈ ಪ್ರದೇಶದಲ್ಲಿ ನೀರಾವರಿ ಸೌಲಭ್ಯ ಹೆಚ್ಚುತ್ತಿದ್ದು, ಕೃಷಿ ಉತ್ಪನ್ನ ಆಧಾರಿತ ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು‌.

ಭಾರತೀಯ ಜಿಡಿಪಿ ಅಭ್ಯುದಯಕ್ಕೆ ಸಣ್ಣ ಕೈಗಾರಿಕೆಗಳ ಕೊಡುಗೆ ಅಪಾರವಾಗಿದೆ. ಹೀಗಾಗಿ ಹೆಚ್ಚು ಉದ್ಯೋಗ ಸೃಷ್ಟಿಗಾಗಿ ವಿಶೇಷ ಕೊಡುಗೆ ನೀಡುತ್ತಿದೆ ಎಂದು ವಿವರಿಸಿದರು.

Advertisement

ಕಾಸಿಯಾ ಜಿಲ್ಲಾಧ್ಯಕ್ಷ ಎಸ್.ವಿ.ಪಾಟೀಲ ಮಾತನಾಡಿ, ವಿಜಯಪುರ ಸಣ್ಣ ಕೈಗಾರಿಕಾ ಪ್ರದೇಶ ಅವ್ಯವಸ್ಥೆ ಆಗರ ವಾಗಿದ್ದು, ಬೆಳಗಾವಿ ಯಲ್ಲಿರುವ ಅಧಿಕಾರಿ ಸಮಸ್ಯೆ ನಿವಾರಣಗೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಹೊಸ ಉದ್ಯಮಿದಾರರಿಗೆ ಪ್ರೋತ್ಸಾಹ ಸೀಗುತ್ತಿಲ್ಲ. ಸಣ್ಣ ಕೈಗಾರಿಕಾ ಸಾಲ ನೀಡಿಕೆ ನಿಯಮ ಸಡಿಲಿಕೆ, ಬಡ್ಡಿದರ ಕಡಿಮೆ ಮಾಡುವುದು, ರಾಷ್ಟ್ರೀಕೃತ ಬ್ಯಾಂಕುಗಳಿಗೆ ಸಾಲ ನೀಡಿಕೆಗೆ ಗುರಿ ನೀಡಬೇಕು. ಕೃಷಿ ಆಧಾರಿತ ಸಣ್ಣ ಉದ್ಯಮ ಆರಂಭಿಸಲು ಪ್ರತಿ ತಾಲೂಕಿಗೆ ಕನಿಷ್ಠ 50-100 ಎಕರೆ ಸಣ್ಣ‌ ಕೈಗಾರಿಕಾ ವಸಾಹತು ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಉತ್ತರ ಕರ್ನಾಟಕ ಭಾಗದಲ್ಲಿ ಈ ಹಿಂದೆ ಇದ್ದ ಎಣ್ಣೆ ಉತ್ಪಾದಕ ಸಣ್ಣ ಕೈಗಾರಿಕೆಗಳು ಮುಚ್ಚಲು ಪಾಮ್ ಎಣ್ಣೆಯನ್ನು ವಿದೇಶದಿಂದ ಆಮದು ಮಾಡಿಕೊಳ್ಳುವ ನೀತಿಯಿಂದ ಮುಚ್ಚಲು ಕಾರಣವಾಗಿದೆ ಎಂದು ಸಮಸ್ಯೆ ನಿವೇದಿಸಿದರು.

ಹೀಗಾಗಿ ಕೈಗಾರಿಕಾ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಇದಕ್ಕಾಗಿ ವಿಜಯಪುರ ಜಿಲ್ಲೆಯಲ್ಲಿ ಐದಾರು ಸಾವಿರ ಎಕರೆ ಜಮೀನು ಲಭ್ಯವಿದ್ದು, ಸಣ್ಣ ಕೈಗಾರಿಕೆ ಸ್ಥಾಪನೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹಾಗೂ ಸಣ್ಣ ಕೈಗಾರಿಕಾ ಸಚಿವ ಶರಣಬಸಪ್ಪ ದರ್ಶನಾಪುರ ಇಬ್ಬರೂ ಜಂಟಿಯಾಗಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡುದರು.

ಕಾಸಿಯಾ ಅಧ್ಯಕ್ಷ ಸಿಎ ಶಶಿಧರ ಶೆಟ್ಟಿ, ಸಿಡ್ಬಿ ಪ್ರಾದೇಶಿಕ ಮುಖ್ಯಸ್ಥ ಸಾತ್ಯಕಿ ರಸ್ತೋಗಿ, ಸಿಡ್ಬಿ ಬೆಂಗಳೂರು ಪ್ರಾದೇಶಿಕ ಕಛೇರಿ ಉಪ ಪ್ರಧಾನ ವ್ಯವಸ್ಥಾಪಕ ಬಿ.ಉಲಗಿಯನ್, ಕೈಗಾರಿಕಾ ಜಂಟಿ ನಿರ್ದೇಶಕ ಪ್ರಶಾಂತ ಬಾರಿಗಿಡದ,
ಗ್ರಾಮೀಣ ಜಂಟಿ ಕಾರ್ಯದರ್ಶಿ ಅರುಣ ಪಡಿಯಾರ, ಉಪಾಧ್ಯಕ್ಷ ಎಂ.ಜಿ.ರಾಜಗೋಪಾಲ ಇತರರು ಉಪಸ್ಥಿತರಿದ್ದರು.

ಕಾಸಿಯಾ ಪ್ರಧಾನ ಕಾರ್ಯದರ್ಶಿ ನಿರೂಪಿಸಿದರು.

ಇದನ್ನೂ ಓದಿ: Consumer Court: ತುಂಡಾಗಿದ್ದ ಕುರ್ಚಿ ಬದಲಿಸಿಕೊಡದ ಅಂಗಡಿಗೆ 15 ಸಾವಿರ ದಂಡ

Advertisement

Udayavani is now on Telegram. Click here to join our channel and stay updated with the latest news.

Next