Advertisement

ಕೈಗಾರಿಕೋದ್ಯಮಿಗಳು ಕಡ್ಡಾಯ ನಿಯಮ ಪಾಲಿಸಿ; ಡಾ|ಶಾಂತ ಎ ತಿಮ್ಮಯ್ಯ

06:20 PM Aug 22, 2022 | Team Udayavani |

ಸಿರುಗುಪ್ಪ: ಕೈಗಾರಿಕೆ ಸ್ಥಾಪನೆಯ ಸಂದರ್ಭದಲ್ಲಿ ಸರ್ಕಾರ ನೀಡಿರುವ ಸೂಚನೆಗಳನ್ನು ಕೈಗಾರಿಕೆ ಸ್ಥಾಪಿಸುವವರು ಕಡ್ಡಾಯವಾಗಿ ಪಾಲನೆ ಮಾಡಬೇಕು. ಕೈಗಾರಿಕೆ ಸ್ಥಾಪಿಸಲು ಅನುಮತಿ ಪಡೆದ ನಂತರ ಸರ್ಕಾರದ ಸೂಚನೆಗಳು ಮತ್ತು ನಿಯಮಗಳನ್ನು ಪಾಲನೆ ಮಾಡದಿದ್ದರೆ ಅಂಥ ಕೈಗಾರಿಕೆಗಳ ಅನುಮತಿಯನ್ನು ರದ್ದುಮಾಡಲು ಅವಕಾಶವಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ರಾಜ್ಯಾಧ್ಯಕ್ಷ ಡಾ| ಶಾಂತ ಎ ತಿಮ್ಮಯ್ಯ ತಿಳಿಸಿದರು.

Advertisement

ನಗರದ ಅಭಯಾಂಜನೇಯಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿ ಬಳ್ಳಾರಿ ಪ್ರಾದೇಶಿಕ ಕಚೇರಿ ವತಿಯಿಂದ ಹಮ್ಮಿಕೊಂಡಿದ್ದ ಸಿರುಗುಪ್ಪ ನಗರದಲ್ಲಿರುವ ರೈಸ್‌ಮಿಲ್‌ ಘಟಕಗಳ ವೈಯಕ್ತಿಕ ಆಲಿಕೆ ಸಭೆಯಲ್ಲಿ ಮಾತನಾಡಿದ ಅವರು ಯಾವುದೇ ಕೈಗಾರಿಕೆಗಳಿಗೆ ಅನುಮತಿ ನೀಡುವಾಗ ಪರಿಸರ, ನೀರು, ಗಾಳಿ ಮತ್ತು ಮನುಷ್ಯರ ಆರೋಗ್ಯಕ್ಕೆ ಯಾವುದೇ ರೀತಿಯಲ್ಲಿ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕೆನ್ನುವ ಮುಚ್ಚಳಿಕೆಯನ್ನು ಬರೆಸಿಕೊಳ್ಳಲಾಗುತ್ತಿದೆ. ಸರ್ಕಾರದ ನೀತಿ ನಿಯಮಗಳನ್ನು ಪಾಲನೆ ಮಾಡಬೇಕು ಎಂದರು.

ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ)ಯ ರಾಜ್ಯ ಕಾರ್ಯಾಧ್ಯಕ್ಷ ಕಂಬಳಿ ಮಲ್ಲಿಕಾರ್ಜುನ ಮಾತನಾಡಿ, ನಗರದಲ್ಲಿ ಸ್ಥಾಪಿಸಲಾಗಿರುವ ರೈಸ್‌ ಮಿಲ್‌ಗ‌ಳಿಂದ ಹಾನಿಕಾರಕ ಧೂಳು ಬರುತ್ತಿದೆ, ಇದರಿಂದಾಗಿ ಸಾಕಷ್ಟು ಸಮಸ್ಯೆಗಳಾಗುತ್ತಿವೆ. ಇದನ್ನು ಪರಿಹರಿಸಿ ಎಂದು ಬಳ್ಳಾರಿ ಜಿಲ್ಲಾ ಪರಿಸರ ಇಲಾಖೆಯ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಲಾಗಿತ್ತು. ಆದರೆ ಕೇವಲ 2 ರೈಸ್‌ಮಿಲ್‌ಗ‌ಳನ್ನು ಮುಚ್ಚಲು ಅಧಿಕಾರಿಗಳು ಕ್ರಮ ತೆಗೆದುಕೊಂಡಿದ್ದು,
ಇನ್ನುಳಿದ ರೈಸ್‌ಮಿಲ್‌ಗ‌ಳ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳದೆ ಅಧಿಕಾರಿಗಳು ಬೇಜವಾಬ್ದಾರಿಯಿಂದ ವರ್ತಿಸಿದ್ದಾರೆ ಎಂದರು. ಪ್ರತಿಯೊಬ್ಬ ರೈಸ್‌ಮಿಲ್‌ ಮಾಲೀಕರಿಗೆ ಎಲ್ಲವನ್ನು ಸರಿಪಡಿಸಿಕೊಳ್ಳಲು 60 ದಿನಗಳ ಅವಕಾಶವನ್ನು ನೀಡಲಾಗಿದೆ. ಅಷ್ಟರೊಳಗೆ ಎಲ್ಲವನ್ನೂ ಸರಿಪಡಿಸಿಕೊಳ್ಳಬೇಕು, ಇಲ್ಲದಿದ್ದರೆ ಕಾನೂನು ಕ್ರಮವನ್ನು ಜರುಗಿಸಲಾಗುವುದು ಎಂದು ಅಧಿಕಾರಿ ತಿಳಿಸಿದರು.

ರೈಸ್‌ಮಿಲ್‌ ಮಾಲೀಕರ ಸಂಘದ ತಾಲೂಕು ಅಧ್ಯಕ್ಷ ಎನ್‌.ಜಿ. ಬಸವರಾಜಪ್ಪ ಮಾತನಾಡಿ, ನಾವು ಸಾಕಷ್ಟು ತೆರಿಗೆಯನ್ನು ನಗರಸಭೆಗೆ ಪಾವತಿಸುತ್ತೇವೆ. ಆದರೆ ನಮಗೆ ರಸ್ತೆಯಿಲ್ಲ, ಕುಡಿಯಲು ನೀರಿಲ್ಲ, ವಿದ್ಯುತ್‌ ದೀಪಗಳಿಲ್ಲ ಎಂದು ಹೇಳಿದರು. ರೈತ ಹಾಜಿಸಾಬ್‌, ಯುವ ಮುಖಂಡ ಯಲ್ಲಪ್ಪ, ರೈಸ್‌ಮಿಲ್‌ ಮಾಲಿಕ ಶ್ರೀನಿವಾಸರೆಡ್ಡಿ ಮಾತನಾಡಿದರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರು ಕೇಂದ್ರ ಕಚೇರಿಯ ಹಿರಿಯ ಪರಿಸರ ಅಧಿಕಾರಿ ಶಕುಂತಲಾಬಾಯಿ, ಸೋಮಶೇಖರ, ಬಳ್ಳಾರಿ ಜಿಲ್ಲಾ ಪರಿಸರ ಅಧಿ ಕಾರಿ ಡಾ| ದೊಡ್ಡಶಾನಯ್ಯ, ರೈಸ್‌ಮಿಲ್‌ ಮಾಲೀಕರಾದ ಬಿ.ಜಿ. ಮಂಜುನಾಥರೆಡ್ಡಿ, ಬಿ.ಜಿ.ಸುಧಾಕರರೆಡ್ಡಿ, ಚಾಗಿ ಸುಬ್ಬಯ್ಯ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next