Advertisement

Case: ಜಾರಿ ನಿರ್ದೇಶನಾಲಯದಲ್ಲಿ ಕೈಗಾರಿಕೋದ್ಯಮಿ ಅನಿಲ್‌ ಅಂಬಾನಿ ವಿಚಾರಣೆ, ಏನಿದು ಪ್ರಕರಣ?

05:35 PM Jul 03, 2023 | Team Udayavani |

ಮುಂಬೈ: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ (ಜು.03) ಕೈಗಾರಿಕೋದ್ಯಮಿ ಅನಿಲ್‌ ಅಂಬಾನಿ ಜಾರಿ ನಿರ್ದೇಶನಾಲಯ ಅಧಿಕಾರಿಗಳ ಮುಂದೆ ಹಾಜರಾಗಿರುವುದಾಗಿ ವರದಿ ತಿಳಿಸಿವೆ.

Advertisement

ಇದನ್ನೂ ಓದಿ:Photo Gallery: ʼಮುಂಗಾರು ಮಳೆʼ ಹುಡುಗನ ʼಕೃಷ್ಣಂ ಪ್ರಣಯ ಸಖಿʼಗೆ ನಾಯಕಿಯಾದ Malvika Nair

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ ಉಲ್ಲಂಘನೆ (FEMA) ಪ್ರಕರಣದಲ್ಲಿ ಅನಿಲ್‌ ಅಂಬಾನಿ ಅವರು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ಹಾಜರಾಗಿ ಹೇಳಿಕೆಯನ್ನು ನೀಡಿರುವುದಾಗಿ ಮೂಲಗಳು ಹೇಳಿವೆ.

2020ರಲ್ಲಿಯೂ ಅನಿಲ್‌ ಅಂಬಾನಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ಹಾಜರಾಗಿದ್ದರು. ತೆರಿಗೆ ವಂಚನೆ ಪ್ರಕರಣದ ನಡುವೆಯೇ ಅನಿಲ್‌ ಅಂಬಾನಿ ಯೆಸ್‌ ಬ್ಯಾಂಕ್‌ ಸಾಲದ ಕಿಕ್‌ ಬ್ಯಾಕ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೋಮವಾರ ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗಿದ್ದರು ಎಂದು ವರದಿ ವಿವರಿಸಿದೆ.

ತೆರಿಗೆ ವಂಚನೆ ಪ್ರಕರಣ:

Advertisement

ಅನಿಲ್‌ ಅಂಬಾನಿ ಎರಡು ಸ್ವಿಸ್‌ ಬ್ಯಾಂಕ್‌ ಖಾತೆಗಳಲ್ಲಿ 814 ಕೋಟಿ ಠೇವಣಿ ಇಟ್ಟಿದ್ದು, ಈ ಮೂಲಕ ರಿಲಯನ್ಸ್‌ ಗ್ರೂಪ್‌ ಮುಖ್ಯಸ್ಥ 420 ಕೋಟಿ ತೆರಿಗೆಯನ್ನು ವಂಚಿಸಿರುವುದಾಗಿ ಆರೋಪಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಚ್‌ 17ರವರೆಗೆ ಅನಿಲ್‌ ಅಂಬಾನಿ ವಿರುದ್ಧ ಆದಾಯ ತೆರಿಗೆ ಇಲಾಖೆ ಯಾವುದೇ ಕಠಿಣ ಕ್ರಮ ತೆಗೆದುಕೊಳ್ಳದಂತೆ ಬಾಂಬೆ ಹೈಕೋರ್ಟ್‌ ನಿರ್ದೇಶನ ನೀಡಿತ್ತು.

ನಂತರ ಏಪ್ರಿಲ್‌ ತಿಂಗಳಲ್ಲಿ ತೆರಿಗೆ ವಂಚಿಸಿದ ಪ್ರಕರಣದಲ್ಲಿ ದಂಡ ಕಟ್ಟುವಂತೆ ಕಪ್ಪು ಹಣ ಕಾಯ್ದೆಯಡಿ ಆದಾಯ ತೆರಿಗೆ ಇಲಾಖೆ ಅನಿಲ್‌ ಅಂಬಾನಿಗೆ ಜಾರಿಗೊಳಿಸಿದ್ದ ಷೋಕಾಸ್‌ ನೋಟಿಸ್‌ ಗೆ ಬಾಂಬೆ ಹೈಕೋರ್ಟ್‌ ತಡೆ ನೀಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next