ಕಾರ್ಯಾಚರಿಸುತ್ತಿದ್ದ ಕೈಗಾರಿಕಾ ತರಬೇತಿ ಕೇಂದ್ರವೂ ಇದೇ ಕಾರಣಕ್ಕೆ ಮುಚ್ಚಿ ಹೋಗಿತ್ತು. ಆದರೆ ಕೇಂದ್ರ ಮುಚ್ಚುವ ಸಂದರ್ಭ ಕೇಂದ್ರದ ಪರಿಕರಗಳನ್ನು ಅಲ್ಲೇ ಬಿಟ್ಟಿರುವ ಪರಿಣಾಮ ಲಕ್ಷಾಂತರ ರೂಪಾಯಿ ವೆಚ್ಚದ ಸೊತ್ತುಗಳು ಕಳ್ಳರ ಪಾಲಾಗಿದ್ದು, ಕಟ್ಟಡ ಪಾಳು ಬಿದ್ದಿದೆ.
Advertisement
ಕಡೇಶ್ವಾಲ್ಯದಲ್ಲಿ ಕಾರ್ಯಾಚರಿಸುತ್ತಿದ್ದ ಸರಕಾರಿ ತರಬೇತಿ ಕೇಂದ್ರದ ಕಟ್ಟಡಗಳು ಪ್ರಸ್ತುತ ಸಂಪೂರ್ಣ ಕಾಡಿನ ರೀತಿ ಪೊದೆಯಲ್ಲಿ ತುಂಬಿ ಹೋಗಿದ್ದು,ಕಟ್ಟಡವೂ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿ ಬೀಳುವ ಸ್ಥಿತಿಯಲ್ಲಿದೆ.ಸಂಬಂಧಪಟ್ಟ ಇಲಾಖೆಯು ಕೇಂದ್ರವನ್ನು ಮುಚ್ಚುವ ಸಂದರ್ಭ ತೋರಿದ ನಿರ್ಲಕ್ಷ್ಯದ ಪರಿಣಾಮ ಸರಕಾರದ ಸೊತ್ತುಗಳುನಾಶವಾಗಿವೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವೃತ್ತಿ ಆಧಾರಿತ ಕೋರ್ಸ್‌ಗಳನ್ನು ನೀಡಬೇಕು ಎಂದು ಕೆಲವೊಂದು ಕಡೆಗಳಲ್ಲಿ ಇಂತಹ ತರಬೇತಿ ಕೇಂದ್ರಗಳನ್ನು ತೆರೆದಿತ್ತು. ಕಡೇಶ್ವಾಲ್ಯದಲ್ಲಿ ದ.ಕ.ಜಿ.ಪಂ. ಅನುದಾನದಡಿ ಗಿರಿಜನ ಉಪಯೋಜನೆಯಡಿ 1988ರಲ್ಲಿ ಸರಕಾರಿ ಕೈಗಾರಿಕಾ ತರಬೇತಿ ಮತ್ತು ಸೇವಾ ಕೇಂದ್ರವನ್ನು ಆರಂಭಿಸಲಾಗಿತ್ತು. ಈ ಕೇಂದ್ರದಲ್ಲಿ ವಾಹನ ರಿಪೇರಿ, ಜನರಲ್ ಎಂಜಿನಿಯರಿಂಗ್ ಮೊದಲಾದ ವಿಷಯಕ್ಕೆ ಸಂಬಂಧಿಸಿ ತರಬೇತಿಯನ್ನು ನೀಡಲಾಗುತ್ತಿತ್ತು. ಬಂಟ್ವಾಳ ತಾಲೂಕು ಸೇರಿದಂತೆ ಇತರ ತಾಲೂಕುಗಳಿಂದ ಈ ಕೇಂದ್ರಕ್ಕೆ ವಿದ್ಯಾರ್ಥಿಗಳು ಆಗಮಿಸಿ ತರಬೇತಿ ಪಡೆಯುತ್ತಿದ್ದರು. 1996ರ ವರೆಗೆ ಅಂದರೆ ಸುಮಾರು 8 ಬರ್ಷಗಳ ಕಾಲ ಕಾರ್ಯಾಚರಿಸಿದ್ದ ಕೇಂದ್ರವು ಮತ್ತೆ ತೆರೆಯಲೇ ಇಲ್ಲ.
Related Articles
ಸೇರಿದಂತೆ ಇತರ ಸೊತ್ತುಗಳನ್ನು ಹಾಗೇ ಬಿಟ್ಟು ಬೀಗ ಹಾಕಲಾಗಿತ್ತು. ಈ ಕೇಂದ್ರದ ಕಟ್ಟಡವನ್ನು ಮತ್ತೆ ಉಪಯೋಗಿಸಬೇಕು ಎಂಬ ಪ್ರಯತ್ನದ ಫಲವಾಗಿ ವಯಸ್ಕರ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಲು 2000ದಲ್ಲಿ ಜಿ.ಪಂ. ಸಾಮಾನ್ಯ ಸಭೆಯಲ್ಲಿ ರ್ಣಯಕೈಗೊಳ್ಳಲಾಗಿತ್ತು. ಬೆಂಗಳೂರಿನ ಲೋಕ ಶಿಕ್ಷಣ ನಿರ್ದೇಶನಾಲಯ ಈ ಕುರಿತು ಮಾಹಿತಿಯನ್ನೂ ಕೇಳಿತ್ತು. ಜತೆಗೆ ಕಡೇಶ್ವಾಲ್ಯ ಗ್ರಾ.ಪಂ. ಸಾಮಾನ್ಯ ಸಭೆಯಲ್ಲೂ ಚರ್ಚೆ ನಡೆದು ಕಟ್ಟಡವನ್ನು ಗ್ರಾ.ಪಂ.ಗೆ ಹಸ್ತಾಂತರಿಸುವ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ಅದ್ಯಾವುದು ಕೂಡ ಪರಿಣಾಮಕಾರಿಯಾಗಿ ನುಷ್ಠಾನಗೊಂಡಿರಲಿಲ್ಲ.
Advertisement
ಕೇಂದ್ರವು ಮುಚ್ಚುವ ಸಂದರ್ಭದಲ್ಲೇ ಅಲ್ಲಿನ ಎಲ್ಲ ಯಂತ್ರೋಪಕರಣ, ಪೀಠೊಪಕರಣಗಳನ್ನು ಬೇರೆ ಇತರ ಸರಕಾರಿ ಸಂಸ್ಥೆಗೆ ಹಸ್ತಾಂತರಿಸಿದ್ದರೆ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ಕಳ್ಳರ ಪಾಲಾಗುವುದು, ತುಕ್ಕು ಹಿಡಿದು ಹೋಗುವುದು ತಪ್ಪುತ್ತಿತ್ತು ಎಂಬುದು ಸ್ಥಳೀಯರ ಅಭಿಪ್ರಾಯವಾಗಿದೆ.
ವಿಟ್ಲ ಐಟಿಐಗೆ ಹಸ್ತಾಂತರಡೇಶ್ವಾಲ್ಯ ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಯಂತ್ರೋಪಕರಣಗಳು ಪಾಳು ಬಿದ್ದಿರುವ ಜತೆಗೆ ಕಳ್ಳರ ಪಾಲಾಗುತ್ತಿರುವ ಮಾಹಿತಿ ಪಡೆದ ವಿಟ್ಲ ಸರಕಾರಿ ಐಟಿಐ ಕಾಲೇಜಿನವರು ಅಲ್ಲಿನ ಯಂತ್ರೋಪಕರಣಗಳು ತಮ್ಮ ಸಂಸ್ಥೆಗೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಅನುಮತಿ ಪಡೆದು 2 ಸೊತ್ತುಗಳನ್ನು ಪಡೆದುಕೊಂಡಿದ್ದರು. *ಕಿರಣ್ ಸರಪಾಡಿ