Advertisement

ಕೈಗಾರಿಕಾ ಉತ್ಪಾದನೆ ಪ್ರಮಾಣ ಏರಿಕೆ; ಹಣದುಬ್ಬರ ಇಳಿಕೆ

09:25 PM May 12, 2021 | Team Udayavani |

ನವದೆಹಲಿ: ದೇಶದಲ್ಲಿ 2ನೇ ಅಲೆಯ ಸವಾಲು ಇದ್ದ ಹೊರತಾಗಿಯೂ ಮಾರ್ಚ್‌ನಲ್ಲಿ ಕೈಗಾರಿಕಾ ಉತ್ಪಾದನೆಯ ಪ್ರಮಾಣ ಶೇ.22.4 ಆಗಿದೆ. ಬರೋಬ್ಬರಿ 2 ತಿಂಗಳ ಬಳಿಕ ಈ ಉತ್ಪಾದನೆ ಪ್ರಮಾಣ ಎರಡಂಕಿಗೆ ತಲುಪಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Advertisement

ಉತ್ಪಾದನಾ ವಲಯ, ಇಂಧನ ಕ್ಷೇತ್ರ, ಗಣಿ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡಲಾಗಿದೆ ರಾಷ್ಟ್ರೀಯ ಸಾಂಖೀಕ ಕಚೇರಿ ತಿಳಿಸಿದೆ.

ಇದೇ ವೇಳೆ, ಚಿಲ್ಲರೆ ಹಣದುಬ್ಬರ ಪ್ರಮಾಣ ಏಪ್ರಿಲ್‌ನಲ್ಲಿ ಶೇ.4.29 ಆಗಿದೆ. ತರಕಾರಿ, ಬೇಳೆಕಾಳುಗಳ ಬೆಲೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಈ ಇಳಿಕೆ ಕಂಡುಬಂದಿದೆ. ಮೂರು ತಿಂಗಳ ಬಳಿಕ ಚಿಲ್ಲರೆ ಹಣದುಬ್ಬರ ಪ್ರಮಾಣ ತಗ್ಗಿದೆ.

ಇದನ್ನೂ ಓದಿ :ಎರಡನೇ ಲಸಿಕೆ ಪಡೆಯುವವರಿಗೆ ಮೊಬೈಲ್ ಮೂಲಕ ಸಂದೇಶ : ಉಡುಪಿ ಜಿಲ್ಲಾಡಳಿತದಿಂದ ಕ್ರಮ

Advertisement

Udayavani is now on Telegram. Click here to join our channel and stay updated with the latest news.

Next