Advertisement
ದ.ಕ. ಜಿ.ಪಂ. ನೇತ್ರಾವತಿ ಸಭಾಂಗಣದಲ್ಲಿ ಸೋಮವಾರ ಅವರು ವಾಣಿಜ್ಯ, ಕೈಗಾರಿಕೆ ಮತ್ತು ನಗರಾಭಿವೃದ್ಧಿ ಇಲಾಖೆಗಳಿಗೆ ಸಂಬಂಧಿಸಿದ ಬಾಕಿ ಭರವಸೆಗಳ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ದರು. ನೀರಿ ಸಂಸ್ಥೆಯು ಮೇ ತಿಂಗಳಿನ ಅಂತ್ಯದೊಳಗೆ ಮಧ್ಯಾಂತರ ಹಾಗೂ ಆಗಸ್ಟ್‌ನಲ್ಲಿ ಅಂತಿಮ ವರದಿ ಸಲ್ಲಿಸುವ ನಿರೀಕ್ಷೆ ಇದೆ ಎಂದರು.
Related Articles
Advertisement
ಎಂಆರ್‌ಪಿಎಲ್‌ನಲ್ಲಿ ಸ್ಥಳೀಯರಿಗೆ ಉದ್ಯೋಗ ದೊರೆಯುತ್ತಿಲ್ಲ, ಕೈಗಾರಿಕೆ ಗಳಿಗೆ ಭೂಮಿ ನೀಡಿದವರಿಗೆ ಸಮ ರ್ಪಕವಾಗಿ ಪರಿಹಾರ ಒದಗಿಸಿಲ್ಲ, ನಿವೇಶನ ದೊರೆಯುತ್ತಿಲ್ಲ ಮುಂತಾದ ಅನೇಕ ದೂರುಗಳು ಸಮಿತಿಯ ಮುಂದೆ ಬಂದಿವೆ. ಇವುಗಳಲ್ಲಿ ಸಾಕಷ್ಟು ದೂರುಗಳು ಇತ್ಯರ್ಥವಾಗಿವೆ, ಎಂಆರ್‌ಪಿಎಲ್‌ನಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವ ಪ್ರಯತ್ನ ನಡೆದಿದೆ. ಉನ್ನತ ಹುದ್ದೆಗಳಿಗೆ ಅರ್ಹತಾ ಪರೀಕ್ಷೆ ಮೂಲಕವೇ ಆಯ್ಕೆ ಮಾಡಲಾಗುತ್ತದೆ ಎಂದು ಕಂಪೆನಿ ಹೇಳುತ್ತಿದೆ ಎಂದರು.
ಕೈಗಾರಿಕಾ ಪ್ರದೇಶದಲ್ಲಿ ಎಸ್ಟಿಪಿಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ತ್ಯಾಜ್ಯ ಸಂಸ್ಕರಣ ಸ್ಥಾವರ (ಎಸ್‌ಟಿಪಿ) ನಿರ್ಮಾಣದ ಬಗ್ಗೆ 4 ತಿಂಗಳಲ್ಲಿ ಡಿಪಿಆರ್ ಸಿದ್ಧಪಡಿಸಿ, ಮಂಡಳಿ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದು ಕಾರ್ಯ ಗತಗೊಳಿಸಲಾಗುವುದು ಎಂದು ಕೆಐಎಡಿಬಿ ಸಿಇಒ ಗಿರೀಶ್ ತಿಳಿಸಿದರು. ಈಡೇರದ ಭರವಸೆಗಳ ಬಗ್ಗೆ ಸಮಿತಿ ಪರಿಶೀಲನೆ ನಡೆಸಿ, ಪ್ರಗತಿ ವೀಕ್ಷಿಸು ತ್ತದೆ. ಸಮಸ್ಯೆ ಇತ್ಯರ್ಥವಾಗದೆ ಕಡತ ಮುಚ್ಚುವುದಿಲ್ಲ ಎಂದು ತಿಳಿಸಿದರು. ಸಮಿತಿಯ ಸದಸ್ಯರಾದ ಆಯನೂರು ಮಂಜುನಾಥ್, ಸುಶೀಲ್ ನಮೋಶಿ, ಎಸ್.ವಿ. ಸಂಕನೂರ, ಎಸ್. ರುದ್ರೇಗೌಡ, ಕೆ.ಎ. ತಿಪ್ಪೇಸ್ವಾಮಿ , ಅಗ್ನಿಶಾಮಕ ಇಲಾಖೆಯ ಎಡಿಜಿಪಿ ಹರಿಶೇಖರನ್, ಕೆಐಎಡಿಬಿ ಸಿಇಒ ಗಿರೀಶ್, ಪರಿಸರ ಇಲಾಖೆಯ ಆಯುಕ್ತ ಗೋಕುಲ್, ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಗಿರಿಧರ್, ಜಿಲ್ಲಾಧಿಕಾರಿ ರವಿಕುಮಾರ್, ಜಿ.ಪಂ. ಸಿಇಒ ಡಾ| ಕುಮಾರ ಉಪಸ್ಥಿತರಿದ್ದರು.