Advertisement
ಶಾಸಕಿ ರೂಪಕಲಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕೆಜಿಎಫ್ ಸಮೀಪ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಹೆದ್ದಾರಿ ಹಾದು ಹೋಗುತ್ತದೆ. ಇಲ್ಲಿ ಕೈಗಾರಿಕಾ ಹಬ್ ಮಾಡುವುದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ. ಹೀಗಾಗಿ ಸರಕಾರ ಕ್ರಮ ಕೈಗೊಂಡಿದೆ ಎಂದರು.
Related Articles
Advertisement
ಬಿಇಎಂಎಲ್ ಖಾಸಗೀಕರಣಕ್ಕೆ ವಿರೋಧ
ಕೆಜಿಎಫ್‌ನಲ್ಲಿರುವ ಬಿಇಎಂಎಲ್ ಸಂಸ್ಥೆ ಲಾಭದಲ್ಲಿದ್ದರೂ ಕೇಂದ್ರ ಸರಕಾರ ಖಾಸಗಿಗೆ ನೀಡಲು ಮುಂದಾಗಿದೆ. ರಾಜ್ಯಾದ್ಯಂತ 11,300 ಸಾವಿರ ಬಿಇಎಂಎಲ್ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಲಾಭದಲ್ಲಿದ್ದರೂ ಕೇಂದ್ರ ಸರಕಾರ ಇದನ್ನು ಖಾಸಗೀಕರಣಗೊಳಿಸಲು ಮುಂದಾಗಿದೆ. ತಿಂಗಳಿಗೆ ನೂರಾರು ಕೋಟಿ ಹಾಗೂ ವರ್ಷಕ್ಕೆ ಸಾವಿರಾರು ಕೋಟಿ ರೂ. ಲಾಭ ಬರುತ್ತದೆ. ಇಲ್ಲಿರುವ ಬಂಡವಾಳವನ್ನು ಹಿಂದೆಗೆಯಲು ಕೇಂದ್ರ ಸರಕಾರ ಹುನ್ನಾರ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಚರ್ಚೆಗೆ ಆಗ್ರಹಿಸಿದರು. ಆದರೆ, ಪ್ರಶ್ನೋತ್ತರ ವೇಳೆಯಲ್ಲಿ ಚರ್ಚೆಗೆ ಅವಕಾಶ ಇಲ್ಲ ಎಂದು ಸ್ಪೀಕರ್ ತಿಳಿಸಿದರು.