Advertisement

ಕೈಗಾರಿಕಾ ಪ್ರದೇಶದ ರಸ್ತೆ ಕಾಮಗಾರಿಗೆ ಚಾಲನೆ

05:55 PM Jan 14, 2020 | Suhan S |

ಮಾಗಡಿ: ಸೋಮೇಶ್ವರಸ್ವಾಮಿ ಗುಡಿ ಕಾಲೋನಿಯ ಕೈಗಾರಿಕಾ ಪ್ರದೇಶದ ರಸ್ತೆ ಡಾಂಬರೀಕರಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ್ದಾಗಿ ಶಾಸಕ ಎ. ಮಂಜುನಾಥ್‌ ಹೇಳಿದರು.

Advertisement

ಪಟ್ಟಣದ ಸೋಮೇಶ್ವರಸ್ವಾಮಿ ಗುಡಿ ಕಾಲೋ ನಿಯ ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿ ಕೋಟಿ ರೂ. ವೆಚ್ಚ ರಸ್ತೆ ಡಾಂಬರೀ ಕರಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಮಾಗಡಿ ಕುಣಿಗಲ್‌ ರಸ್ತೆ ಅಗ್ನಿಶಾಮಕ ದಳದ ಸಂಪರ್ಕ ರಸ್ತೆ ಗಳ ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಗುಣಮ ಟ್ಟದ ರಸ್ತೆ ಕಾಮಗಾರಿ ಚಾಲನೆ ನೀಡಿದ್ದೇನೆ ಎಂದರು.

ಬೀದಿ ದೀಪ ಅಳವಡಿಸಲು ಮನವಿ: ನೀರಿನ ಸಮಸ್ಯೆ ನಿವಾರಣೆಗಾಗಿ ಕೊಳವೆಬಾವಿ ಕೊರೆಸಲಾಗುತ್ತಿದೆ. ಜೊತೆಗೆ ಬೀದಿ ದೀಪ ಅಳವಡಿಸಿಕೊಡುವಂತೆ ಅವಕಾಶ ಮಾಡಿಕೊಡಲಾಗಿದೆ. ಕಂದಾಯ ಇಲಾಖೆ ಪಹಣಿಯ ಬೆಳೆ ಕಾಲಂನಲ್ಲಿ ಬೆಳೆ ಹೆಸರು ನಮೂದಿಸಿಲ್ಲ, ಈ ಸಂಬಂಧ ಅಧಿಕಾರಿಗಳು ಸಮಯ ಕೇಳಿದ್ದರೆ. ರಾಗಿ ಬೆಳೆದ ರೈತರ ಪಹಣಿ ಕಾಲಂನಲ್ಲಿ ವಾರದೊಳಗೆ ಬೆಳೆ ನಮೂನೆ ಮಾಡಿಕೊಡು ವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಅಷ್ಟರೊಳಗೆ ಆಗದಿದ್ದರೂ. ಸಹ ರಾಗಿ ಖರೀದಿಗೆ ನೋಂದಾಯಿಸಿಕೊಳ್ಳಲು ಸೂಚನೆ ನೀಡಿದ್ದೇನೆ. ಕಂದಾಯ ಸಚಿವರಲ್ಲಿಯೂ ಮನವಿ ಮಾಡಿದ್ದೇನೆ ಎಂದು ವಿವರಿಸಿದರು.

ಶೇ.80 ರಷ್ಟು ಭೂಸ್ವಾಧೀನ: ಕೈಗಾರಿಕಾ ಪ್ರದೇಶ ಸ್ಥಾಪನೆ ಪ್ರಪೋಸ್‌ ಮಾಡಿ ಮೃತ್ರಿ ಸರ್ಕಾರದಲ್ಲಿ ಎಚ್ಡಿಕೆಗೆ ಮನವಿ ಸಲ್ಲಿಸಿದ್ದೆ. ಕಲ್ಯಾ ಸುತ್ತಮುತ್ತ ಭೂ ಸ್ವಾಧೀನ ಮಾಡಿಕೊಳ್ಳಲು ಅಧಿಕಾರಿಗಳಿಗೂ ಸೂಚನೆ ನೀಡಿದ್ದೆ, ಅನುಷ್ಠಾನ ಕುರಿತು ಆದೇಶ ಬಂದರೆ ಕ್ರಮ ಕೈಗೊಳ್ಳಲಾ ಗುವುದು. ಕೆಶಿಫ್ ರಸ್ತೆ ವಿಳಂಗೊಂಡಿದೆ ಎಂದು ಪ್ರಶ್ನೆಗೆ ಈಗಾಗಲೇ ಸೋಮವಾರ ಪೇಟೆ ಮಾರ್ಗದ ರಸ್ತೆ ಕಾಮಗಾರಿ ಆರಂಭಗೊಂಡಿದೆ. ಬೆಂಗಳೂರು ಮಾಗಡಿ ಮಾರ್ಗದ ಶೇ.80 ರಷ್ಟು ಭೂಸ್ವಾಧೀನಗೊಂಡಿದ್ದು, ಪಟ್ಟಣದ ಅಲ್ಲಿಲ್ಲಿ ಶೇ.10 ಭೂಸ್ವಾಧೀನ ಬಾಕಿ ಯಿದ್ದು, ಪೂರ್ಣಗೊಳಿಸಿ ಈ ಭಾಗದಿಂದಲೂ ರಸ್ತೆ ಕಾಮಗಾರಿ ಆರಂಭಿಸಲು ಕಂಪನಿದಾರರಿಗೆ ಸೂಚನೆ ನೀಡಿದ್ದೇನೆ. ಆದಷ್ಟು ಬೇಗ ಕಾಮಗಾರಿ ಆರಂಭಗೊಳ್ಳಲಿದೆ. ಅಲ್ಲಿಯವರೆಗೂ ರಸ್ತೆ ಗುಂಡಿ ಮುಚ್ಚುವ ಕಾಮಗಾರಿ ನಿರ್ವಹಣೆ ಮಾಡಬೇಕೆಂದು ತಾಕೀತು ಮಾಡಿದ್ದೇನೆ ಎಂದು ತಿಳಿಸಿದರು.

ಜಿಪಂ ಸದಸ್ಯ ಚಂದ್ರಮ್ಮ ನಂಜಯ್ಯ, ಪುರಸಭಾ ಸದಸ್ಯರಾದ ಎಂ.ಎನ್‌.ಮಂಜುನಾಥ್‌, ಕೆ.ವಿ. ಬಾಲು, ರಹಮತ್‌, ಜಯರಾಂ, ವಿಜಯ ರೂ.ಪೇಶ್‌, ಹೇಮಲತಾ ನಾಗರಾಜು, ಸೀಗೇಕುಪ್ಪೆ ಶಿವಣ್ಣ, ನರಸಿಂಹಯ್ಯ, ಎಪಿಎಂಸಿ ನಿರ್ದೇಶಕ ಕೆ.ಟಿ.ಮಂಜುನಾಥ್‌, ವೆಂಕಟೇಶ್‌, ನೇತೇನಹಳ್ಳಿ ಪಿಡಿಒ ಶಿವಕುಮಾರ್‌, ಕಾರ್ಯದರ್ಶಿ ನಾಗರಾಜು, ಶಂಕರ್‌, ಜುಟ್ಟನಹಳ್ಳಿ ಮಾರೇಗೌಡ,ಅಗ್ನಿಶಾಮಕ ದಳದ ಅಧಿಕಾರಿ ರೇವಣ್ಣ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next