Advertisement

ಮಾಜಿಗಳದ್ದು ಮುಗಿದಿದೆ; ಹಾಲಿಗಳದ್ದು ಪ್ರಗತಿಯಲ್ಲಿದೆ

10:19 AM Feb 24, 2020 | Team Udayavani |

ಮಾಜಿ ಸದಸ್ಯರಿಗೆ ಕೇಳಿದ ಪ್ರಶ್ನೆಗಳು
1 ನಿಮ್ಮ ಪ್ರದೇಶದ ಸಮಸ್ಯೆಯ ಗಂಭೀರತೆ ಅರಿವಿಗೆ ಬಂದಿದೆಯೇ?
2 ಹಾಗಾದರೆ ಈ ಸಮಸ್ಯೆ ನಿವಾರಣೆಗೆ ಯಾವ್ಯಾವ ರೀತಿ ಪ್ರಯತ್ನಿಸಿದ್ದೀರಿ?
3 ಎಷ್ಟು ಬಾರಿ ನಗರಸಭೆಯ ಸಾಮಾನ್ಯ ಸಭೆಗಳಲ್ಲಿ ಪ್ರಸ್ತಾವಿಸಿದ್ದೀರಿ? ಪರಿಹಾರಕ್ಕೆ ಆಗ್ರಹಿಸಿದ್ದೀರಿ?
4 ಈ ಸಮಸ್ಯೆ ನಿವಾರಣೆಗೆ ಸಭೆಯಲ್ಲಿ ಪ್ರಸ್ತಾವ ಹಾಗೂ ಪ್ರತಿಭಟನೆ ಹೊರತುಪಡಿಸಿ
ಇನ್ಯಾವ ರೀತಿಯ ಪ್ರಯತ್ನ ಮಾಡಿದ್ದೀರಿ?
5 ನಿಮ್ಮ ಪ್ರದೇಶದ ಸಮಸ್ಯೆ ಪೀಡಿತ ಸಂತ್ರಸ್ತರಿಗೆ ನಿಮ್ಮ ಅವಧಿಯಲ್ಲಿ
ಯಾವ ರೀತಿಯ ಅನುಕೂಲಕರ ಕ್ರಮ ಕೈಗೊಂಡಿದ್ದೀರಿ?

Advertisement

ಹಾಲಿ ಸದಸ್ಯರಿಗೆ ಕೇಳಿದ ಪ್ರಶ್ನೆಗಳು
1 ನೀವು ಗೆದ್ದ ಮೇಲೆ (ಚುನಾವಣೆ ಪ್ರಚಾರ ಸಂದರ್ಭ ಬಿಟ್ಟು)
ಎಷ್ಟು ಬಾರಿ ನಿಮ್ಮ ಪ್ರದೇಶದ ಸಮಸ್ಯೆ ಪೀಡಿತ ಭಾಗಕ್ಕೆ ತೆರಳಿದ್ದೀರಿ?
2 ಆ ಬಳಿಕ ಸಮಸ್ಯೆ ನಿವಾರಣೆಗೆ ಯಾವ ರೀತಿ ಪ್ರಯತ್ನ ಮಾಡಿದ್ದೀರಿ?
3 ಆಡಳಿತ ಮಂಡಳಿ ಇಲ್ಲ. ಆದರೆ ನಗರಸಭೆ ಪೌರಾಯುಕ್ತರ/ಜಿಲ್ಲಾಧಿಕಾರಿಗಳ ಗಮನ ಸೆಳೆಯಲು ಎಷ್ಟು ಬಾರಿ ಪ್ರಯತ್ನಿಸಿದ್ದೀರಿ? ಅದರ ಪರಿಣಾಮವೇನಾದರೂ ಆಗಿದೆಯ?
4 ನಿಮ್ಮ ಪ್ರದೇಶದ ಸಂತ್ರಸ್ತರ ಆರೋಗ್ಯ ನೆಲೆಯಲ್ಲಿ ಉಚಿತ ತಪಾಸಣಾ ಶಿಬಿರ ಇತ್ಯಾದಿ
ಏನನ್ನಾದರೂ ಆಯೋಜಿಸಿದ್ದೀರಾ? ಪರಿಣಾಮವೇನು?

ನಿಟ್ಟೂರು ವಾರ್ಡ್‌
– ಸಮಸ್ಯೆ ಬಗ್ಗೆ ಅರಿವು ಇತ್ತು.
– ಅಂದಿನ ಶಾಸಕರಿಗೆ ಇಂದ್ರಾಣಿ ಹಾಗೂ ಡ್ರೈನೇಜ್‌ ಪೈಪ್‌ಲೈನ್‌ನಿಂದ ನಿಟ್ಟೂರು ವಾರ್ಡ್‌ಗೆ ಆಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಮನವಿ ಸಲ್ಲಿಸಲಾಗಿತ್ತು.
– ಸಾಮಾನ್ಯಸಭೆಯಲ್ಲಿ ನಾನು ಸಹಿತ ಇತರ ವಾರ್ಡ್‌ಗಳ ಸದಸ್ಯರು ಮಾತನಾಡಿದ್ದೇವೆ.
– ಮ್ಯಾನ್‌ಹೋಲ್‌ಗ‌ಳನ್ನು ಸ್ವತ್ಛಗೊಳಿಸಲಾಗಿತ್ತು. ಬಾವಿ ನೀರು ಪರೀಕ್ಷೆಗೆ ಕಳಿಸಲಾಗಿತ್ತು. ಅಗತ್ಯ ವಿರುವ ಕಡೆ ನಲ್ಲಿ ಸಂಪರ್ಕ ನೀಡಲಾಗಿತ್ತು.
– ಡ್ರೈನೇಜ್‌ ನೀರಿನಿಂದ ಹಾಳಾದ ಬಾವಿಗಳನ್ನು ದುರಸ್ತಿ ಮಾಡಲಾಗಿದೆ.

ಸಾಮಾನ್ಯ ಸಭೆಯಲ್ಲಿ ಹಲವು ಬಾರಿ ಪ್ರಸ್ತಾವಿಸಿ ದ್ದರೂ ಯಾವ ಪ್ರಗತಿ ಯಾಗಿಲ್ಲ. ಮ್ಯಾನ್‌ಹೋಲ್‌ ಸ್ವಚ್ಛಗೊಳಿಸಿ, ಬಾವಿ ನೀರು ಪರಿಶೀಲಿಸಲಾಗಿತ್ತು.
-ರಶ್ಮಿತಾ ಬಾಲಕೃಷ್ಣ ಶೆಟ್ಟಿ  , (2013- 18)

– ಸಮಸ್ಯೆ ಭೀಕರತೆ ಅರಿವು ಇತ್ತು. ಪ್ರಾರಂಭಿಕ ಹಂತದಿಂದ ಹೋರಾಟ ಮಾಡಿಕೊಂಡು ಬಂದಿದ್ದೇನೆ.
– ವೆಟ್‌ವೆಲ್‌ ಉಸ್ತುವಾರಿ ನೋಡಿಕೊಳ್ಳುತ್ತಿದ್ದೆ. ನಿತ್ಯ ವಿವಿಧ ವೆಟ್‌ವೆಲ್‌, ಎಸ್‌ಟಿಪಿಗಳಿಗೆ ಭೇಟಿ ನೀಡಿ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತಿದ್ದೆ.
– ಪ್ರತಿಯೊಂದು ಸಭೆಯಲ್ಲಿ ಸಹ ಯುಜಿಡಿ ಸಮಸ್ಯೆ ಬಗ್ಗೆ ಅಧಿಕಾರಗಳ ಗಮನಕ್ಕೆ ತಂದಿದ್ದೇನೆ.
– ಅಧಿಕಾರಿಗಳಿಗೆ, ಪರಿಸರ ಎಂಜಿಯರ್‌ಗಳಿಗೆ ಮನವಿ ಸಲ್ಲಿಸಿದ್ದೇನೆ.
– ಮನೆಗಳ ಬಾವಿ ದುರಸ್ತಿ ಹಾಗೂ ನಲ್ಲಿ ನೀರಿನ ಸಂಪರ್ಕ ನೀಡಲಾಗಿದೆ.

Advertisement

ಸ್ಥಳೀಯ ಸಮಸ್ಯೆಯ ಭೀಕರತೆ ಅರಿವಿಗೆ ಬಂದ ಕೂಡಲೇ ಅದರ ನಿವಾರಣೆಗೆ ನಗರಸಭೆ ಅಧಿಕಾರಿಗಳನ್ನು ಆಗ್ರಹಿಸಿದ್ದೇವೆ. ಆದರೆ ಸಮಸ್ಯೆ ಬಗೆಹರಿದಿಲ್ಲ.
-ರವಿ ಅಮೀನ್‌, (2003-08) ಬನ್ನಂಜೆ ವಾರ್ಡ್‌ ಮಾಜಿ ಸದಸ್ಯ.

ಬನ್ನಂಜೆ ವಾರ್ಡ್‌
ನಮ್ಮ ಪ್ರಶ್ನೆಗೆ ಅವರ ಉತ್ತರ

– ಈ ಸಮಸ್ಯೆ ಬಗ್ಗೆ ಆಳವಾದ ಅರಿವಿತ್ತು.
– ನಿರಂತರವಾಗಿ ನಗರಸಭೆ ಆಡಳಿತ ಪಕ್ಷ ಹಾಗೂ ಅಧಿಕಾರಿಗಳನ್ನು ಸಂಪರ್ಕಿಸಿ ಪರಿಹಾರಕ್ಕಾಗಿ ಪ್ರಯತ್ನ ಪಟ್ಟಿದ್ದೇನೆ.
– ಸಾಮಾನ್ಯ ಸಭೆಯಲ್ಲಿ ಯುಜಿಡಿ ಬಗ್ಗೆ ಅನೇಕ ಬಾರಿ ಧ್ವನಿ ಎತ್ತಿ, ಪರಿಹಾರ ನೀಡುವಂತೆ ಆಗ್ರಹಿಸಿದ್ದೆ.
– ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಅನೇಕ ಬಾರಿ ಸಮಸ್ಯೆ ಕುರಿತು ಮನವಿ ಮಾಡಲಾಗಿತ್ತು.
– ಬಾವಿ ನೀರು ಹಾಳಾದವರಿಗೆ ನಳ್ಳಿ ನೀರಿನ ಸಂಪರ್ಕ ಕಲ್ಪಿಸಲಾಗಿತ್ತು.

ಸಮಸ್ಯೆ ಕುರಿತು ಅರಿವಿದ್ದು, ಅಧಿಕಾರಿಗಳನ್ನು ಸಂಪರ್ಕಿಸಿ ಬಗೆಹರಿಸುವಂತೆಯೂ ಆಗ್ರಹಿಸಿದ್ದೆ. ಆದರೆ, ಇನ್ನೂ ಬಗೆಹರಿದಿಲ್ಲ.
-ಹರೀಶ್‌ ರಾಮ, ( 2013-18)

ಕಲ್ಮಾಡಿ ವಾರ್ಡ್‌
– ಈ ಹಿಂದೆ ತುಂಬಾ ದೊಡ್ಡ ಸಮಸ್ಯೆ ಇತ್ತು. ಅದರ ಬಗ್ಗೆ ಸಂಪೂರ್ಣ ಅರಿವಿದೆ.
– ನಿತ್ಯ ನಗರಸಭೆ ಅಧಿಕಾರಿಗಳೊಂದಿಗೆ ಕಿತ್ತಾಟ ಮಾಡುತ್ತಿದ್ದೆ. ಸಮಸ್ಯೆ ಪರಿಹಾರ ಆಗುವವರೆಗೂ ಬಿಡುತ್ತಿರಲಿಲ್ಲ.
– ಲೆಕ್ಕವಿಲ್ಲದಷ್ಟು ಬಾರಿ ಸಮಸ್ಯೆಯ ಬಗ್ಗೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ್ದೇನೆ. ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿದ್ದೇನೆ.
– ತ್ಯಾಜ್ಯ ಸಮಸ್ಯೆ ಪೀಡಿತ ಪ್ರದೇಶಕ್ಕೆ ತೆರಳಿ ಜನರ ಸಮಸ್ಯೆ ಆಲಿಸಿದ್ದೇನೆ. ಎಸ್‌ಟಿಪಿನಲ್ಲಿ ಕೊಳಚೆ ನೀರು ಶುದ್ಧೀಕರಿಸಿ ಬರುವ ಸಂದರ್ಭದಲ್ಲಿ ವಾಸನೆ ಬಾರದಂತೆ ಕ್ರಮವಹಿಸಲಾಗಿತ್ತು.
– ಆರೋಗ್ಯ ಇಲಾಖೆ ಮೂಲಕ ಅರಿವು ಮೂಡಿಸಲಾಗಿದೆ.

ಈ ಹಿಂದೆಯಿಂದಲೂ ಈ ಸಮಸ್ಯೆ ನಮ್ಮನ್ನು ಕಾಡುತ್ತಿದೆ. ಲೆಕ್ಕವಿಲ್ಲದಷ್ಟು ಬಾರಿ ಸಮಸ್ಯೆಯ ಬಗ್ಗೆ ಸಾಮಾನ್ಯ ಸಭೆಯಲ್ಲಿ ಮಾತನಾಡಿದ್ದೇನೆ. ಸಮಸ್ಯೆ ಬಗೆಹರಿಸಲೂ ಮನವಿ ಮಾಡಿದ್ದೇನೆ.
-ಇಂದಿರಾ, ( 2008-13)

ಕಲ್ಮಾಡಿ ವಾರ್ಡ್‌
– ನಿತ್ಯ ವಾರ್ಡ್‌ನ ವಿವಿಧ ಭಾಗಗಳಿಗೆ ತೆರಳಿ ಸಮಸ್ಯೆಗಳ ಅವಲೋಕನ ಮಾಡುತ್ತಿದ್ದೇನೆ.
– ಶಾರದಾ ಹೊಟೇಲ್‌ ಬಳಿಯ ವೆಟ್‌ವೆಲ್‌ ತ್ಯಾಜ್ಯ ನೀರು ನೇರವಾಗಿ ನದಿಗೆ ಬಿಡದಂತೆ ಅನೇಕ ಬಾರಿ ವಿನಂತಿಸಿದ್ದೇನೆ. ವಾರ್ಡ್‌ನ 168 ಮನೆಗಳಿಗೆ ಡ್ರೈನೇಜ್‌ ಸಂಪರ್ಕ ನೀಡಿಲ್ಲ. ಅವರಿಗೆ ಪರ್ಯಾಯ ವ್ಯವಸ್ಥೆಯಾಗಿ ಪಿಟ್‌ ನಿರ್ಮಿಸುವಂತೆ ನಗರಸಭೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ.
– ಪೌರಾಯುಕ್ತರಿಗೆ, ಜಿಲ್ಲಾಧಿಕಾರಿ, ಪರಿಸರ ಎಂಜಿನಿಯರಿಗೆ ಹಲವು ಬಾರಿ ಸಮಸ್ಯೆ ಕುರಿತು ಮನವಿ ಮಾಡಲಾಗಿದೆ. ಆದರೆ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ.
– ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿದೆ. ಜನರಿಗೆ ಅನುಕೂಲವಾಗುವಂತೆ ಉಚಿತ ಆರೋಗ್ಯ ಕಾರ್ಡ್‌ ವಿತರಿಸಲಾಗಿದೆ.
– ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸುವ ಅನಿವಾರ್ಯತೆ ಬಂದಿಲ್ಲ. ಏಕೆಂದರೆ ಇಲ್ಲಿನ ಬಾವಿ ನೀರು ಉಪ್ಪು. ಕುಡಿಯಲು ಸಾಧ್ಯವಿಲ್ಲ.

ಈಗಾಗಲೇ ಜಿಲ್ಲಾಧಿಕಾರಿ, ಪೌರಾಯುಕ್ತರು ಹಾಗೂ ಪರಿಸರ ಅಧಿಕಾರಿಗೆ ಮನವಿ ಸಲ್ಲಿಸಿದ್ದೇನೆ.
ಆರೋಗ್ಯ ಶಿಬಿರವನ್ನೂ ಏರ್ಪಡಿಸಿದ್ದೇನೆ.
-ಸುಂದರ ಜೆ., ನಗರಸಭಾ ಸದಸ್ಯ

ನಿಟ್ಟೂರು ವಾರ್ಡ್‌
ನಮ್ಮ ಪ್ರಶ್ನೆಗೆ ಅವರ ಉತ್ತರ

– ನಿತ್ಯ ಭೇಟಿ ನೀಡುತ್ತೇನೆ.
– ಮಠದ ಬೆಟ್ಟುವಿನಿಂದ ನಿಟ್ಟೂರು ಎಸ್‌ಟಿಪಿಗೆ ಬರುವ ಪೈಪ್‌ ಲೈನ್‌ ಸಂಪೂರ್ಣ
ಹಾಳಾಗಿದ್ದು, ಅದನ್ನು ಬದಲಾಯಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಮಠದ ಬೆಟ್ಟು ವೆಟ್‌ವೆಲ್‌ನಿಂದ ಕೊಳಚೆ ನೀರು ನದಿಗೆ ಬಿಡದಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇನೆ.
– ಸಮಸ್ಯೆ ಕುರಿತು ಪರಿಸರ ಎಂಜಿನಿಯರ್‌ಗೆ ನಿತ್ಯ ಕರೆ ಮಾಡುತ್ತೇನೆ. ಜಿಲ್ಲಾಧಿಕಾರಿ, ಪೌರಾಯುಕ್ತರಿಗೆ ಮನವಿಯನ್ನು ನೀಡಿದ್ದೇನೆ. ಆದರೆ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ.
– ತಿಂಗಳಿಗೊಮ್ಮೆ ವಿವಿಧ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಉಚಿತ ಆರೋಗ್ಯ ಶಿಬಿರ ಮಾಡುತ್ತಿದ್ದೇನೆ. ಇದರಲ್ಲಿ ಸಂತ್ರಸ್ತರಿಗೂ ವಿಶೇಷ ವ್ಯವಸ್ಥೆ ಮಾಡಲಾಗಿದೆ.

ಇಂದ್ರಾಣಿ ನದಿಯಲ್ಲಿ ಹರಿಯುತ್ತಿರುವ ತ್ಯಾಜ್ಯ ನೀರಿನಿಂದ ಹಾಗೂ ವೆಟ್‌ವೆಲ್‌ ಮೂಲಕ ಎಸ್‌ಟಿಪಿಗೆ ಹೋಗುವ ಕೊಳಚೆ ನೀರಿನ ಪೈಪ್‌ ಲೈನ್‌ ಒಡೆದು ಹೋಗುತ್ತಿರುವುದರಿಂದ ನನ್ನ ವಾರ್ಡ್‌ನ ಬಾವಿಗಳು ಹಾಳಾಗಿವೆ. ನಿತ್ಯವೂ ಸಾರ್ವಜನಿಕರ ಕರೆ ಬರುತ್ತದೆ.
ಅಧಿಕಾರಿಗಳಿಗೆ ಕರೆ ಮಾಡಿದರೂ
ಪ್ರಯೋಜನವಿಲ್ಲ.
-ಸಂತೋಷ್‌ ಜತ್ತನ್‌, ನಗರಸಭಾ ಸದಸ್ಯ

ಬನ್ನಂಜೆ ವಾರ್ಡ್‌
– ಹಲವು ಬಾರಿ ಭೇಟಿ ನೀಡಿದ್ದೇನೆ.
– ನಗರಸಭೆ ಅಧಿಕಾರಿಗಳಿಗೆ ಸಮಸ್ಯೆ ಪರಿಹರಿಸುವಂತೆ ಅನೇಕ ಬಾರಿ ಒತ್ತಡ ಹೇರಲಾಗಿದೆ. ಆದರೆ ಯಾವುದೇ ಪ್ರಯೋಜನವಾಗುತ್ತಿಲ್ಲ.
–  ಹಿಂದಿನ ಜಿಲ್ಲಾಧಿಕಾರಿ ಹಾಗೂ ಈಗಿನ ಪೌರಾಯುಕ್ತರಿಗೆ ಸಮಸ್ಯೆ ತೀವ್ರತೆ ಬಗ್ಗೆ ಗಮನಕ್ಕೆ ತರಲಾಗಿದೆ. ಅದರ ಪರಿಣಾಮವಾಗಿ ಇಂದು ಇಂದ್ರಾಣಿ ನದಿ ಸ್ವತ್ಛತಾ ಕಾರ್ಯ ಪ್ರಾರಂಭವಾಗಿದೆ.
– ಆರೋಗ್ಯ ಇಲಾಖೆಯಿಂದ ಒಮ್ಮೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಗಿದೆ. ಸಂತ್ರಸ್ತರಿಗೆ
ಪ್ರತ್ಯೇಕವಾಗಿ ನಡೆದಿಲ್ಲ.

ನಗರಸಭೆಯ ಅಧಿಕಾರಿಗಳ ಮೇಲೆ ಸಮಸ್ಯೆ ನಿವಾರಿಸುವಂತೆ ಹಲವು ಬಾರಿ ಒತ್ತಡ ಹೇರುವ ಪ್ರಯತ್ನ ಮಾಡಿದ್ದೇನೆ. ಆದರೆ ಪ್ರಯೋಜನ ವಾಗುತ್ತಿಲ್ಲ. ಇತ್ತೀಚೆಗಷ್ಟೇ ನದಿ ಸ್ವತ್ಛತಾ ಕಾರ್ಯ ಆರಂಭವಾಗಿದೆ.
-ಸವಿತಾ ರಾಮ , ನಗರಸಭಾ ಸದಸ್ಯೆ

Advertisement

Udayavani is now on Telegram. Click here to join our channel and stay updated with the latest news.

Next