Advertisement
ಹಲವಾರು ವರ್ಷಗಳಿಂದ ಅನುದಾನದ ಕೊರತೆ ಇಲ್ಲ, ತಾಂತ್ರಿಕ ಸಮಸ್ಯೆ, ರೈಲ್ವೇ ಇಲಾಖೆ ಅಡ್ಡಿ ಮೊದಲಾದ ಕಾರಣಗಳನ್ನು ನೀಡುತ್ತ ಬರಲಾಗುತ್ತಿದೆ. ಬೃಹತ್ ಯೋಜನೆಗಳಿಗೆ ಕೆಲವೇ ದಿನಗಳಲ್ಲಿ ಅನುಮೋದನೆ ಸಿಗುವ ಕಾಲಘಟ್ಟದಲ್ಲಿ ಇನ್ನೂ ಸಹ 58 ಮೀಟರ್ ಸೇತುವೆ ಯೋಜನೆ ಪೂರ್ಣಗೊಳಿಸಲು ವರ್ಷಾನುಗಟ್ಟಲೆ ತೆಗೆದುಕೊಳ್ಳುತ್ತಿರುವುದು ಏಕೆ ಎಂಬ ಪ್ರಶ್ನೆ ಕೇಳಿ ಬರುತ್ತಿದೆ.
ಇಂದ್ರಾಳಿ ಹೊಸ ರೈಲ್ವೇ ಸೇತುವೆ ನಿರ್ಮಿಸಲು ಹೆದ್ದಾರಿ ಸಚಿವಾಲಯ ಇನ್ನೂ ಹಣಕಾಸು ಅನು ಮೋದನೆಯನ್ನೂ ನೀಡಿಲ್ಲ ಎಂದು ಹೆದ್ದಾರಿಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ. ಈ ಸೇತುವೆ ಅನುಮೋದನೆಗಾಗಿ ವಿಳಂಬವಾಗುತ್ತಿರುವ ನಡುವೆ ಜನರಿಗೆ ಓಡಾಟಕ್ಕೆ ಸಮಸ್ಯೆಯಾಗಬಾರದು ಎಂಬ ನೆಲೆಯಲ್ಲಿ ಪ್ರಸ್ತುತ ಇರುವ ಹಳೆ ಸೇತುವೆ ಮತ್ತು ರಸ್ತೆ ಕಾಮಗಾರಿ ಪೂರ್ಣಗೊಳಿಸಲು ನಿರ್ಧರಿಸಿದಂತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಆರಂಭದಲ್ಲಿ ಹಳೆಯ ಸೇತುವೆಯಂತೆ 36 ಮೀಟರ್ ಉದ್ದದ ಸೇತುವೆ ಯೋಜನೆ ಸಿದ್ಧಪಡಿಸಲಾಗಿತ್ತು. ಅದರಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾಮಗಾರಿಗೆ ಮುಂದಾದಾಗ ರೈಲ್ವೇ ಇಲಾಖೆ ತಮ್ಮ ಜಾಗದಲ್ಲಿ ಪಿಲ್ಲರ್ ಅಳವಡಿಸದಂತೆ, ಕಾಮಗಾರಿ ನಡೆಸದಂತೆ ಆಕ್ಷೇಪ ಮಾಡಿತ್ತು. ಸೇತುವೆ ಉದ್ದವನ್ನು ಹೆಚ್ಚಿಸುವಂತೆ ಸೂಚಿಸಿ ರೈಲ್ವೇ ಇಲಾಖೆಯಿಂದಲೇ ಹೊಸ ವಿನ್ಯಾಸವನ್ನು 36 ಮೀಟರ್‌ನಿಂದ 58 ಮೀಟರ್‌ಗೆ ಸಿದ್ಧಪಡಿಸಿದ್ದು, ಇದಕ್ಕೆ ರೈಲ್ವೇ ಸುರಕ್ಷತ ಪ್ರಾಧಿಕಾರವು ಒಪ್ಪಿಗೆ ಸೂಚಿಸಿತ್ತು. ಈ ವೇಳೆ ಬದಲಾದ ವಿನ್ಯಾಸದ ಡಿಪಿಆರ್ ಪ್ರಕಾರ ನಿರ್ಮಾಣ ವೆಚ್ಚ ದುಪ್ಪಟ್ಟಾಗಿತ್ತು.
Related Articles
Advertisement
ಶೀಘ್ರ ಅನುಮೋದನೆಇಂದ್ರಾಳಿ ರೈಲ್ವೇ ಬ್ರಿಡ್ಜ್ ಕಾಮಗಾರಿ ಸಂಬಂಧ ಈಗಾಗಲೇ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿಯವರ ಗಮನಕ್ಕೆ ತರಲಾಗಿದೆ. ಹೊಸದಾಗಿ ಹೋಗಿರುವ ಪ್ರಸ್ತಾವನೆಗೆ ಶೀಘ್ರ ಅನುಮೋದನೆ ಸಿಗಲಿದೆ. ಇದಾದ ಅನಂತರದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಾಮಗಾರಿ ಮುಂದುವರಿಸಲಿದೆ. ರೈಲ್ವೇ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಮನ್ವಯದ ಕೊರತೆ ಹಾಗೂ ಕೆಲವು ತಾಂತ್ರಿಕ ಕಾರಣದಿಂದ ವಿಳಂಬ ಆಗುತ್ತಿದೆ. ರೈಲ್ವೇ ಇಲಾಖೆ ಹಾಗೂ ಪ್ರಾಧಿಕಾರದ ಅಧಿಕಾರಿಗಳು ಸೇರಿ ಕೂಡಲೇ ಸಮಸ್ಯೆ ಬಗೆಹರಿಸಬೇಕು.
-ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ